ಲೋಕಾಯುಕ್ತರು ತೆಗೆದುಕೊಂಡು ಹೋಗಿದ್ದು ಭ್ರಷ್ಟಾಚಾರದ ಹಣವಲ್ಲ, ನಮ್ಮ ಹಣ
ನಮ್ಮ ಹಣವನ್ನ ಲೋಕಾಯುಕ್ತರು ತೆಗೆದುಕೊಂಡು ಹೋಗಿದ್ದಾರೆ, ಆ ಹಣವನ್ನ ವಾಪಾಸ್ ಪಡೆಯುತ್ತೇವೆ. ಅದು ಭ್ರಷ್ಟಾಚಾರದ ಹಣವಲ್ಲ. ನಾವು ದಾಖಲೆಗಳನ್ನ ಅವರಿಗೆ ನೀಡುತ್ತೇವೆ ಎಂದು ಚನ್ನಗಿರಿ ತಾಲೂಕಿನ ಚನ್ನೇಶಪುರದಲ್ಲಿ ಮಾಡಾಳ ವಿರುಪಾಕ್ಷಪ್ಪ ಹೇಳಿಕೆ ನೀಡಿದರು.
ದಾವಣಗೆರೆ : ನಮ್ಮ ಹಣವನ್ನ ಲೋಕಾಯುಕ್ತರು ತೆಗೆದುಕೊಂಡು ಹೋಗಿದ್ದಾರೆ, ಆ ಹಣವನ್ನ ವಾಪಾಸ್ ಪಡೆಯುತ್ತೇವೆ. ಅದು ಭ್ರಷ್ಟಾಚಾರದ ಹಣವಲ್ಲ. ನಾವು ದಾಖಲೆಗಳನ್ನ ಅವರಿಗೆ ನೀಡುತ್ತೇವೆ ಎಂದು ಚನ್ನಗಿರಿ ತಾಲೂಕಿನ ಚನ್ನೇಶಪುರದಲ್ಲಿ ಮಾಡಾಳ ವಿರುಪಾಕ್ಷಪ್ಪ ಹೇಳಿಕೆ ನೀಡಿದರು.
ಜಾಮೀನು ಸಿಕ್ಕ ಬೆನ್ನಲ್ಲೇ ಚನ್ನಗಿರಿಗೆ ಶಾಸಕ ಮಾಡಾಳ ವಿರುಪಾಕ್ಷಪ್ಪ ಪ್ರತ್ಯಕ್ಷರಾಗಿದ್ದಾರೆ. ಹೈಕೋರ್ಟ್‌ನಿಂದ ಜಾಮೀನು ಸಿಕ್ಕ ಬಳಿಕ ಅಜ್ಞಾತ ಸ್ಥಳದಿಂದ ಹೊರ ಬಂದಿದ್ದಾರೆ. ಹಾರ ತುರಾಯಿ ಹಾಕಿ ಅವರ ಬೆಂಬಲಿಗರು ಭರ್ಜರಿ ಮೆರವಣಿಗೆ ಮಾಡುವ ಮೂಲಕ ವಿರೂಪಾಕ್ಷಪ್ಪರನ್ನ ಸ್ವಾಗತಿಸಿದರು. ಅಲ್ಲದೆ, ಮಾಡಾಳ್ ವಿರೂಪಾಕ್ಷಪ್ಪ ಪರ ಜೈಕಾರ ಕೂಗಲಾಯಿತು. ಮಾಡಾಳ್ ಮೆರವಣಿಗೆಯಲ್ಲಿ ನೂರಾರು ಜನ ಸೇರಿದದ್ದರು.
ಇದನ್ನೂ ಓದಿ: ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಇಲ್ಲವೆಂದ ಬಿಎಸ್‌ವೈ ..!
ಇನ್ನು ಈ ವೇಳೆ ಮಾದ್ಯಮದವರ ಜೊತೆ ಮಾತನಾಡಿದ ಮಾಡಾಳ್ ವಿರೂಪಾಕ್ಷಪ್ಪ, ನಮ್ಮ ಹಣವನ್ನ ಲೋಕಾಯುಕ್ತರು ತೆಗೆದುಕೊಂಡು ಹೋಗಿದ್ದಾರೆ, ಆ ಹಣವನ್ನ ವಾಪಾಸ್ ಪಡೆಯುತ್ತೇವೆ. ಅದು ಭ್ರಷ್ಟಾಚಾರದ ಹಣವಲ್ಲ. ನಾವು ದಾಖಲೆಗಳನ್ನ ಅವರಿಗೆ ನೀಡುತ್ತೇವೆ. ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನ ಲೋಕಾಯುಕ್ತರು ಕೇಳಿದ್ದಾರೆ. ಕಳೆದ ಚುನಾವಣೆ ಸಂದರ್ಭದಲ್ಲಿಯೂ ಇನ್ ಕಮ್ ಟ್ಯಾಕ್ಸ್ ರೇಡ್ ಮಾಡಿಸಿದ್ದರು. ಈ ಬಾರಿಯೂ ಷಡ್ಯಂತ್ರದಿಂದ ದಾಳಿ ನಡೆಸಲಾಗಿದೆ ಎಂದರು.
ಅಲ್ಲದೆ, ಕೆಎಸ್ ಡಿಎಲ್ ಮೊದಲು 750 ಕೋಟಿ ವಹಿವಾಟು ನಡೆಸುತ್ತಿತ್ತು. ನಾನು ಅಧಿಕಾರ ವಹಿಸಿಕೊಂಡ ಮೇಲೆ 1350 ಕೋಟಿ ವಹಿವಾಟು ನಡೆಸುತ್ತಿದೆ. ಎರಡು ವರ್ಷದಲ್ಲಿ ಕೆಎಸ್ ಡಿಎಲ್ ಲಾಭದಲ್ಲಿ ತಂದಿದ್ದೇನೆ ಎಂದು ಮಾಡಾಳಾ ವಿರುಪಾಕ್ಷಪ್ಪ ಹೇಳಿದ್ದಾರೆ.
ಬಿಜೆಪಿ ಸದಸ್ಯತ್ವದಿಂದು ಮಾಡಾಳ್ ಉಚ್ಛಾಟನೆ : ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಡಾಳ್, ಹೈಕಮಾಂಡ್ ತಿರ್ಮಾನ ಸಮರ್ಥೀಸಿಕೊಂಡಿದ್ದಾರೆ. ಹೈಕಮಾಂಡ್ ನಿರ್ಧಾರ ಸರಿ ಇದೆ, ನನ್ನ ಮೇಲೆ ಆರೋಪ ಕೇಳಿ ಬಂದಾಗ ಅವರು ತೆಗೆದುಕೊಂಡ ಒಳ್ಳೆಯದು. ನಾನು ದೋಷಮುಕ್ತನಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.