ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಷಷ್ಠಿ ಆಚರಣೆ ವೇಳೆ ಮಡೆಸ್ನಾನ, ಎಡೆಸ್ನಾನಕ್ಕೆ ಪರ್ಯಾಯ ಪಲಿಮಾರು ಮಠ ನಿಷೇಧ ಹೇರಿದೆ.


COMMERCIAL BREAK
SCROLL TO CONTINUE READING

ಗುರುವಾರ ಷಷ್ಠಿ ಮಹೋತ್ಸವ ಆಚರಣೆ ವೇಳೆ, ಸಾಂಪ್ರದಾಯಿಕ ಎಡೆಸ್ನಾನ, ಮಡೆ ಸ್ನಾನಕ್ಕೆ ಬದಲಾಗಿ ಭಕ್ತಾದಿಗಳು ಕೇವಲ ಉರುಳು ಸೇವೆ ನಡೆಯುತ್ತಿತ್ತು. ಆದರೆ ಎಡೆಸ್ನಾನದಿಂದ ಕೆಲವರಿಗೆ ಬೇಸರವಾಗಿದೆ. ತಿನ್ನುವ ಅನ್ನದ ಮೇಲೆ ಉರುಳು ಸೇವೆ ಕೆಲವರಿಗೆ ಇಷ್ಟವಿಲ್ಲ. ಹೀಗಾಗಿ ಅನಗತ್ಯ ವಿವಾದ ಬೇಡವೆಂದು ಎಡೆಸ್ನಾನ, ಮಡೆಸ್ನಾನ ಎರಡನ್ನೂ ರದ್ದು ಮಾಡಲು ನಿರ್ಧರಿಸಿದ್ದೇವೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಹೇಳಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀಗಳು "ನಾನು ಕೂಡಾ ಈ ವಿಚಾರದಲ್ಲಿ ತಟಸ್ಥನಾಗುವುದಾಗಿ ತಿಳಿಸಿದ್ದೇನೆ. ಯಾವುದರ ಬಗ್ಗೆ ವಿವಾದ ಇದೆಯೋ ಅದರ ಬಗ್ಗೆ ಆಗ್ರಹ ಯಾಕೆ, ಇದರಿಂದ ಧರ್ಮಕ್ಕೇನೂ ನಷ್ಟವಿಲ್ಲ, ದೇವಸ್ಥಾನದಲ್ಲಿ ಮಡೆಸ್ನಾನ-ಎಡೆಸ್ನಾನ ಅನಿವಾರ್ಯವೂ ಅಲ್ಲ ಎಂದು ಎಂದಿದ್ದಾರೆ.


ಈ ಹಿಂದೆ ಕೃಷ್ಣಮಠದಲ್ಲಿನ ಸುಬ್ರಹ್ಮಣ್ಯ ಗುಡಿ ಸಮೀಪ ಷಷ್ಠಿ ಮಹೋತ್ಸವದ ವೇಳೆ ಎಡೆಸ್ನಾನ, ಮಡೆಸ್ನಾನ ನಡೆಯುತ್ತಿತ್ತು. ಆದರೆ ತೀವ್ರ ವಿವಾದ ಹಾಗೂ ಕೋರ್ಟ್ ಆದೇಶದಿಂದ ಮಡೆಸ್ನಾನ ನಿಲ್ಲಿಸಲಾಗಿತ್ತು.