ಬಿಜೆಪಿಗೆ ತಲೆ ನೋವಾದ ಮಹದಾಯಿ ಬಂದ್
ಬೆಂಗಳೂರು: ಮಹಾದಾಯಿ ವಿಚಾರವಾಗಿ ಕರ್ನಾಟಕದಲ್ಲಿ ಕನ್ನಡ ಮತ್ತು ರೈತಪರ ಸಂಘಟನೆಗಳು ರಾಜ್ಯದಾಧ್ಯಂತ ಬಂದ್ ನೀಡಿರುವ ಹಿನ್ನಲೆಯಲ್ಲಿ ಕರ್ನಾಟಕವು ಬಹುತೇಕ ಸ್ತಬ್ದಗೊಂಡಿದೆ.ಆದ್ದರಿಂದ ಈ ಬಂದ್ ವಿಚಾರ ಬಿಜೆಪಿಯವರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಕಾರಣವಿಷ್ಟೇ ಮೈಸೂರಿನಲ್ಲಿ ರಾಜ್ಯ ಬಿಜೆಪಿಯು ಇದೆ ದಿನದಂದು ಪರಿವರ್ತನಾ ರ್ಯಾಲಿ ಹಮ್ಮಿಕೊಂಡಿದ್ದು,ಈ ರ್ಯಾಲಿಯಗೆ ಅಮಿತ್ ಶಾ ಆಗಮಿಸುತ್ತಿರುವ ಹಿನ್ನಲೆಯಲ್ಲಿ ರ್ಯಾಲಿಗಾಗಿ ಈಗಾಗಲೇ ಸುಮಾರು 18 ಸಾವಿರಕ್ಕೂ ಹೆಚ್ಚಿನ ಕುರ್ಚಿಗಳನ್ನು ಹಾಕಲಾಗಿದೆ. ಆದರೆ ಈಗ ಮಹಾದಾಯಿ ವಿಚಾರವಾಗಿ ಕನ್ನಡಪರ ಸಂಘಟನೆಗಳು ನೀಡಿರುವ ಬಂದ್ ನ ಹಿನ್ನಲೆಯಲ್ಲಿ ಪರಿವರ್ತನಾ ರ್ಯಾಲಿ ವಿಫಲಗೊಳ್ಳುವ ಸಾಧ್ಯತೆಗಳು ತೀವ್ರವಾಗಿವೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಉತ್ತರ ಕರ್ನಾಟಕದ ಭಾಗದಲ್ಲಿ ಮಹದಾಯಿ ವಿಚಾರವಾಗಿ ಅಸಮಾಧಾನಗೊಂಡಿರುವ ಜನರು ಈಗ ಹಲವಾರು ಸಂಘಟನೆಗಳ ನೇತೃತ್ವದಲ್ಲಿ ರಾಜ್ಯದೆಲ್ಲೆಡೆ ಬಂದ್ ಗೆ ಕರೆ ಕೊಟ್ಟಿದ್ದಾರೆ. ಅದರ ಪರಿಣಾಮವಾಗಿ ಈಗ ಮೈಸೂರಿನಲ್ಲಿ ಅಂಗಡಿ ಮುಂಗಟ್ಟು ಗಳು ಮುಚ್ಚಲಾಗಿದೆ ಮತ್ತು ಮುಂಜಾಗ್ರತಾ ಕ್ರಮವಾಗಿ ಕೆ ಎಸ್ ಆರ್ ಟಿ ಸಿ ಬಸ್ ಗಳು ರೋಡಿಗಿಳಿದಿಲ್ಲ. ಇದರಿಂದಾಗಿ ಈಗ ಈ ಬಂದ್ ನಿಂದಾಗಿ ಪರಿವರ್ತನಾ ಯಾತ್ರೆಗೆ ಜನರ ಕೊರತೆಯ ಆತಂಕ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯಾಗಿರುವುದರಿಂದಾಗಿ ಇಂದಿನ ಕಾರ್ಯಕ್ರಮ ಬಿಜೆಪಿಗೆ ಪ್ರತಿಷ್ಠೆಯ ಸಂಕೇತವಾಗಿದೆ.
ಆದ್ದರಿಂದ ಹೇಗಾದರೂ ಮಾಡಿ ಈ ಸಮಾವೇಶಕ್ಕೆ ಜನರನ್ನು ಸೇರಿಸಿ ಈ ಕಾರ್ಯಕ್ರಮವನ್ನು ಯಶಸ್ಸುಗೊಳಿಸುವುದರ ಮೂಲಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಬೇಕೆನ್ನುವುದು ಬಿಜೆಪಿಯ ಉದ್ದೇಶವಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ಈ ಸಮಾವೇಶ ನಡೆದಾಗ ಬಹುತೇಕ ಕುರ್ಚಿಗಳು ಖಾಲಿ ಉಳಿದಿದ್ದವು ಆದ್ದರಿಂದಾಗಿ ಕನಿಷ್ಠ ಪಕ್ಷ ಈಗಲಾದರೂ ಜನರನ್ನು ಸೇರಿಸಿ ಮುಖಭಂಗವನ್ನು ತಪ್ಪಿಸಿಕೊಳ್ಳುವ ಲೆಕ್ಕಾಚಾರ ರಾಜ್ಯ ಬಿಜೆಪಿಯದಾಗಿದೆ.