ಮಹಾದಾಯಿ ವಿವಾದ: ಪ್ರಧಾನಿ ಮೋದಿ ನಿಲುವು ಖಂಡಿಸಿ ಫೆ.1 ರಿಂದ ಧರಣಿ- ಸಾಹಿತಿ ಚಂಪಾ
ಬೆಂಗಳೂರು: ಮಹಾದಾಯಿ ಮತ್ತು ಕಳಸಾ ಬಂಡೂರಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ತಾಳಿರುವ ಮೌನವನ್ನು ಖಂಡಿಸಿ ಫೆಬ್ರವರಿ 1 ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಹಿರಿಯ ಸಾಹಿತಿ ಚಂಪಾ ತಿಳಿಸಿದ್ದಾರೆ.
ಜನಸಾಮಾನ್ಯರ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಚಂಪಾ ಬುಧವಾರದಂದು ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕಳಸಾಬಂಡೂರಿ ಮತ್ತು ಮಹಾದಾಯಿ ಯೋಜನೆ ಒಂದೇ ಎಂದು ಮಾದ್ಯಮಗಳ ಮುಂದೆ ತಪ್ಪಾಗಿ ಬಿಂಬಿಸುತ್ತಿರುವ ರಾಜಕೀಯ ಪಕ್ಷಗಳ ಬಗ್ಗೆ ಅವರು ಕಿಡಿ ಕಾರಿದ್ದಾರೆ.
ಮಹಾದಾಯಿ ವಿಷಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯಯವರ ಮೌನವನ್ನು ಖಂಡಿಸಿ ಫೆಬ್ರವರಿ 1 ರಿಂದ ಬೆಂಗಳೂರಿನಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಜನಸಾಮಾನ್ಯರ ಪಕ್ಷ ಹಮ್ಮಿಕೊಂಡಿದೆ ಇದರಲ್ಲಿ ತಾವು ಕೂಡಾ ಪಾಲ್ಗೊಳ್ಳುವುದಾಗಿ ಎಂದು ಚಂಪಾ ತಿಳಿಸಿದರು.