ನವದೆಹಲಿ: ಇತ್ತೀಚಿಗೆ ಮಹಾದಾಯಿ ವಿವಾದ  ಬಾರಿ ಸುದ್ದಿ ಮಾಡುತ್ತಿದ್ದು ಈ ವಿಷಯವಾಗಿ ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್  ಮತ್ತು ಪ್ರತಿಪಕ್ಷದ ಬಿಜೆಪಿಗಳ ನಡುವೆ ಜಟಾಪಟಿಗೆ ಕಾರಣವಾಗಿತ್ತು. ಈಗ ಈ ವಿಷಯ ಪಾರ್ಲಿಮೆಂಟಿನಲ್ಲಿ ಸುದ್ದಿ ಮಾಡಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ಮತ್ತು ಗೋವಾ ಗಳ ನಡುವೆ ಉಂಟಾಗಿರುವ ಈ ಸಮಸ್ಯೆ ಈಗ ನ್ಯಾಯಾಧಿಕರಣದಲ್ಲಿ  ವಿಚಾರಣೆ ನಡೆಯುತ್ತಿದೆ. ಕರ್ನಾಟಕವು ಅದರಲ್ಲೂ ಮುಂಬೈ ಕರ್ನಾಟಕ ಭಾಗದ ಕುಡಿಯುವ ನೀರಿನ ದಾಹ ತಣಿಸಲು ಈ ನದಿಯ ನೀರಿನ ಬೇಡಿಕೆಯನ್ನು ಮುಂದಿಟ್ಟಿದೆ.


ಈ ವಿಷಯವನ್ನು ತುಮಕೂರಿನ ಸಂಸದ ಮತ್ತು ಕಾಂಗ್ರೆಸ್ ಪಕ್ಷದ ನಾಯಕ ಇಂದು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸುತ್ತಾ ಕರ್ನಾಟಕ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಆದ್ದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮಹದಾಯಿ ಮತ್ತು ದಕ್ಷಿಣದಲ್ಲಿ ಮೇಕೆದಾಟು ಈ ಎರಡು ಯೋಜನೆಗಳನ್ನು ಕೇಂದ್ರ ಸರಕಾರ ಬಗೆ ಹರಿಸಬೇಕು ಎಂದು ಆಗ್ರಹಿಸಿದರು.


ಈ ಎರಡು ಯೋಜನೆಗಳು ಅಂತರಾಜ್ಯ ಯೋಜನೆಗಳಾಗಿರುವುದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಸ್ತಿಕೆ ವಹಿಸಬೇಕೆಂದು ಸಂಸತ್ತಿನಲ್ಲಿ ಕೇಳಿಕೊಂಡರು. ಈ ಸಂಧರ್ಭದಲ್ಲಿ ಮುದ್ದ ಹನುಮೇಗೌಡರ ಪ್ರಶ್ನೆಗೆ ಸಮಜಾಯಿಸಲು ಯತ್ನಿಸಿದ  ಅನಂತಕುಮಾರ  ಮಹದಾಯಿಗೆ ಸಂಬಂಧಿಸಿದಂತೆ  ಗೋವಾ ಸಿಎಂ ಅವರು ಮಾಜಿ ಸಿಎಂ ಅವರಿಗೆ  ಕರ್ನಾಟಕಕ್ಕೆ 7.35 ಟಿಎಂಸಿ ನೀರು ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.  ಈ ವಿಷಯವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸಿತು.