ವೇಣೂರಿನ ಭಗವಾನ್ ಬಾಹುಬಲಿಗೆ ಮಹಾಮಜ್ಜನ : ಫೆಬ್ರವರಿ 22ರಿಂದ ಮಾರ್ಚ್ 1ವರೆಗೆ
Lord bhagavan Bahubali : ದಕ್ಷಿಣ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಭಗವಾನ್ ಬಾಹುಬಲಿಗೆ ಮಹಾಮಜ್ಜನಕ್ಕೆ ದಿನಗಣನೆ ಆರಂಭವಾಗಿದ್ದು, ಸಕಲ ತಯಾರಿ ನಡೆಯುತ್ತಿದೆ.
Lord bhagavan Bahubali Mahamajjana : ಫೆಬ್ರವರಿ 22ರಿಂದ ಮಾರ್ಚ್ 1ವರೆಗೆ ಬಾಹುಬಲಿಗೆ ಮಹಾಮಸ್ತಕಾಭಿಷೇಕ ವೈಭವ ನಡೆಯಲಿದ್ದು, ಸಕಲ ತಯಾರಿಗಳು ನಡೆಯುತ್ತಿದೆ. ದಕ್ಷಿಣ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಭಗವಾನ್ ಬಾಹುಬಲಿಗೆ ಮಹಾಮಜ್ಜನಕ್ಕೆ ದಿನಗಣನೆ ಆರಂಭವಾಗಿದೆ.
ವಿಶೇಷವಾಗಿ ಶುದ್ಧ ಕಾಶ್ಮೀರ ಕೇಸರಿಯಿಂದ ಅಭಿಷೇಕ ನಡೆಯಿಲಿದ್ದು, ಈ ಮಹಾಮಸ್ತಕಾಭಿಷೇಕವನ್ನು ತುಮಕೂರು ಮೂಲಕ ಎನ್ ಬಿ ಶ್ರೇಯಾಂಶ್ ಕುಮಾರ್ ಅವರ ಕುಟುಂಬ ಈ ಸೇವೆಯನ್ನು ಮಾಡಲಿದೆ.
ಇದನ್ನು ಓದಿ : 'ಪಿಎಂ ಸೂರ್ಯ ಘರ್' : ಮುಫ್ತ್ ಬಿಜ್ಲಿ ಯೋಜನೆ ಆರಂಭ : ಪಿಎಂ ಮೋದಿ
ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಪ್ರತಿದಿನ ನಲ್ವತ್ತು ಸಾವಿರ ಜನರು ಭಾಗವಹಿಸುವ ನೀರಿಕ್ಷೆಗಳಿದ್ದು, ಗಣ್ಯರು ಆಗಮನಕ್ಕಾಗಿ ಹೆಲಿಪ್ಯಾಡ್ ನಿರ್ಮಾಣವೂ ನಡೆದಿದೆ. ಅಲ್ಲದೆ ಬಾಹುಬಲಿಗೆ ಅಭಿಷೇಕ ಮಾಡಲು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅಟ್ಟಿಗೆಯನ್ನು ಮಾಡಲಾಗುತ್ತಿದೆ. ಈ ಅಟ್ಟಣಿಗೆಯಲ್ಲಿ 600 ಜನ ನಿಲ್ಲಬಹುದಾದ ಸಾಮಥ್ರ್ಯವನ್ನು ಹೊಂದಿದೆ. ಸುಮಾರು ನಾಲ್ಕು ಸಾವಿರ ಕಾರುಗಳು ನಿಲ್ಲಬಹುದಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
35 ಅಡಿ ಎತ್ತರದ ಬಾಹುಬಲಿಗೆ ಎಳನೀರು, ಕಬ್ಬಿನ ಹಾಲು, ಹಾಲು, ಅಕ್ಕಿಹಿಟ್ಟು, ಕಷಾಯ, ಶ್ರೀಗಂಧ, ರಕ್ತ ಚಂದನ, ಅಷ್ಟಗಂಧ, ಕೇಸರಿ, ಅರಶಿನ, ಸುವರ್ಣ ರತ್ನ, ಸೇರಿದಂತೆ ಪುಷ್ಪವೃಷ್ಠಿಯ ಮಹಾಮಜ್ಜನ ನಡೆಯಲಿದೆ.ಮಹಾಮಸ್ತಕಾಭಿಷೇಕದ ಕೊನೆಯ ದಿನ ಬಾಹುಬಲಿಗೆ 1008 ಕಳಶಗಳ ಅಭಿಷೇಕ ನಡೆಯಲಿದೆ. ಭಕ್ತಾದಿಗಳಿಗಾಗಿ ಜೈನ ಸಂಪ್ರದಾಯದ ತಿನಿಸುಗಳನ್ನು ನೀಡಲಾಗುತ್ತದೆ.
ಇದನ್ನು ಓದಿ : ಸೂರರೈ ಪೋಟ್ರು ರಿಮೇಕ್ 'ಸರ್ ಫಿರಾ' ದಲ್ಲಿ ಅಕ್ಷಯ್ ಕುಮಾರ್ : ಜುಲೈ 12ಕ್ಕೆ ತೆರೆಗೆ
ಮಹಾಮಸ್ತಕಾಭಿಷೇಕ್ಕಾಗಿ ಎರಡು ವೇದಿಕೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಒಂದು ವೇದಿಕೆಯಲ್ಲಿ ವಸ್ತು ಪ್ರದರ್ಶನ ನಡೆಯಲಿದೆ. ಈಗಾಗಲೇ ಪಾಸ್‍ಗಳ ಹಂಚಿಕೆ ಮಾಡಲಾಗುತ್ತಿದ್ದು, ಪಾಸ್ ಇದ್ದವರಿಗೆ ಪ್ರತ್ಯೇಕ ಗ್ಯಾಲರಿ, ಸಾರ್ವಜನಿಕರಿಗೆ ಧರ್ಮದರ್ಶನ ಗ್ಯಾಲರಿ ಮಾಡಲಾಗುತ್ತಿದೆ.
ವೇಣೂರೆಂಬ ಪುಟ್ಟ ಗ್ರಾಮ ಮಹಾಮಸ್ತಕಾಭಿಷೇಕದ ಸಂಭ್ರಮದಲ್ಲಿ ಮುಳಿಗೇಳಲು ಸಿದ್ಧವಾಗಿದ್ದು, 1604 ರಲ್ಲಿ ಕಲ್ಕುಡ ಕೆತ್ತಿದ ಬಾಹುಬಲಿ ಎಂಬ ಪ್ರಖ್ಯಾತಿಗೆ ವೇಣೂರಿನ ಬಾಹುಬಲಿ ಭಾಜನವಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.