ಉಡುಪಿ : ಹೌದು ಉಡುಪಿ ಜಿಲ್ಲೆಯಲ್ಲಿ ನೂರಾರು ದೇವಾಲಯಗಳನ್ನು ಇಂದಿಗೂ ಕಾಣಬಹುದಾದ ಜಿಲ್ಲೆ. ನೂರಾರು ಸಾವಿರಾರು ವರ್ಷಗಳ ಇತಿಹಾಸ ಇರುವ ಸಾಕಷ್ಟು ದೈವ ದೇವರುಗಳ ದೇಗುಲಗಳು ಜಿಲ್ಲೆಯಲ್ಲಿ ಇಂದಿಗೂ ಕಾಣಬಹುದು. 


COMMERCIAL BREAK
SCROLL TO CONTINUE READING

ಐತಿಹಾಸಿಕ ನಗರಿ ಎಂದೇ ಕರೆಯಲ್ಪಡುವ ಬಾರಕೂರು ಎನ್ನುವ ಪ್ರದೇಶದಲ್ಲಿ 365 ದೇಗುಲಗಳು ಇದ್ದವು ಎನ್ನುವುದು ಇತಿಹಾಸದ ಪುಟಗಳಲ್ಲಿ ಉಲ್ಲೇಖ ಮಾಡಿರುವುದನ್ನು ಕೂಡ ನಾವು ನೋಡಿದ್ದೇವೆ. ಇಂತಹ ಜಿಲ್ಲೆಯಲ್ಲಿ ಅಯೋಧ್ಯ ಶ್ರೀರಾಮಲಲ್ಲನ ಮೂರ್ತಿಯನ್ನೇ ಹೋಲುವ ಮೂರ್ತಿಯೊಂದು ಇತ್ತೀಚಿನ ದಿನದಲ್ಲಿ ಬೆಳಕಿಗೆ ಬಂದಿದೆ. ಬ್ರಹ್ಮ ಹರ ತಾಲೂಕು ಸಿರಿಯಾರ ಗ್ರಾಮದ ಸಕತ್ತು ಎನ್ನುವ ಪ್ರದೇಶದಲ್ಲಿ ಕಂಡುಬಂದಿರುವ ಈ ಮೂರ್ತಿ ರಾಮಲಲ್ಲನ ಮೂರ್ತಿಯ ತದ್ರುಪು ಎಂದರೆ ತಪ್ಪಾಗಲಾರದು.


ಇದನ್ನೂ ಓದಿ-ನಿಗಮ ಪಟ್ಟಿ ಬಿಡುಗಡೆ ಬಳಿಕ ಯಾವುದೇ ಗೊಂದಲಗಳಿಲ್ಲ


ಸಿರಿಯಾರ ಗ್ರಾಮ ವ್ಯಾಪ್ತಿಯಲ್ಲಿ ಬರುವ ಸಕಟ್ಟು ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಕಂಡು ಬಂದಿರುವ ಈ ಮಹಾವಿಷ್ಣುವಿನ ಮೂರ್ತಿ ಅಯೋಧ್ಯೆಯ ಶ್ರೀರಾಮಲಲ್ಲ ನನ್ನ ಹೋಲುತ್ತದೆ. ಬಹುತೇಕ ಕೃಷ್ಣಶಿಲೆಯಲ್ಲಿ ಕೆತ್ತಿರಬಹುದು ಎನ್ನಲಾದ ಈ ಮೂರ್ತಿ ಸುಮಾರು ಎರಡೂವರೆಯಿಂದ ಮೂರು ಅಡಿ ಎತ್ತರವಿದ್ದು, ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರದ ಚಿತ್ರಣವಿದೆ. 


ಇದನ್ನೂ ಓದಿ-ಸಿದ್ದರಾಮಯ್ಯ ಅವರ ಅದೃಷ್ಟದ ಬಂಗಲೆಗೆ ಡಿಕೆ ಶಿವಕುಮಾರ್‌ ಶಿಫ್ಟ್‌


ಯಾವುದೇ ಜೀವನೋದ್ಧಾರವಿಲ್ಲದೆ ಮುರಿದು ಬೀಳುವ ಸ್ಥಿತಿಯಲ್ಲಿರುವ ಈ ದೇವಳದ ಒಳಗೆ ಇರುವ ಈ ಮಹಾವಿಷ್ಣುವೆಗೆ ಅಭಿಷೇಕಗಳು ನಡೆದು ನೂರಾರು ವರ್ಷಗಳು ತಂದಿದ್ದರು ಕೂಡ ಇಂದಿಗೂ ಅದರ ಹೊಳಪು ಎದ್ದು ಕಾಣುತ್ತಿದೆ. ಹೀಗಾಗಿ ಅಯೋಧ್ಯೆಯ ರಾಮಲಲ್ಲಾನ ಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಕರಾವಳಿಗಳಲ್ಲಿ ಇಲ್ಲಿನ ಮೂರ್ತಿಯನ್ನೇ ನೋಡಿ ರಾಮಲಲ್ಲನ ಮೂರ್ತಿಯನ್ನು ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ್ದಾರೆಯೋ ಪ್ರಶ್ನೆ ಉದ್ಭವವಾಗಿದೆ.


ಒಟ್ಟಾರೆಯಾಗಿ ಸುಮಾರು ವರ್ಷಗಳ ಹಿಂದೆ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಈ ಮಹಾವಿಷ್ಣುವಿನ ಮೂರ್ತಿ ಮತ್ತು ಕೆಲವು ದಿನಗಳ ಹಿಂದೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಗೊಂಡ ಶ್ರೀರಾಮ ಲಲ್ಲ ನಾ ಮೂರ್ತಿಗೂ ಸಾಮ್ಯತರ ಇರುವುದು ರಾಮಭಕ್ತರಿಗೆ ಸಂತಸ ತಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.