Vijayanagar :ವಿಜಯನಗರ ಮಾರುತಿ ಮೆಡಿಕಲ್ಸ್‌ನ ಗೋಸೇವಕ ಮಹೇಂದ್ರ ಮುನ್ನೋತ್ ಅವರು ತಮ್ಮ ಮಾತಾಪಿತೃಗಳಾದ ದಿವಂಗತ ಮೋತಿಲಾಲ್‌ ಮುನ್ನೋತ್ ಜೈನ್‌ ಶ್ರೀಮತಿ ವಿಮಲಾಬಾಯಿ ಮುನ್ನೋತ್ ಜೈನ್‌ ಅವರುಗಳ ಪುಣ್ಯತಿಥಿಯಾದ ಇಂದು ಪ್ರತಿ ವರ್ಷ ನೂರಾರು ಗಿಡಗಳನ್ನು ನೆಡುವ ʼವೃಕ್ಷಾರೋಹಣʼ ಕಾರ್ಯಕ್ರಮದೊಂದಿಗೆ ನಾಡಿನ ವಿವಿಧ ಗೋಶಾಲೆಗಳಿಗೆ ಅವಶ್ಯಕತೆಗಳಿಗೆ ಅನುಗುಣವಾಗಿ ದೇಣಿಗೆಯನ್ನು ನೀಡುತ್ತಾ ಬಂದಿರುತ್ತಾರೆ. 


COMMERCIAL BREAK
SCROLL TO CONTINUE READING

ಅದರಂತೆ ಇಂದು ಹತ್ತಕ್ಕೂ ಹೆಚ್ಚು ಗೋಶಾಲೆಗಳನ್ನು ಒಳಗೊಂಡಂತೆ 44 ಲಕ್ಷ ರೂಪಾಯಿಗಳನ್ನು ಚೆಕ್‌ ಮುಖಾಂತರ ವಿತರಿಸಿದ್ದಾರೆ. ವಿವಿಧ ಗೌಶಾಲ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಚೆಕ್‌ಗಳನ್ನು ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮುಣೋತ್‌  ʼಮೊನ್ನೆ ಗೋಹತ್ಯೆ ನಿಷೇಧ ಹಿಂಪಡೆಯುವ ಸಂಬಂಧ ಪಶು ಸಂಗೋಪನಾ ಸಚಿವರು ನೀಡಿರುವ ಹೇಳಿಕೆ ಗೋಹತ್ಯೆಯ ಪರವಾಗಿರುವುದು ಕರ್ನಾಟಕ ರಾಜ್ಯದ ದೌರ್ಭಾಗ್ಯ, ಗೋ ಸೇವೆ, ರಕ್ಷಣೆ ಯಾವುದೇ ಒಂದು ಸಮುದಾಯದವರದ್ದಲ್ಲ, ಮನುಕುಲದ ಕರ್ತವ್ಯʼ ಎಂದರು.


ಇದನ್ನೂ ಓದಿ-ಚಾಮರಾಜನಗರದ ಗ್ರಾಮಕ್ಕೆ ಆನೆ ಲಗ್ಗೆ- ಬೈಕ್, ಮರ, ಮನೆ ಗೇಟ್ ಧ್ವಂಸ


ಈ ಸಂದರ್ಭದಲ್ಲಿ ಅಮೃತಧಾರ ಗೌಶಾಲ ಅಧ್ಯಕ್ಷ ಶರ್ಮಾ, ಸಂಚಾಲಕ ಸಂತೋಷ್ ತಿವಾರಿ, ವಾಟ್ಸ್ ಫೌಂಡೇಶನ್ ಮುಖ್ಯಸ್ಥ ಆನಂದ ಕೃಷ್ಣ ದಾಸ್, ಕೃಪಾ ಲವಿಂಗ್ ಅನಿಮಲ್ಸ್ ಸೆಂಟರ್‌ನ ಮಹೇಂದ್ರ ಜೈನ್, ಅರಸೀಕೆರೆ ಗೋಶಾಲೆಯ ಗೋ ಪರಿವಾರದ ಪರಸ್ ಜೈನ್, ಕ್ಯೂಪ ಸಂಸ್ಥೆಯ ಡಾ. ಪ್ರಾಗ್ನೇಕರ್, ಧ್ಯಾನ್ ಫೌಂಡೇಶನ್‌ನ ಸಹನಾ ಮತ್ತು ರೀಣು, ಓಂಕಾರ್ ಗೋಶಾಲದ ಮಲಿಕಾರ್ಜುನ್, ಶಿವ ಗೋಸೇವಾ ಚಾರಿಟಬಲ್ ಟ್ರಸ್ಟ್‌ನ ಹನುಮಾನ್ ಮಾಲಿ, ಮೋತಿಲಾಲ್ ಮಾಲಿ, ಸರ್ವ ಪ್ರಾಣಿ ಸಂಸ್ಥೆ, ಮಾತೇಶ್ವರಿ ಭಕ್ತ ಮಂಡಳದ ಭಕ್ತಾದಿಗಳು, ಚಿಕ್ಕಮಗಳೂರಿನ ಕಾಮಧೇನು ಗೋಶಾಲ ಪ್ರತಿನಿಧಿ, ಗೋಭಕ್ತರಾದ ಗೌತಮ್ ಶರ್ಮ, ಉಪೇಂದ್ರ ಕುಮಾರ್ ಸೇರಿದಂತೆ ಗೋಸೇವಕರು ಗೋಶಾಲೆಗಳ ಫಲಾನುಬಾವಿಗಳಾಗಿದ್ದರು.


ಇದನ್ನೂ ಓದಿ- Abhi-Aviva Beegara Oota: ಅಂಬಿ ಪುತ್ರನ ಬೀಗರ ಊಟಕ್ಕೆ ಅದ್ದೂರಿ ಸಿದ್ದತೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ