ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸ್ಮಾರಕ ಫಲಕ ನಾಶ
ಗ್ರ್ಯಾನೈಟ್ ಶಿಲೆಯಲ್ಲಿದ್ದ ಸಂದೀಪ್ ಉನ್ನಿಕೃಷ್ಣನ್ ಅವರ ಸ್ಮಾರಕ ಫಲಕವನ್ನು ಭಾನುವಾರದಂದು ದುಷ್ಕ್ರಮಿಗಳು ನಾಶಪಡಿಸಿದ್ದಾರೆ.
ಬೆಂಗಳೂರು: ಗ್ರ್ಯಾನೈಟ್ ಶಿಲೆಯಲ್ಲಿದ್ದ ಸಂದೀಪ್ ಉನ್ನಿಕೃಷ್ಣನ್ ಅವರ ಸ್ಮಾರಕ ಫಲಕವನ್ನು ಭಾನುವಾರದಂದು ದುಷ್ಕ್ರಮಿಗಳು ನಾಶಪಡಿಸಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿ ಅಳವಡಿಸಿದ್ದ ಗ್ರ್ಯಾನೆಟ್ ಶಿಲೆಯ ಫಲಕವನ್ನು ನಾಶಪಡಿಸಿದ್ದಾರೆ.ಈಗ ಈ ನಾಶಪಡಿಸಿರುವ ಫಲಕದ ವಿಚಾರವಾಗಿ Soldiering ಎನ್ನುವ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.ಅಲ್ಲದೆ ನಾಶವಾಗಿರುವ ಫಲಕವನ್ನು ಪುನಃ ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈಗ ಈ ದುಷ್ಕರ್ಮಿಗಳ ಕ್ರಮಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಖಂಡಿಸಿವೆ.ಆಲ್ಲದೇ ಆರೋಪಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿವೆ. ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಉಪಮುಖ್ಯಮಂತ್ರಿ ಜಿ ಮುಖ್ಯಮಂತ್ರಿ ಜಿ ಪರಮೇಶ್ವರ ಅವರು ಟ್ವೀಟ್ ಮಾಡಿ ಅಚ್ಚರಿ ವ್ಯಕ್ತಪಡಿಸಿರುವುದಲ್ಲದೆ ಬಿಬಿಎಂಪಿ ತಕ್ಷಣ ಇದನು ಮರು ಸ್ಥಾಪಿಸಲು ತುರ್ತುಕ್ರಮವನ್ನು ತೆಗೆದುಕೊಳ್ಳಬೇಕೆಂದು ಅವರು ಆದೇಶಿಸಿದ್ದಾರೆ.
ಇನ್ನೊಂದೆಡೆಗೆ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ.