ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ಧೈವ ಎಂದೇ ಖ್ಯಾತಿ ಹೊಂದಿರುವ ಯಾದಗಿರಿಯ ಮೈಲಾಪೂರದ ಮೈಲಾರಲಿಂಗೇಶ್ವರ ಜಾತ್ರೆ ಕೋವಿಡ್‍ನಿಂದ ನಿಂದಾಗಿ ಕಳೆದ 2 ವರ್ಷಗಳಿಂದ ನಡೆದಿರಲಿಲ್ಲ. ಇದೀಗ 2 ವರ್ಷದ ಬಳಿಕ ನಡೆಯುತ್ತಿರುವ ಈ ಜಾತ್ರೆಗೆ ಯಾದಗಿರಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.


COMMERCIAL BREAK
SCROLL TO CONTINUE READING

ವರ್ಷಕ್ಕೆ 2 ಬಾರಿ ನಡೆಯುವ ಗುಡ್ಡದ ಮೈಲಾರಲಿಂಗೇಶ್ವರ ದೇವರ ಜಾತ್ರೆ ಬಲುವಿಶೇಷ. ಕರ್ನಾಟಕ, ಆಂದ್ರಪ್ರದೇಶ ಮತ್ತು ತೆಲಂಗಾಣ 3 ರಾಜ್ಯದ ಅಪಾರ ಭಕ್ತಗಣ ಹೊಂದಿದ ಗಿರಿನಾಡಿನ ಸುಪ್ರಸಿದ್ಧ ದೇವಾಲಯ. ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದಲ್ಲಿ ನೆಲೆಸಿರುವ ಮೈಲಾರಲಿಂಗೇಶ್ವರ  ಭಕ್ತಾದಿಗಳ ಇಷ್ಟಾರ್ಥಗಳನ್ನು ಈಡೇರಿಸುವ ಆರಾಧ್ಯ ಧೈವವಾಗಿದ್ದಾನೆ. ಮಕರ ಸಂಕ್ರಮಣ ಹಬ್ಬದ ದಿನದಂದೇ ನಡೆಯುವ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿ ಗುಡ್ಡದ ಮೇಲಿರುವ ಮೈಲಾರ ಲಿಂಗನ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಏಳು ಕೋಟಿ ಏಳು ಕೋಟಿಗೆ ಎನ್ನುವ ಮೈಲಾರಲಿಂಗೇಶ್ವರನಿಗೆ ಬಂಡಾರ ಎರಚಿ ಉಘೇ ಎನ್ನುವ ಜಯಘೋಷಗಳ ನಡುವೆ ಭಕ್ತ ಸಾಗರವೇ ಹರಿದು ಬರಲಿದೆ.


ಇದನ್ನೂ ಓದಿ: ʼಮದ್ಯ ಖರೀದಿಸಲು ವಯಸ್ಸಿನ ನಿರ್ಬಂಧ ಸಡಿಲಿಸಲುʼ ಸರ್ಕಾರ ನಿರ್ಧಾರ


ರೈತರ ಆರಾಧ್ಯ ದೈವವಾಗಿರಯವ ಮೈಲಾರಲಿಂಗೇಶ್ವರ ಪಲ್ಲಕ್ಕಿಗೆ ಕುರಿಗಾಹಿಗಳು ಹೆಚ್ಚಾಗಿ ಬರುತ್ತಾರೆ. ಪಲ್ಲಕ್ಕಿ ಮೇಲೆ ಕುರಿ ಆಯಿಸುವುದರಿಂದ ಕುರಿಗಳ ಸಂತಾನ ಹೆಚ್ಚಾಗುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಆದರೆ ಜಿಲ್ಲಾಡಳಿತ ಪ್ರಾಣಿ ಹಿಂಸೆ ಮಾಡಬಾರದು ಎನ್ನುವ ಕಾನೂನಿನ್ವಯ ಪ್ರಾಣಿಗಳನ್ನು ಎಸೆಯುವುದಕ್ಕೆ ನಿಷೇಧ ಹೇರಿದೆ. ಜಿಲ್ಲಾಡಳಿತದ  ನಿಷೇಧವಿದ್ದರೂ ಸಹ ಪಲ್ಲಕ್ಕಿ ಉತ್ಸವದಲ್ಲಿ ಹರಕೆಯನ್ನು ಹೊತ್ತ ರೈತರು ಉತ್ಸವದಲ್ಲಿ ಕುರಿ ಮರಿಗಳನ್ನು ಎಸೆಯುವುದಕ್ಕೆ ತರುತ್ತಾರೆ. ರೈತರು ತರುವ ಈ ಕುರಿ ಮರಿಗಳ ರಕ್ಷಣೆಗಾಗಿ ಜಿಲ್ಲಾ ಆಡಳಿತ ಪೊಲೀಸ್ ಇಲಾಖೆ, ಪಶು ಸಂಗೋಪನಾ ಇಲಾಖೆ ಸಹಕಾರದೊಂದಿಗೆ ದೇವಸ್ಥಾನಕ್ಕೆ ಬರುವ 6 ಸ್ಥಳಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿದೆ. ಕುರಿ ಮರಿಗಳನ್ನು ತರುವವರಿಂದ ಕುರಿಗಳನ್ನು ಜಪ್ತಿ ಮಾಡಿಕೊಳ್ಳಲಾಗುತ್ತದೆ.


ಇಲ್ಲಿ ಜಪ್ತಿ ಮಾಡಿಕೊಂಡ ಕುರಿಗಳನ್ನು ಜಾತ್ರೆಯ ನಂತರದ ದಿನಗಳಲ್ಲಿ ಹರಾಜು ಪ್ರಕ್ರಿಯೆ ನಡೆಸಿ ಮಾರಾಟ ಮಾಡಲಾಗುತ್ತದೆ. ಜಾತ್ರೆಯಲ್ಲಿ ಯಾವುದೇ ಅವಘಡ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮಕರ ಸಂಕ್ರಮಣದಂದು ನಡೆಯುವ ಈ ಜಾತ್ರೆಗೆ ಭಕ್ತ ಸಾಗರವೇ ಹರಿದು ಬರುತ್ತದೆ. ತಮ್ಮ ಇಷ್ಟಾರ್ಥ ಸಾಧನೆಗಳನ್ನು ಮೈಲಾರಲಿಂಗ ದೇವರು ಈಡೇರಿಸುತ್ತಾನೆ ಎನ್ನುವದು ಇಲ್ಲಿನ ಭಕ್ತರ ಆಶಯವಾಗಿದೆ.


ಇದನ್ನೂ ಓದಿ: 26ನೇ ರಾಷ್ಟ್ರೀಯ ಯುವ ಜನೋತ್ಸವ: ಗಮನ ಸೆಳೆದ ಸಿರಿಧಾನ್ಯ ಮೇಳ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.