ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರನ್ನು ಖಾಯಂಗೊಳಿಸುವ ಕುರಿತು ರಾಜ್ಯ ಬೆಜಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ವಿಧಾನಮಂಡಲ ಅಧಿವೇಶನದಲ್ಲಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘ ಆಗ್ರಹಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- ಮಾನ್ಸೂನ್‌ನಲ್ಲಿ ಒಮ್ಮೆಯಾದರೂ ಕರ್ನಾಟಕದ ಈ 5 ಸ್ಥಳಗಳಿಗೆ ಭೇಟಿ ನೀಡಲೇಬೇಕು


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೌರಕಾರ್ಮಿಕರ ಮಹಾಸಂಘದ ಬೆಂಗಳೂರು ನಗರ ಅಧ್ಯಕ್ಷ ಬಿ.ಎಂ. ಸುರೇಶ್ ಬಾಬು, ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಜನೇಯಲು. ಬಜೆಟ್ ನಲ್ಲಿ ಖಾಯಂ ಬಗ್ಗೆ ಏನನ್ನೂ ಹೇಳಿಲ್ಲ. ನೇರ ವೇತನ ಪೌರಕಾರ್ಮಿಕರಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ದಲಿತರು ಮತ್ತು ಶೋಷಿತರ ಬೆಂಬಲದಿಂದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಜ್ಯದ ಪೌರ ಕಾರ್ಮಿಕರ ಹಿತ ರಕ್ಷಣೆಗೆ ಯಾವುದೇ ಕಾರ್ಯಕ್ರಮ ಪ್ರಕಟಿಸಿಲ್ಲ. ಸ್ವಚ್ಛತಾ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವವರ ಹಿತ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದರು.


ಇದನ್ನೂ ಓದಿ- Cafe Coffee Day Story: ಪತಿ ಆತ್ಮಹತ್ಯೆ, ಕಂಪನಿಗೆ 7000 ಕೋಟಿ ಸಾಲ ಇತ್ತು, ಸಿಸಿಡಿಯ 'ರಕ್ಷಕ' ಮಾಳವಿಕಾ


ಪೌರಕಾರ್ಮಿರ ಪರವಾಗಿ ನಿರಂತರ ಹೋರಾಟ ಮಾಡುತ್ತಿರುವ ಸಂಘದ ರಾಜ್ಯಾಧ್ಯಕ್ಷ ನಾರಾಯಣ(ಮೈಸೂರು) ಅವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಬೇಕು. ಇಲ್ಲವಾದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ  ಅಧ್ಯಕ್ಷರನ್ನಾಗಿ ನೇಮಿಸಿದರೆ ಪೌರ ಕಾರ್ಮಿಕರ ಹಿತ ರಕ್ಷಣೆ ಸಾಧ್ಯವಾಗಲಿದೆ. ನಾರಾಯಣ ಅವರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯೆ ನೀಡಬೇಕು ಎಂದು ಒತ್ತಾಯಿಸಿದರು.


ಸುದ್ದಿಗೋಷ್ಠಿಯಲ್ಲಿ ಪೌರಕಾರ್ಮಿಕರ ಮಹಾಸಂಘದ ರಾಜ್ಯ ಕಾರ್ಯಧ್ಯಕ್ಷ ಎಂ.ನಾಗರಾಜು (ಹೆಬ್ಬಾಳ), ಉಪಾಧ್ಯಕ್ಷರು, ಬೆಂ. ನಗರ ಎಂ.ಜಿ. ಶ್ರೀನಿವಾಸ್  ಉಪಾಧ್ಯಕ್ಷರು, ಬೆಂ. ನಗರ ಡಿ.ಸುಧಾಕರ್, ಕಾರ್ಯಾಧ್ಯಕ್ಷರು, ಬೆಂ.ನಗರ      ಎಸ್.ವೆಂಕಟೇಶ್ವರಲು,  ಕಾರ್ಯಧ್ಯಕ್ಷರು, ಬೆಂ.ನಗರ ಹೆಚ್.ಬಿ.ಶೇಖರ್, ಮಹಿಳಾ ಅಧ್ಯಕ್ಷರು, ಬೆಂ.ನಗರ ಶ್ರೀಮತಿ.ಲಕ್ಷಮ್ಮ, ಸಹ ಪ್ರಧಾನ ಕಾರ್ಯದರ್ಶಿ ಗಂಗಣ್ಣ ಕಾರ್ಯದರ್ಶಿ, ಬೆಂ.ನಗರ ಬಿ. ಆನಂದಕುಮಾರ್, ಸಂಘನಾ ಕಾರ್ಯದರ್ಶಿ, ಬೆಂ.ನಗರ ಎಸ್.ಆರ್.ವೆಂಕಟೇಶ್ ಭಾಗವಹಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.