ಬೆಂಗಳೂರು: ಗಡಿಗಳನ್ನು ದಾಟಿ ವಿಶ್ವದ ಎಲ್ಲೆಡೆಗಳಲ್ಲೂ ಇರುವ ಮಲಯಾಳಿಗಳು ಕರ್ನಾಟಕದ ಅಭಿವೃದ್ಧಿಗೂ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಕೇರಳ ಸಮಾಜಂ ಸಂಘಟನೆಯು ಭಾನುವಾರ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಓಣಂ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದರು.


ಕೇರಳದ ಜನರು ಸೀಮಾತೀತರಾಗಿದ್ದು, ಪ್ರತಿಭೆ ಮತ್ತು ನಿರಂತರ ಕಲಿಕೆಗೆ ಹೆಸರುವಾಸಿ ಆಗಿದ್ದಾರೆ. ಕಾಸ್ಮೋಪಾಲಿಟನ್ ನಗರವಾದ ಬೆಂಗಳೂರು ಮಲಯಾಳಿಗಳನ್ನು ಕೂಡ ಆದರಿಸಿದೆ. ಇದಕ್ಕೆ ತಕ್ಕಂತೆ ಆ ಭಾಷಿಕರು ಕೂಡ ಇಲ್ಲಿನ ಸ್ಥಳೀಯ ಸಂಸ್ಕೃತಿಯನ್ನು ಮೈಗೂಡಿಸಿ ಕೊಂಡಿದ್ದಾರೆ ಎಂದು ಅವರು ನುಡಿದರು.


ಇದನ್ನೂ ಓದಿ: ಡಾ.ಪುನೀತ್ ರಾಜಕುಮಾರ್ ಜೀವನ ಶ್ರೇಷ್ಠ ಸಾಧನೆಗೆ ಫಿಲಂ ಫೇರ್ ಪುರಸ್ಕಾರ


ಬೇರೆ ರಾಜ್ಯಗಳಿಂದ ಬಂದು, ನಮ್ಮಲ್ಲಿ ನೆಲೆ ನಿಂತಿರುವ ಜನ ಸಮುದಾಯಗಳು ಸಾಂಸ್ಕೃತಿಕ ಆಚರಣೆಗಳ ನೆಪದಲ್ಲಿ ಒಂದೆಡೆ ಕಲೆತು, ಒಡನಾಡುವುದು ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.


ಕರ್ನಾಟಕ ರಾಜ್ಯವು ಹಲವು ಸಂಸ್ಕೃತಿಗಳನ್ನು ಮುಕ್ತವಾಗಿ ನೋಡುವ ತಾಣವಾಗಿದೆ. ಅವಕಾಶಗಳ ಆಡುಂಬೊಲವಾಗಿರುವ ರಾಜ್ಯವು ತನ್ನ ವೈವಿಧ್ಯದಿಂದ ಇಡೀ ಜಗತ್ತಿನ ಗಮನ ಸೆಳೆದಿದೆ ಎಂದು ಅವರು ಬಣ್ಣಿಸಿದರು.


ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.