ಮಲೆ ಮಹದೇಶ್ವರ ಬೆಟ್ಟ : ಮಾರ್ಚ್ 7ರಿಂದ 11ರವರೆಗೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ
Male Mahadeshwar : ಪ್ರಸಿದ್ದ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾರ್ಚ್ 7ರಿಂದ 11ರವರೆಗೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯಲಿದೆ.
Mahashivaratri Jatra Mahotsav from 7th to 11th March : ಚಾಮರಾಜನಗರದ ಹನೂರು ತಾಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾರ್ಚ್ 7ರಿಂದ 11ರವರೆಗೆ ಜಾತ್ರಾ ಮಹೋತ್ಸವ ಮತ್ತು ಏಪ್ರಿಲ್ 6ರಿಂದ 9ರವರೆಗೆ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ
ಮಾರ್ಚ್ 7 ರಿಂದ 11 ರವರೆಗೆ ನಡೆಯುವ ಕಾರ್ಯಕ್ರಮಗಳು :
ಮಾರ್ಚ್ 7 : ಮಹಾಶಿವರಾತ್ರಿ ಜಾತ್ರೆ ಪ್ರಾರಂಭ
ಮಾರ್ಚ್ 8 : ಸ್ವಾಮಿಗೆ ಎಣ್ಣೆಮಜ್ಜನ
ಮಾರ್ಚ್ 9 : ಸ್ವಾಮಿಗೆ ವಿಶೇಷ ಸೇವೆ ಉತ್ಸವಾದಿಗಳು
ಮಾರ್ಚ್ 10 : ಅಮವಾಸ್ಯೆ
ಮಾರ್ಚ್ 11 : ಬೆಳಗ್ಗೆ 9:40ರಿಂದ 10:10 ಗಂಟೆಯವರೆಗೆ ಮಹಾಶಿವರಾತ್ರಿ ಮಹಾರಥೋತ್ಸವ ಪ್ರಾರಂಭ
ರಾತ್ರಿ ಅಭಿಷೇಕ ಪೂಜೆ ಮುಗಿದ ನಂತರ ಕೊಂಡೋತ್ಸವ
ಇದನ್ನು ಓದಿ : KSRTC Job Recruitment : ಮಾರ್ಚ್ 6ರಂದು ದೇಹದಾರ್ಢ್ಯ ಪರೀಕ್ಷೆ ಹಾಗೂ ಮೂಲದಾಖಲಾತಿ ಪರಿಶೀಲನೆ
ಅಲ್ಲದೇ ಏಪ್ರಿಲ್ 6ರಿಂದ 9ರವರೆಗೆ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದೆ
ಏಪ್ರಿಲ್ 6 ರಿಂದ 9 ರವರೆಗೆ ನಡೆಯುವ ಕಾರ್ಯಕ್ರಮಗಳು :
ಏಪ್ರಿಲ್ 6 : ಯುಗಾದಿ ಜಾತ್ರೆ ಆರಂಭ
ಏಪ್ರಿಲ್ 7 : ಶ್ರೀ ಸ್ವಾಮಿಗೆ ಎಣ್ಣೆಮಜ್ಜನ
ಏಪ್ರಿಲ್ 8 : ಯುಗಾದಿ ಅಮವಾಸ್ಯೆ
ಏಪ್ರಿಲ್ 9 : ಬೆಳಗ್ಗೆ 7:30ರಿಂದ 9 ಗಂಟೆಯವರೆಗೆ ಚಾಂದ್ರಮಾನ ಯುಗಾದಿ, ಮಹಾರಥೋತ್ಸವ ಪ್ರಾರಂಭ
ಇದನ್ನು ಓದಿ : ತನ್ನ 18 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ವಿದಾಯ ಹೇಳಿದ ಅನುಭವಿ
ಈ ರೀತಿಯ ಕಾರ್ಯಕ್ರಮಗಳು ಮಾರ್ಚ್ 7 ರಿಂದ 11 ರವರೆಗೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಮತ್ತು ಏಪ್ರಿಲ್ 6 ರಿಂದ 9 ರವರೆಗೆ ಯುಗಾದಿ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.