ಹೆಂಡತಿ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿದ್ದ ಗಂಡನ ಬಂಧನ
ವಿಜಯಪುರ ಮೂಲದ ದಂಪತಿ ಕಳೆದ ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ನಗರಕ್ಕೆ ಬಂದು ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಬೆಂಗಳೂರು : ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿ ಯಾರಿಗೂ ಅನುಮಾನ ಬರಬಾರದು ಅಂತಾ ಪ್ಲ್ಯಾನ್ ಮಾಡಿ ನೇಣಿಗೆ ಶರಣಾಗಿರುವ ರೀತಿ ಹೈಡ್ರಾಮ ಮಾಡಿದ್ದ ಕಿಲಾಡಿ ಗಂಡ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿ ಸಿದ್ದಪ್ಪ ಬಸವರಾಜನನ್ನ ಹೆಂಡತಿ ಕೆಂಚಮ್ಮಳ ಕೊಲೆ ಆರೋಪದ ಮೇರೆಗೆ ಬಂಧಿಸಲಾಗಿದೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ವಾಸವಾಗಿದ್ದ ಆರೋಪಿ ಸಿದ್ದಪ್ಪ ಬಸವರಾಜ ಹೆಂಡತಿ ಕೆಂಚಮ್ಮಳನ್ನ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ : Today's Dam Water Level: ಯಾವ ಡ್ಯಾಂನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹ ವಾಗಿದೆ ಗೊತ್ತಾ; ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..!
ವಿಜಯಪುರ ಮೂಲದ ದಂಪತಿ ಕಳೆದ ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ನಗರಕ್ಕೆ ಬಂದು ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ವಿವಾಹವಾದ ಆರಂಭದಲ್ಲೇ ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಪ್ರತಿ ದಿನ ಇಬ್ಬರ ನಡುವೆ ಜಗಳವಾಗುತ್ತಿತ್ತು. ನಿನ್ನೆ ಸಹ ದಂಪತಿ ನಡುವೆ ಕಿರಿಕ್ ಶುರುವಾಗಿತ್ತು. ಇದೇ ಕೋಪದಲ್ಲಿ ಸಿದ್ದಪ್ಪ ಹೆಂಡತಿ ಕೆಂಚಮ್ಮಳ ಮೇಲೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ನಂತರ ಆತಂಕಗೊಂಡ ಸಿದ್ದಪ್ಪ, ಹತ್ಯೆ ವಿಷಯ ತಿಳಿದರೆ ಪೊಲೀಸರು ಬಂಧಿಸುತ್ತಾರೆ ಎಂದು ಭಾವಿಸಿ ತಾನೇ ಹೆಂಡತಿಯನ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಕ್ರೈಂ ಸೀನ್ ಸೃಷ್ಟಿ ಮಾಡಿ ಸಂಬಂಧಿಕರಿಗೆ ಪೋನ್ ಮಾಡಿ ನನ್ನ ಹೆಂಡತಿ ಸೂಸೈಡ್ ಮಾಡಿಕೊಂಡಿದ್ದಾಳೆ ಎಂದು ಕಥೆ ಹೇಳಿದ್ದಾನೆ. ತನ್ನ ಮೇಲೆ ಅನುಮಾನ ಬರಬಾರದು ಎನ್ನುವ ಉದ್ದೇಶದಿಂದ ಪೊಲೀಸರಿಗೂ ಕರೆ ಮಾಡಿ ಮಾಹಿತಿ ನೀಡಿದ್ದ.
ಇದನ್ನೂ ಓದಿ : EMRS Recruitment 2023: ಏಕಲವ್ಯ ಮಾದರಿ ಶಾಲೆಯಲ್ಲಿ 4,062 ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
ಇಂದು ಮುಂಜಾನೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಸಿದ್ದಪ್ಪನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.