ಬೆಂಗಳೂರು: ವೈವಾಹಿಕ ಸಂಬಂಧಕ್ಕೆ ವೇದಿಕೆಯಾಗಿರುವ ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ನಕಲಿ ಫ್ರೊಫೈಲ್ ರಚಿಸಿ ಯುವತಿಯರಿಗೆ ವಂಚಿಸುತ್ತಿದ್ದ ವ್ಯಕ್ತಿಯನ್ನು ಜೆಪಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚಿಕ್ಕನಾಯಕನಹಳ್ಳಿಯ ಹುಳಿಯಾರು ಮೂಲದ ದೀಪಕ್ ಎಂದು ಗುರುತಿಸಲಾಗಿದೆ.  


COMMERCIAL BREAK
SCROLL TO CONTINUE READING

ಬಂಧಿತ ಆರೋಪಿ ಬಿಎಸ್ಸಿ ಪದವೀಧರ. ಹಿಂದೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಸುಲಭವಾಗಿ ಹಣ ಸಂಪಾದಿಸಬೇಕು ಎನ್ನುವ ಚಟಕ್ಕೆ ಬಿದ್ದ ಈ ವ್ಯಕ್ತಿ  ಉದ್ಯೋಗದ ಹೆಸರಿನಲ್ಲಿ ವಂಚನೆ ಕೆಲಸಕ್ಕೆ ಕೈ ಹಾಕಿದ.ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ‌ ಕೊಡಿಸುವುದಾಗಿ ಉದ್ಯೋಗಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ. ನಂತರ ಈತ ಟಾರ್ಗೆಟ್ ಮಾಡಿದ್ದು ವಿಧವೆ ಅಥವಾ ಒಂಟಿ ಮಹಿಳೆಯರನ್ನು. ಫೇಸ್ ಬುಕ್ ನಲ್ಲಿ ನಕಲಿ ಫೇಜ್ ತೆರೆದು ಯಾರದ್ದೋ ಫೋಟೊ ಬಳಸಿಕೊಂಡು ತಾನೇ ಎಂದು ಬಿಂಬಿಸಿ ಮಹಿಳೆಯರನ್ನು ನಂಬಿಸುತ್ತಿದ್ದ. ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಮೋಸ ಮಾಡುತ್ತಿದ್ದ. 


ಇದನ್ನೂ ಓದಿ : Lok Sabha Election 2024: ದೇಶದ ಶೇ.75 ರಷ್ಟು ಜನರು ಮೋದಿ ಬೆಂಬಲಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ


ಇತ್ತೀಚೆಗೆ ಜೆ.ಪಿ.ನಗರದ 1ನೇ ಹಂತದಲ್ಲಿ ಮಹಿಳೆಯೊಬ್ಬರು ವಿವಾಹ ಮಾಡಿಕೊಳ್ಳಲು ವರನನ್ನ ಹುಡುಕುವ ಸಲುವಾಗಿ ಮ್ಯಾಟ್ರಿ ಮೋನಿ ಆ್ಯಪ್ ನಲ್ಲಿ ಲಾಗಿನ್ ಆಗಿದ್ದರು. ಈ ವೇಳೆ‌ ದೀಪಕ್ ಎಂಬುವರ  ಪ್ರೊಫೈಲ್ ಕಂಡು ಸಂಪರ್ಕಿಸಿದ್ದರು.ತಾನು ತಮಿಳುನಾಡಿನ ಮದುರೈಯ ಎಸ್ ಬಿಐ ಬ್ಯಾಂಕ್ ನಲ್ಲಿ‌ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವುದಾಗಿ ದೀಪಕ್ ಹೇಳಿಕೊಂಡಿದ್ದ. ಮಹಿಳೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದ. ಕಾಲಕ್ರಮೇಣ ಪರಸ್ಪರ ಇಬ್ಬರು ಕರೆ‌ ಮಾಡಿ ಮಾತನಾಡುತ್ತಿದ್ದರು.ಈ‌ ಮಧ್ಯೆ ತನ್ನ ವ್ಯಾಲೆಟ್ ಕಳೆದುಕೊಂಡಿದ್ದು ಹಣ ಬೇಕಾಗಿದೆ‌ ಎಂದು ಮಹಿಳೆಯಿಂದ 30 ಸಾವಿರ ಹಣ ಪಡೆದುಕೊಂಡಿದ್ದ.ಅಲ್ಲದೆ ತಾನು ಬಳಸುತ್ತಿರುವ ಸಿಮ್‌ ಬ್ಯಾಂಕ್ ನವರಾಗಿದ್ದು ಖಾಸಗಿಯಾಗಿ ಮಾತನಾಡಲು ಆಗುತ್ತಿಲ್ಲ.ಹೀಗಾಗಿ  ಸಿಮ್‌ ಖರೀದಿಸಿ ಕೊಡುವಂತೆಯೂ ಹೇಳಿದ್ದ. ಆದರೆ, ಮಹಿಳೆಯಿಂದ ಸಿಮ್‌ ಪಡೆಯುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ತಾನು ಮೋಸ ಹೋಗಿರುವ ವಿಚಾರಾ ತಿಳಿದ ಮಹಿಳೆ ತನ್ನ ಹೆಸರಿನಲ್ಲಿ ಖರೀದಿಸಿದ ಸಿಮ್ ಬ್ಲಾಕ್ ಮಾಡಿಸಿದ್ದರು.ಆರೋಪಿ ವಿರುದ್ಧ ದೂರು ನೀಡಿದ್ದರು.ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಆರೋಪಿಯನ್ನು ಇದೀಗ ಬಂಧಿಸಲಾಗಿದೆ. 


ವಂಚನೆಯನ್ನು ಕರಗತ ಮಾಡಿಕೊಂಡಿದ್ದ ಆರೋಪಿ ಮಹಿಳೆಯರನ್ನ ನೇರವಾಗಿ ಭೇಟಿಯಾಗುತ್ತಿರಲಿಲ್ಲ. ತನ್ನ ಮಾತುಗಳಿಂದಲೇ ನಂಬಿಸಿ ಅವರಿಂದ ಹಣ ಪಡೆಯುತ್ತಿದ್ದ.ಹಣವನ್ನು ಆನ್ ಲೈನ್ ಮೂಲಕವೇ ಹಾಕಿಸಿಕೊಳ್ಳುತ್ತಿದ್ದ. ಈ ವಂಚಕ ಎರಡು ದಿನ ಅಂತರದಲ್ಲಿ 10 ಮೊಬೈಲ್ ನಂಬರ್ ಬದಲಾಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ : PUC Results: ಕರ್ನಾಟಕದಲ್ಲಿ ಪ್ರಥಮ ಮತ್ತು ದ್ವಿತಿಯ ಪಿಯುಸಿಯಲ್ಲಿ ಒಂದೇ ಅಂಕ ಪಡೆದ ಅವಳಿ ಸಹೋದರಿಯರು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.