ವಿಧಾನಸಭೆಯಲ್ಲಿ ಮಾನಸ ಸರೋವರ ಯಾತ್ರಾರ್ಥಿಗಳ ಸಂಕಷ್ಟ ಪ್ರಸ್ತಾಪ
ಕರ್ನಾಟಕದ ಯಾತ್ರಾರ್ಥಿಗಳಿಗೆ ನೀರು, ಆಹಾರವಿಲ್ಲ. ಅವರ ಸಂಬಂಧಿಕರು ಕೂಡ ಆತಂಕದಲ್ಲಿದ್ದಾರೆ. ನೇಪಾಳ ಸರ್ಕಾರದ ಜೊತೆಗೆ ಸಂಪರ್ಕಿಸಿ ಪರಿಹಾರದ ಬಗ್ಗೆ ಮಾತನಾಡಿದ್ದೀರಾ?- ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು: ಮೈತ್ರಿ ಸರ್ಕಾರದ ಎರಡನೇ ದಿನದ ಅಧಿವೇಶನದಲ್ಲಿಂದು ಕೈಲಾಸ ಮಾನಸ ಸರೋವರಕ್ಕೆ ತೆರಳಿರುವ ಕರ್ನಾಟಕದ 200ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿರುವ ವಿಷಯ ಸದ್ದು ಮಾಡಿದೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಕರ್ನಾಟಕದ ಯಾತ್ರಾರ್ಥಿಗಳಿಗೆ ನೀರು, ಆಹಾರವಿಲ್ಲ. ಅವರ ಸಂಬಂಧಿಕರು ಕೂಡ ಆತಂಕದಲ್ಲಿದ್ದಾರೆ. ನೇಪಾಳ ಸರ್ಕಾರದ ಜೊತೆಗೆ ಸಂಪರ್ಕಿಸಿ ಪರಿಹಾರದ ಬಗ್ಗೆ ಮಾತನಾಡಿದ್ದೀರಾ? ಎಂದು ಪ್ರಶ್ನಿಸಿದರು.
ಸದನದಲ್ಲಿ ಇದಕ್ಕೆ ಉತ್ತರಿಸಿದ ಸಚಿವ ಆರ್.ವಿ. ದೇಶಪಾಂಡೆ ಕರ್ನಾಟಕದ 250 ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಾಜ್ಯದ ಯಾತ್ರಿಕರಿಗೆ ನೀರು, ಆಹಾರದ ಜೊತೆಗೆ ಅಗತ್ಯವಿರುವ ಔಷಧಗಳನ್ನು ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದ ಎಲ್ಲಾ ಯಾತ್ರಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು.