ಬೆಂಗಳೂರಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ಮಹರ್ಷಿ ಶ್ರೀ ಅರವಿಂದರ ತತ್ವಬೋಧನೆ
ಪಸಕ್ತ ವರ್ಷ(2022)ದಲ್ಲಿ ಶ್ರೀ ಅರವಿಂದರ 150ನೇ ಜನ್ಮ ವಾರ್ಷಿಕೋತ್ಸವ ಆಚರಿಸಲು ಪ್ರಧಾನಿ ನರೇಂದ್ರ ಮೋದಿಯವರು ಉನ್ನತ-ಶಕ್ತಿ ಸಮಿತಿ ರಚಿಸಿದ್ದಾರೆ.
ಬೆಂಗಳೂರು: ಸತ್ಸಂಗ ಪ್ರತಿಷ್ಠಾನದ (TSF) ಸ್ವಯಂಸೇವಕರು ಇದೇ ತಿಂಗಳ ಮೇ 7 ರಂದು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ‘ಮಾನವ ಸೇವೆ’ಯನ್ನು ಬೆಂಬಲಿಸಲು ಯೋಜಿಸಲಾದ ಇಂತಹ ಹಲವು ಜೈಲು ಭೇಟಿಗಳಲ್ಲಿ ಇದು ಮೊದಲನೆಯದಾಗಿದೆ. ಏಪ್ರಿಲ್ 18ರಂದು ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯೋಗಿ ಶ್ರೀ ಎಂ(ಶ್ರೀ ಮಹೇಶ್ವರನಾಥ ಬಾಬಾಜಿಯವರ ಶಿಷ್ಯ) ಅವರು ‘ಮಾನವ ಸೇವೆ’ಯನ್ನು ಪ್ರಾರಂಭಿಸಿದ್ದರು.
ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿರುವ ತೆರೆದ ಸಭಾಂಗಣವು ತುಂಬಿತ್ತು. ಸುಮಾರು 350ಕ್ಕೂ ಹೆಚ್ಚು ಕೈದಿಗಳಿದ್ದರು. ಯಾವುದೋ ಕಾರಣಕ್ಕೆ ಅಪರಾಧವೆಸಗಿ ಜೈಲುಪಾಲಾದ ಕೈದಿಗಳ ಜೀವನದಲ್ಲಿ ಬದಲಾವಣೆ ತರಲು ಅಥವಾ ಅವರ ಮನಃಪರಿವರ್ತನೆ ಮಾಡುವ ನಿಟ್ಟಿನಲ್ಲಿ ಮಹರ್ಷಿ ಶ್ರೀ ಅರವಿಂದ(Sri Aurobindo) ಘೋಷ್‍ರ ತತ್ವಬೋಧನೆ, ಸಂದೇಶಗಳನ್ನು ಬೋಧಿಸಲಾಯಿತು. ಇದೇ ವೇಳೆ 3 ವಿಶೇಷ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ಪೈಕಿ ಒಂದು ಅಲಿಪೋರ್ ಕಾರಾಗೃಹದ ಶ್ರೀ ಅರವಿಂದರ ಜೀವನ ಮತ್ತು ಇನ್ನೊಂದು ಶ್ರೀ ಎಂ ಅವರ ಜೀವನದ ಕುರಿತದ್ದಾಗಿತ್ತು.
19 ವರ್ಷಗಳ ಬಳಿಕ ಈ ಗ್ರಾಮದಲ್ಲಿ ನರಬಲಿ ಆಚರಣೆ.. 6 ತಾಸು ಉಸಿರಾಟ ನಿಲ್ಲಿಸ್ತಾರಂತೆ ವ್ಯಕ್ತಿ!
ನಂತರ ಭಾರತೀಯ ಯೋಗ ವಿದ್ಯಾ ಕೇಂದ್ರದ (BYVK) ಬೋಧಕರು ಕೈದಿಗಳಿಗೆ ಅಷ್ಟಾಂಗ ಯೋಗ ಮತ್ತು ಮನಸ್ಸು ಶಾಂತಗೊಳಿಸುವಲ್ಲಿನ ಅದರ ಉಪಯುಕ್ತತೆಯ ಬಗ್ಗೆ ತಿಳಿಸಿಕೊಟ್ಟರು. ನಂತರ ಕರ್ನಾಟಕ ಕಾರಾಗೃಹಗಳ ಡಿಜಿ ಮತ್ತು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದ ನಂತರ ಬೆಂಗಳೂರಿನ ಸತ್ಸಂಗ ಪ್ರತಿಷ್ಠಾನದ ಸ್ವಯಂಸೇವಕರನ್ನು ಜೈಲಿನ FSSAI ಪ್ರಮಾಣೀಕೃತ ನೈರ್ಮಲ್ಯ, ಅರೆ-ಸ್ವಯಂಚಾಲಿತ ಅಡುಗೆಮನೆ ಪ್ರವಾಸಕ್ಕೆ ಕರೆದೊಯ್ಯಲಾಯಿತು. ಇಲ್ಲಿ ಪ್ರತಿದಿನವೂ ಸುಮಾರು 7 ಸಾವಿರಕ್ಕೂ ಹೆಚ್ಚು ಕೈದಿಗಳಿಗೆ ಆಹಾರ ತಯಾರಿಸಲಾಗುತ್ತದೆ.
18 ರಿಂದ 24 ವರ್ಷದೊಳಗಿನ ಕೈದಿಗಳ ಪ್ರಿಸನ್ ಯೂತ್ ಬ್ಯಾಂಡ್‌ನಿಂದ ಭಕ್ತಿ ಮತ್ತು ದೇಶಭಕ್ತಿ ಗೀತೆಗಳ ಮಧುರವಾದ ವಾಚನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಇದೇ ವೇಳೆ ಸತ್ಸಂಗ ಪ್ರತಿಷ್ಠಾನದ ಸ್ವಯಂಸೇವಕರು ಗ್ರಂಥಾಲಯಕ್ಕೆ ಭೇಟಿ ನೀಡಿದರು.
ಸಿದ್ದರಾಮಯ್ಯ ನೀವು ನಿಂತ ನೆಲವೇ ಭದ್ರವಾಗಿಲ್ಲ, ವಿಪಕ್ಷ ಸ್ಥಾನ ಕಟ್ಟಿಟ್ಟಬುತ್ತಿ: ಬಿಜೆಪಿ
ಏಪ್ರಿಲ್ 18ರಂದು ಶ್ರೀ ಎಂ ಅವರು ಜೈಲಿನಲ್ಲಿರುವ ಕೈದಿಗಳನ್ನು ಭೇಟಿ ಮಾಡಿ ಮಾತನಾಡಿದ್ದರು. ಕೈದಿಗಳ ಜೀವನದಲ್ಲಿ ಮನಃಪರಿವರ್ತನೆ ತರುವ ಮಾನವೀಯ ಉದ್ದೇಶ ಬೆಂಬಲಿಸುವ ಉಪಕ್ರಮವಾದ ‘ಮಾನವ ಸೇವೆ’ಗೆ ಇದೇ ವೇಳೆ ಚಾಲನೆ ನೀಡಿದ್ದರು.
ಸತ್ಸಂಗ ಪ್ರತಿಷ್ಠಾನವು ಭಾರತದಾದ್ಯಂತ ಅನೇಕ ನಗರಗಳಲ್ಲಿರುವ ಜೈಲುಗಳನ್ನು ತಲುಪಲು ಬದ್ಧವಾಗಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಡೆಸುತ್ತಿರುವ ನಿರಂತರ ಪ್ರಯತ್ನವು ದೀರ್ಘಾವಧಿಯಲ್ಲಿ ಖೈದಿಗಳ ಜೀವನವನ್ನು ಖಂಡಿತ ಪರಿವರ್ತಿಸಲಿದೆ. ಅಪರಾಧಿಯಾಗಿ ಜೈಲಿನಲ್ಲಿ ಜೀವನ ನಡೆಸುತ್ತಿರುವ ಕೈದಿಗಳು ಹೆಚ್ಚು ಜವಾಬ್ದಾರಿಯುತ ಮತ್ತು ಉತ್ತಮ ನಾಗರಿಕರಾಗಲು ಇದು ಸಹಾಯ ಮಾಡಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.