ದಕ್ಷಿಣ ಕನ್ನಡ: ಉತ್ತರ ಭಾರತ ಪ್ರವಾಸಕ್ಕೆ ತೆರಳಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೇರಳ, ತಮಿಳುನಾಡಿನ ಒಂದಿಬ್ಬರು ಸೇರಿದಂತೆ ಜಿಲ್ಲೆಯ ಸುಮಾರು 92 ಮಂದಿ ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದರು.


COMMERCIAL BREAK
SCROLL TO CONTINUE READING

ಅವರು ಜುಲೈ 19ರಂದು ಗುಜರಾತಿನ ವೆರಾವಲ್​ನಲ್ಲಿರುವ ಶ್ರೀ ಸೋಮನಾಥ ದೇವಾಲಯದ ದರ್ಶನಕ್ಕೆ ತೆರಳಿದ್ದ ವೇಳೆ ಯಾತ್ರಿಕರು ಕೆಲಹೊತ್ತು ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದರು.


ಗುಜರಾತ್​ನಲ್ಲಿ ಕಳೆದ 15 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಹೀಗಾಗಿ ವೆರಾವಲ್ ಪ್ರದೇಶದಲ್ಲಿ ಏಕಾಏಕಿ ಪ್ರವಾಹದ ಸ್ಥಿತಿ ನಿರ್ಮಾಣಗೊಂಡು ರಸ್ತೆಗಳಲ್ಲಿ ನೀರು ಸುತ್ತುವರೆದಿತ್ತು.


ಇದನ್ನೂ ಓದಿ: Trains Service: ರೈಲುಗಳ ಸೇವೆ ವಿಸ್ತರಣೆ ಎಲ್ಲೆಲ್ಲಿ, ಇಲ್ಲಿದೆ ನೋಡಿ ಡಿಟೈಲ್ಸ್!


ಸೋಮನಾಥನ ದರ್ಶನ ಮಾಡಿ ಹಿಂದಿರುಗುವ ವೇಳೆ ಇವರೆಲ್ಲರೂ ಪ್ರವಾಹದ ನೀರಿನಲ್ಲಿ ಸಿಲುಕಿದ್ದರು. ಬಳಿಕ ಸ್ಥಳೀಯ ಜಿಲ್ಲಾಡಳಿತ ಇವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದೆ. ಇವರು ದೇವರ ದರ್ಶನ ಮುಗಿಸಿ ವೆರಾವಲ್ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 10ರ ರೈಲಿಗೆ ಮತ್ತೊಂದು ಕ್ಷೇತ್ರಕ್ಕೆ ತೆರಳಬೇಕಿತ್ತು.


ಆದರೆ, ರೈಲ್ವೇ ಹಳಿಗಳಲ್ಲೂ ನೀರು ತುಂಬಿದ್ದ ಪರಿಣಾಮ ರೈಲು ರಾತ್ರಿ ಹೊರಡಲಿದೆ. ಹೀಗಾಗಿ ಜಿಲ್ಲೆಯವರೆಲ್ಲರೂ ಸುರಕ್ಷಿತವಾಗಿ ರೈಲು ನಿಲ್ದಾಣದಲ್ಲಿ ಉಳಿದುಕೊಂಡಿದ್ದಾರೆ ಎಂದು ಯಾತ್ರೆಗೆ ತೆರಳಿದವರು ಮಾಹಿತಿ ನೀಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.