ಶೂಟಿಂಗ್ ವಿಶ್ವಕಪ್ - ಮನು ಭಾಕೆರ್ಗೆ ಒಲಿದ ಎರಡನೇ ಸ್ವರ್ಣ ಪದಕ
ನವದೆಹಲಿ: ಭಾರತದ ಪಿಸ್ತೂಲ್ ಶೂಟರ್ ಮನು ಭೇಕರ್ ವಿಶ್ವಕಪ್ ನ ಚೊಚ್ಚಲ ಮಹಿಳಾ 10 ಮಿ ಏರ್ ಪಿಸ್ತೋಲ್ ಚಿನ್ನವನ್ನು ಗೆದ್ದ ನಂತರ, ಓಂ ಪ್ರಕಾಶ್ ಮಿಥರ್ವಲ್ ಜೊತೆ ಸೇರಿ 10 ಮಿ ಏರ್ ಪಿಸ್ತೋಲ್ ವಿಭಾಗದಲ್ಲಿ ಭೇಕರ್ ಎರಡನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಆ ಮೂಲಕ ಭಾರತ ತಂಡವು ಮೆಕ್ಸಿಕೋದ ಗ್ವಾಡಲಜಾರದಲ್ಲಿ ನಡೆಯುತ್ತಿರುವ ವಿಶ್ವಕಪ್ ರೈಫಲ್,ಪಿಸ್ತೋಲ್,ಶಾಟ್ಗನ್ ವಿಭಾಗದಲ್ಲಿ ಏಳು ಪದಕಗಳನ್ನು ಮುಡಿಗೆರಿಸಿಕೊಂಡು ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ.
ವಿಶ್ವಕಪ್ ಫೈನಲ್ ಪಂದ್ಯದಲ್ಲಿ, ಆರಂಭದಿಂದಲೂ ಮೂರು ಜೋಡಿಗಳು ಸ್ಪರ್ಧೆಯಲ್ಲಿದ್ದವು. ಭಾರತದ ಪರವಾಗಿ ಮನು ಮತ್ತು ಓಂ ಪ್ರಕಾಶ್ ಪ್ರತಿನಿಧಿಸಿದರೆ, ಯುರೋಪಿಯನ್ ತಂಡದ ಪರವಾಗಿ ಜರ್ಮನಿ ಮತ್ತು ಫ್ರೆಂಚ್ ನ ಸೆಲೀನ್ ಗೋಬರ್ವಿಲ್ಲೆ ಮತ್ತು ಫ್ಲೋರಿಯನ್ ಫೌಕ್ವೆಟ್ ಭಾಗವಹಿಸಿದ್ದರು. ಈ ಮೂರು ತಂಡಗಳ ನಡುವೆ ನಡೆದ ನಿರ್ಣಾಯಕ ಘಟ್ಟದಲ್ಲಿ ಕೊನೆಯದಾಗಿ ಭಾರತ ಮತ್ತು ಜರ್ಮನ್ ತಂಡಗಳು ಫ್ರೆಂಚ್ ಗಿಂತ ಮುನ್ನಡೆ ಸಾಧಿಸಿದವು.
ಅಂತಿಮ ಹಂತದಲ್ಲಿ ಮನು ಮತ್ತು ಓಂ ಪ್ರಕಾಶ್ ಅವರು ಪರಿಣಾಮಕಾರಿ ಹೊಡೆತಗಳ ಮೂಲಕ ಭಾರತ ತಂಡವು 476.1 ಅಂಕವನ್ನು ಗಳಿಸಿದರೆ ಜರ್ಮನಿ ತಂಡವು 475.2 ಗಳಿಸಿತು. ಆ ಮೂಲಕ ಭಾರತದ ಮಿಶ್ರ ಜೋಡಿ ಸ್ವರ್ಣ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.