ಬೆಂಗಳೂರು: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನ ಹಲವು ಕೆರೆಗಳು ಭರ್ತಿಯಾಗಿದ್ದು, ರಸ್ತೆಗಳಲ್ಲಿ ನೀರು ಆವರಿಸಿದೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನ ಹುಳಿಮಾವು ಕೆರೆ, ಸುಬ್ಬರಯನಕೆರೆ, ದೊರೆಕೆರೆ, ಬಸವನಪುರ ಕೆರೆ, ಗುಬ್ಬಲಾಲ ಕೆರೆ, ಗೊಟ್ಟಿಗೆರೆ ಕೆರೆ, ಕಾಳೇನ  ಅಗ್ರಹಾರ ಕೆರೆ, ವಸಂತಪುರ ಕೆರೆ ಮತ್ತು ದೊಡ್ಡ ಕಲ್ಲಸಂಗ್ರ ಕೆರೆಗಳು ಮಳೆ ನೀರಿನಿಂದಾಗಿ ಭರ್ತಿಯಾಗಿವೆ. 


ಅಷ್ಟೇ ಅಲ್ಲದೆ, ಬೆಳ್ಳಂದೂರು ಕೆರೆ ಕೋಡಿ ಬಳಿ ಬೆಟ್ಟದಂತೆ ನೊರೆ ಶೇಖರಣೆಯಾಗಿದೆ. ಬೆಳ್ಳಂದೂರು ಹೆಚ್.ಎ.ಎಲ್ ಮಾರ್ಗವಾಗಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ಆ ಪ್ರದೇಶದ ನಿವಾಸಿಗಳಿಗೆ ನೊರೆಯಿಂದ ಸಾಕಷ್ಟು ತೊಂದರೆ ಉಂಟಾಗಿದೆ.



ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಒಂದೆಡೆಯಾದರೆ, ನೊರೆ ಸಮಸ್ಯೆ ಜನರನ್ನು ಮತ್ತಷ್ಟು ಕಂಗೆಡಿಸಿದೆ.