ಮಂಡ್ಯ ಜನ ಅಮೃತ ಕೊಟ್ಟರು ಆದರೆ, ಕುಮಾರಸ್ವಾಮಿ ಮಾತ್ರ ವಿಷ ಕೊಟ್ರು.ಈ ಬಾರಿ ಕುಮಾರಸ್ವಾಮಿಗೆ ಮಂಡ್ಯ ಜನ ಹಾಲು ಕೊಡ್ತಾರೆ, ಆದ್ರೆ ಕುದಿಯುವ ಬಿಸಿ ಹಾಲು ಕೊಡ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮರಿತಿಬ್ಬೇಗೌಡ ವಾಗ್ದಾಳಿ ನಡೆಸಿದರು. 


COMMERCIAL BREAK
SCROLL TO CONTINUE READING

ಕುಮಾರಸ್ವಾಮಿ ನಾಗಮಂಗಲದಲ್ಲಿ ಮಂಡ್ಯ ಜನ ಹಾಲನ್ನಾದ್ರು ಕೊಡಿ, ವಿಷನಾದ್ರು ಕೊಡಿ ಅಂತಾರೆ. ಕುಮಾರಸ್ವಾಮಿಗೆ, ದೇವೇಗೌಡ್ರುಗೆ ಮಂಡ್ಯ ಜನ ಯಾವತ್ತು ವಿಷ ಕೊಟ್ಟಿಲ್ಲ. ಮಂಡ್ಯ ಜಿಲ್ಲೆಯ ಜನತೆ ಸದಾ ಹಾಲು ಕೊಟ್ಟಿದ್ದಾರೆ, ವಿಷ ಕೊಟ್ಟಿಲ್ಲ.
ಅವರ ತಂದೆ ಪ್ರಧಾನ ಮಂತ್ರಿ, ಸಿಎಂ ಆದ್ರೂ, ತಾವು ಸಿಎಂ ಆದ್ರೂ ಮಂಡ್ಯ ಜನಕ್ಕೆ ಬರಿ ವಿಷ ಕೊಟ್ಟಿದ್ದೀರಿ. ಮಂಡ್ಯ ಜನರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮರಿತಿಬ್ಬೆಗೌಡ (Maritibbe Gowda) ದೊಡ್ಡ ಗೌಡರ ಕುಟುಂಬದ ವಿರುದ್ಧ ಆಕ್ರೋಶ ಹೊರಹಾಕಿದರು. 


ಇದನ್ನೂ ಓದಿ- ಬಡವರು, ಮಧ್ಯಮವರ್ಗದವರ ಭವಿಷ್ಯ ಉಳಿಯಬೇಕಾದರೆ ಇದು ನಿರ್ಣಾಯಕ ಚುನಾವಣೆ, ಯೋಚಿಸಿ ನಿರ್ಧರಿಸಿ: ಸಿಎಂ


ಇದೇ ವೇಳೆ, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ (Loksabha Election) 8 ಸಾವಿರ ಕೋಟಿ ಕೊಡ್ತೇನೆ ಅಂದ್ರಿ, 8 ರೂಪಾಯಿ ಕೊಟ್ಟಿಲ್ಲ. ಮಂಡ್ಯ ಜನ ಅಮೃತ ಕೊಟ್ಟರು ನೀವು ಮಾತ್ರ ವಿಷ ಕೊಟ್ರಿ. ಎರಡು ವರ್ಷದಲ್ಲಿ ಮಂಡ್ಯ ಅಭಿವೃದ್ಧಿ (Mandya Development) ಮಾಡ್ತೀನಿ ಅಂದ್ರಿ. ಇಷ್ಟು ದಿನ ಕೊಟ್ಟರು ಅಭಿವೃದ್ಧಿ ಕೆಲಸ ಮಾಡಿಲ್ಲ. ಮಂಡ್ಯ ಜನ ಕುಮಾರಸ್ವಾಮಿಗೆ (HD Kumaraswamy) ಇಷ್ಟು ದಿನ ಹಾಲು ಕೊಟ್ಟಿದ್ದಾರೆ, ನೀವು ಕಣ್ಣು ಮುಚ್ಚಿ ಹಾಲು ಕುಡಿದು ಹೋಗಿದ್ದಿರಿ. ಈ ಬಾರಿಯು ಮಂಡ್ಯ ಜನ ಹಾಲು ಕೊಡ್ತಾರೆ ಆದ್ರೆ ಕುದಿಯುವ ಬಿಸಿ ಹಾಲು ಕೊಡ್ತಾರೆ ಎಂದರು. 


ಮೇಕೆದಾಟು ಯೋಜನೆಗೆ ಅನುಮತಿ!
ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರೇ ನರೇಂದ್ರ ಮೋದಿ (PM Narendra Modi) ಜೊತೆ ಮಾತಾನಾಡಿ ಮೇಕೆದಾಟು ಯೋಜನೆಗೆ (Mekedatu Yojane) ಅನುಮತಿ ಪಡೆದಿಲ್ಲ. ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡವರು ನೀವು. ಬೀಗ ನನ್ನ ಕೈ ನಲ್ಲಿಲ್ಲ ಕೇಂದ್ರದಲ್ಲಿದೆ ಅಂತೀರಿ ಇವಾಗ ಯಾರ ಕೈ ನಲ್ಲಿದೆ? ಎಂದು ಪ್ರಶ್ನಿಸಿದರು. 


ಇದನ್ನೂ ಓದಿ- ಶಿಷ್ಯನನ್ನು ಸೋಲಿಸಲು ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ.!


ಕುಮಾರಸ್ವಾಮಿ ಎಷ್ಟು ಸುಳ್ಳು ಹೇಳ್ತಾರೆ?
ನಿಮ್ಮನ್ನು ಸಿಎಂ ಮಾಡಿದ್ದು ಹಾಗೂ ನಿಮ್ಮ ತಂದೆಯನ್ನ ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷ.  ಸ್ವಂತ ಬಲದ ಮೇಲೆ ಸರ್ಕಾದ ರಚಿಸಿ ರೈತರ ಸಾಲ ಮನ್ನಾ ಮಾಡಿಲ್ಲ. ಕಾಂಗ್ರೆಸ್ ನಿಂದ ಅಧಿಕಾರ ಪಡೆದು ಸಾಲ ಮನ್ನ ಮಾಡಿದ್ದು. ರೈತರ ಸಾಲಮನ್ನದ ಕ್ರೆಡಿಟ್ ಕಾಂಗ್ರೆಸ್ ಗೆ ಸಲ್ಲುತ್ತೆ. ಸಿದ್ದರಾಮಯ್ಯ ರೈತರ, ಒಕ್ಕಲಿಗರ ವಿರೋಧಿನಾ? ಎಂದು ಪ್ರಶ್ನಿಸಿದರಲ್ಲದೆ, ಅಧಿಕಾರ ಕೊಟ್ಟರು ಏನು ಮಾಡದವರು ಇವಾಗ ಮಾಡ್ತಿರಾ? ಮಂಡ್ಯ ಜಿಲ್ಲೆಗೆ ಒಂದು ಕೊಡುಗೆ ಕೊಟ್ಟಿದ್ದಿರಾ? ಎಂದು ವ್ಯಂಗ್ಯವಾಡಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.