ಏಕಾಏಕಿ 18 ಪಟ್ಟು ಹೆಚ್ಚಾದ ಅಂಕಪಟ್ಟಿ ಖರೀದಿ ವೆಚ್ಚ
ಅಂಕಪಟ್ಟಿ ಖರೀದಿಯಿಂದ ಹಣ ನುಂಗಲು ಮುಂದಾಗಿದೆ ಬೆಂಗಳೂರು ವಿಶ್ವವಿದ್ಯಾಲಯ.
ಬೆಂಗಳೂರು: ಬೆಂಗಳೂರು ವಿವಿಯಲ್ಲಿ ಅಂಕಪಟ್ಟಿ ಖರೀದಿಯ ವೆಚ್ಚ ಏಕಾಏಕಿ 18 ಪಟ್ಟು ಹೆಚ್ಚಾಗಿದೆ.
ಈ ಮೊದಲು 1 ರೂ. 98 ಪೈಸೆ ಇದ್ದ ಅಂಕಪಟ್ಟಿಯ ವೆಚ್ಚ ಇದೀಗ 36 ರೂಪಾಯಿಗೆ ಏರಿಕೆಯಾಗಿದೆ. ಅಲ್ಲದೆ ಮಾರ್ಕ್ಸ್ ಕಾರ್ಡ್ ಪೂರೈಕೆಗೆ ಟೆಂಡರ್ ಪ್ರಕ್ರಿಯೆಯನ್ನು ಸಹ ವಿವಿ ಅನುಸರಿಸಿಲ್ಲ.
ಎಂಎಸ್ಐಎಲ್ ಇಂದಲೇ ಅಂಕಪಟ್ಟಿ ಖರೀದಿಸುವಂತೆ ಸರ್ಕಾರ ಬೆಂಗಳೂರು ವಿವಿಗೆ ಸೂಚಿಸಿದೆ ಮೂಲಗಳು ತಿಳಿಸಿದ್ದು, ಸರ್ಕಾರದ ಆದೇಶದಂತೆ ಟೆಂಡರ್ ಪ್ರಕ್ರಿಯೆ ನಡೆಸದೆ ಅಂಕಪಟ್ಟಿ ಪೂರೈಕೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ಅಸಮಧಾನಗೊಂಡಿರುವ ವಿವಿ ಆರ್ಥಿಕ ಸಮಿತಿ ಎಂಎಸ್ಐಎಲ್ ಕಾಂಟ್ರಾಕ್ಟ್ ಬಗ್ಗೆ ತಮಗೂ ಆಕ್ಷೇಪ ಇದೆ. ಆದರೆ, ಸರ್ಕಾರದ ಆದೇಶವನ್ನು ಗೌರವಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದೆ.