New Education Policy: ಹೊಸ ಶಿಕ್ಷಣ ನೀತಿ ಆರಂಭವಾಗುತ್ತಿದ್ದಂತೆ ಈಗಾಗಲೇ ಹಂತ ಹಂತವಾಗಿ  ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಬಹುದು. ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಹಲವು ರೀತಿಯಿಂದ  ಶಿಕ್ಷಣ ನೀತಿ ಪ್ರಯತ್ನ ಆರಂಭಿಸಲಾಗಿದೆ.  ಈ ಪ್ರಕಾರ 9 ಮತ್ತು 10ನೇ ತರಗತಿ ಹಾಗೂ ಪಿಯು ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಈ ಕುರಿತು ರಾಷ್ಟ್ರೀಯ ಪಠ್ಯಕ್ರಮದಿಂದ ಕರಡು ಪೂರ್ವ ವರದಿ ಬಿಡುಗಡೆಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Online Medicine: ಆನ್‌ಲೈನ್‌ನಲ್ಲಿ ಔಷಧಿ ಖರೀದಿಸುವವರೇ ಎಚ್ಚರ..!


ಯಾವ ರೀತಿ ಬದಲಾವಣೆ?


• ಈ ಹಿಂದಿನ 10 ಪ್ಲಸ್‌ 2 ನೀತಿಯ ಬದಲಾಗಿ 5 ಪ್ಲಸ್‌ 3 ಪ್ಲಸ್‌ 3 ಪ್ಲಸ್‌ 3 ಪ್ಲಸ್‌ 4 ಪದ್ಧತಿ ಜಾರಿ ಮಾಡಬೇಕು. 
• 11 ಮತ್ತು 12ನೇ ತರಗತಿಗಳಿಗೆ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಆಯೋಜಿಸಬೇಕು. ಸೆಮಿಸ್ಟರ್‌ ಮಾದರಿ ಅಳವಡಿಕೆಗೆ ಒತ್ತು
• 10 ಹಾಗೂ 12ನೇ ಕ್ಲಾಸಿನ ವಿದ್ಯಾರ್ಥಿಗಳ ಪರೀಕ್ಷಾ ಮೌಲ್ಯಮಾಪನದ ವೇಳೆ ಹಿಂದಿನ ತರಗತಿಯ ಅಂಕಗಳ ಪರಿಗಣೆನೆ 
• 11 ಮತ್ತು 12ನೇ ತರಗತಿಗೆ ಒಟ್ಟು 16 ವಿಷಯಗಳನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡಿ, ಪರೀಕ್ಷೆ ಬರೆಯಬೇಕು.
• 11 ಹಾಗೂ 12ನೇ ತರಗತಿಯಲ್ಲಿ ಆಟ್ಸ್‌ರ್‍, ಕಾಮರ್ಸ್‌, ಸೈನ್ಸ್‌ ಎಂಬ 3 ವಿಭಾಗ ಬೇಡ.
- ಅದರ ಬದಲು ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.
- ಈ ಹೊಸ ಮಾದರಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಬಹುದು.


ಇದನ್ನೂ ಓದಿ: ಮಾಧ್ಯಮಗಳಲ್ಲಿ ಪ್ರಚಾರದ ಪ್ರಸಾರಕ್ಕೆ ಅನುಮತಿ ಕಡ್ಡಾಯ: ಉಲ್ಲಂಘನೆ ಆದ್ರೆ ಕಾನೂನು ಕ್ರಮ


ಹೊಸ ಶಿಕ್ಷಣ ನೀತಿ ಹಾಗೂ ಅದರ ವರದಿಯಲ್ಲಿನ ಅಂಶಗಳ ಬಗ್ಗೆ ಶಿಕ್ಷಣ ಸಂಸ್ಥೆಗಳು, ಪೋಷಕರು, ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗೆ ಆಹ್ವಾನ ಮಾಡಲಾಗಿದೆ. ಈ ಆಕ್ಷೇಪಣೆ ಆಹ್ವಾನದಲ್ಲಿ ಪಾಲಕರು ತಮ್ಮ ಆಕ್ಷೇಪ ಅಭಿಪ್ರಾಯಗಳನ್ನು ಶಿಕ್ಷಣ ಇಲಾಖೆಗೆ ತಿಳಿಸುವ ಅವಕಾಶ ನೀಡಿದೆ. ಇಸ್ರೋ ಮಾಜಿ ಮುಖ್ಯಸ್ಥ ಕೆ. ಕಸ್ತೂರಿರಂಗನ್‌ ನೇತೃತ್ವದ 12 ತಜ್ಞರ ಸಮಿತಿ ಕೇಂದ್ರ ಸರ್ಕಾರದ ಸೂಚನೆ ಅನ್ವಯ ಈ ವರದಿಯನ್ನು ಸಿದ್ಧಪಡಿಸಲಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.