ಚಿಕ್ಕೋಡಿ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ವಿಚಾರ ಸಂಬಂಧಿಸಿದಂತೆ ಹುಕ್ಕೇರಿಯಲ್ಲಿ ಶಕ್ತಿ ಪ್ರದರ್ಶನ ನಡೆಯುತ್ತಿದೆ. 2A ಮೀಸಲಾತಿಗೆ ಆಗ್ರಹಿಸಿ ಪಟ್ಟಣದಲ್ಲಿ ರ್‍ಯಾಲಿ ಪ್ರಾರಂಭವಾಗಿದೆ.


COMMERCIAL BREAK
SCROLL TO CONTINUE READING

ಹುಕ್ಕೇರಿ ಪಟ್ಟಣದ ಅಡವಿಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ರ್‍ಯಾಲಿ ಪ್ರಾರಂಭವಾಗಿದೆ. ಸಾರೋಟಿನಲ್ಲಿ ಕುಳಿತು ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.


ಇದನ್ನೂ ಓದಿ: ಅ.26 ರಂದು ಮಲ್ಲಿಕಾರ್ಜುನ್ ಖರ್ಗೆ ಅಧಿಕಾರ ಸ್ವೀಕಾರ; ರಾಹುಲ್ ಗಾಂಧಿ ಸೇರಿ ‘ಕೈ’ ನಾಯಕರು ಭಾಗಿ


ಪ್ರತಿಭಟನಾ ರ್‍ಯಾಲಿಯಲ್ಲಿ ನೂರಾರು ಮಹಿಳೆಯರಿಂದ ಕುಂಭಮೇಳ ಮೆರವಣಿಗೆ ನಡೆಯುತ್ತಿದೆ. ರ್‍ಯಾಲಿಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ.


ದಾರಿಯುದ್ದಕ್ಕೂ ಪಂಚಮಸಾಲಿ ಸಮುದಾಯದ ಪರವಾಗಿ ಘೋಷಣೆ ಕೂಗಲಾಗಿದೆ. ಜೈಜೈ ಪಂಚಮಸಾಲಿ ಎಂದು ಘೋಷಣೆ ಕೂಗಿ ಶಕ್ತಿ ಪ್ರದರ್ಶಿಸಲಾಗಿದೆ.


ಇದನ್ನೂ ಓದಿ: Farmer Protest : ತಾಕ್ಕತ್ತ್ ಇದ್ರೆ ಕಿತ್ತೂರ ಉತ್ಸವಕ್ಕೆ ಬರ್ರಿ : ಸಿಎಂಗೆ ರೈತ ಮುಖಂಡ ಸವಾಲು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ