Street Dogs: ಆ ನಗರದಲ್ಲಿ ಶ್ವಾನಗಳ ಕಾಟಕ್ಕೆ ಜನ್ರು ಬೇಸತ್ತು ಹೋಗಿದ್ರು, ಕಂಡ ಕಂಡವರ ಮೇಲೆ ದಾಳಿ ಮಾಡಿ ಭಯಭೀತಿ ಹುಟ್ಟಿಸಿದ್ದ ಬೀದಿ ನಾಯಿಗಳು ಇಲ್ಲಿ ನಮ್ಮದೆ ಹವಾ, ಯಾರೇ ಬರ್ಲಿ ಹೋಗಲಿ ನಾವು ಮಾಡಿದ್ದೆ ಮಾರ್ಗ ಅಂತ ನಗರದಲ್ಲಿ ಹಾವಳಿ ಎಬ್ಬಿಸಿದ್ದವು, ಇದೀಗ ಅಂತಃ ಬೀದಿ ನಾಯಿಗಳಿಗೆ ಮಾಸ್ಟರ್ ಸರ್ಜರಿ ಶುರುವಾಗಿದೆ.  ಅಷ್ಟಕ್ಕು ಎಲ್ಲಿ ಅಂತಿರಾ..ಈ ಸ್ಟೋರಿ ಓದಿ... 


COMMERCIAL BREAK
SCROLL TO CONTINUE READING

ಎಲ್ಲೆಂದರಲ್ಲಿ ಬೌ.. ಬೌ.. ಅಂತ ರಸ್ತೆ ತುಂಬಾ ಹಾವಳಿ ನಿಡ್ತಾ ಇರೋ ಶ್ವಾನಗಳ ದಂಡು. ಹಿಡಿ ತಂಡ ಕಟ್ಟಿಕೊಂಡು ಬೀದಿ ಬೀದಿಗಳಲ್ಲಿ ರಾಜ್ಯಭಾರ ಮಾಡ್ತ ಇರೋ ಪುಂಡ ನಾಯಿಗಳು. ಇವುಗಳ ಕಂಡ್ರೆ ಸಾಕು ಜನ್ರು ರಾತ್ರಿ ಮಾತ್ರವಲ್ಲ ಹಗಲಿನಲ್ಲೂ ಓಡಾಡೊಕು ಭಯ ಭೀತರಾಗಿದ್ರು. ಪೊಲೀಸ್ ಬರ್ಲಿ, ಮಿಲ್ಟ್ರಿನೇ ಬರ್ಲಿ ಸಿಟಿ ಎಲ್ಲಾ ನಮ್ಮದೆ ಹಾವಳಿ ಅಂತ ರಾಜಾ ರೋಷವಾಗಿ ಲಗ್ಗೆ ಇಡುತ್ತಿದ್ದದ್ದು ಕೊಪ್ಪಳದ ಗಂಗಾವತಿ ನಗರದಲ್ಲಿ.


ಹೌದು, ಕೊಪ್ಪಳದ ಗಂಗಾವತಿಯಲ್ಲಿ ಇಷ್ಟು ದಿನ ಶ್ವಾನದಳ ಫುಲ್ ಹವಾ ಇಟ್ಟು ಜನರಿಗೆ ಕಾಟ ಕೊಡ್ತಿದ್ವು, ಸದ್ಯ ಈ ಶ್ವಾನ ಸೇನೆಯ ಕಾಟಕ್ಕೆ ಬ್ರೇಕ್ ಹಾಕಲು ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ. ಸದ್ಯ ಗಂಗಾವತಿ ನಗರದಲ್ಲಿ ಆಪರೇಷನ್ ಡಾಗ್ ಶುರುವಾಗಿದೆ. ಇಂದಿನಿಂದ ಗಂಗಾವತಿ ನಗರದಲ್ಲಿ ಬೀದಿನಾಯಿಗಳನ್ನ ಹಿಡಿದು ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. 


ಇದನ್ನೂ ಓದಿ- ರಾಜ್ಯ ರಾಜಧಾನಿಗೆ ಉಗ್ರರ ಕರಿನೆರಳು : ಐವರು ಶಂಕಿತ ಉಗ್ರರನ್ನ ಬಂಧಿಸಿದ ಸಿಸಿಬಿ


ಕಳೆದ ಕೆಲವು ದಿನಗಳಿಂದ ಗಂಗಾವತಿ ನಗರದಲ್ಲಿ ಈ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೀದಿನಾಯಿ ಹಾವಳಿಯಿಂದ ಜನರು ಬದುಕು ಕಷ್ಟವಾಗಿತ್ತು. ಸದ್ಯ ನಗರದಲ್ಲಿನ ಬೀದಿ ನಾಯಿ ಹಾವಳಿಗೆ ಮುಕ್ತಿ ಹಾಡಲು ಮುಂದಾಗಿದ್ದಾರೆ. ಸದ್ಯ ನಗರದಲ್ಲಿನ 800 ನಾಯಿಗಳನ್ನ ಹೊಡಿದು ಸಂತಾನ ಹರಣ ಚಿಕಿತ್ಸೆ ನೀಡಿ ಮತ್ತೆ ಅದೆ ಏರಿಯಾಗಳಲ್ಲಿ ಬಿಡಲಾಗತ್ತೆ. ಇದರಿಂದ ಬೀದಿ ನಾಯಿಯ ಸಂತತಿ ಹೆಚ್ಚುವದನ್ನ ತಡೆಗಟ್ಟಬಹುದಾಗಿದೆ. ಇದಕ್ಕಾಗಿ ಕಾವಾ ಎನ್ನುವ ಸಂಸ್ಥೆಗೆ ಟೆಂಡರ್ ನೀಡದ್ದು, ಇಂದಿನಿಂದ ಕಾರ್ಯಾಚರಣೆ ಶುರುವಾಗಿದೆ


ಕಳೆದ ಕೆಲವು ದಿನಗಳಿಂದ ಬೀದಿ ನಾಯಿ ಕಾಟದಿಂದ ಜನರೂ ತೊಂದರೆಗೆಯೀಡಾದ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ವು, ಮೊನ್ನೆಯಷ್ಟೆ 4 ವರ್ಷದ ಬಾಲಕಿಯ ಮೇಲೆ ಶ್ವಾನಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದವು. ಇದರಿಂದ ಬೀದಿ ನಾಯಿಗಳ ನಿಯಂತ್ರಣ ಮಾಡುವಂತೆ ಒತ್ತಾಯ ಕೇಳಿ ಬಂದಿತ್ತು, ಸದ್ಯ ನಗರಸಭೆ ಎಚ್ಚೆತ್ತು ನಾಯಿಗಳ ಸಂತಾನಹರಣ ಚಿಕಿತ್ಸೆಗೆ ಮುಂದಾಗಿದೆ. 


ಇದನ್ನೂ ಓದಿ- ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರುತನಿಖೆಗೆ ಆಗ್ರಹ


ಕಳೆದ ವರ್ಷವೂ ಕೂಡ ಬೀದಿನಾಯಿ ಹಾವಳಿಗೆ ಬ್ರೇಕ್ ಹಾಕಲು ಈ ಸಂತಾನ ಹರಣ ಚಿಕಿತ್ಸೆಗೆ ಟೆಂಡರ್ ಕರೆಯಲಾಗಿತ್ತು. ಆದ್ರೆ ಯಾವುದೇ ಕಂಪನಿಗಳು ಟೆಂಡರ್ ನಲ್ಲಿ ಭಾಗವಹಿಸದ ಹಿನ್ನೆಲೆ ಈ ಕೆಲಸ ಕೈ ಬಿಡಲಾಗಿತ್ತು. ಸದ್ಯ ಕಾವಾ ಎನ್ನುವ ಕಂಪನಿ ಟೆಂಡರ್ ಪಡೆದಿದ್ದು, ನಗರದಲ್ಲಿ‌ 800 ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಲು ಒಪ್ಪಿಕೊಂಡಿದೆ. ಸದ್ಯ ಈ ಕ್ರಮದಿಂದ ಬೀದಿನಾಯಿ ಹಾವಳಿ ತಪ್ಪಿದಂತಾಗುತ್ತದೆ ಎಂದು ಗಂಗಾವತಿ ನಗರಸಭೆ ಪೌರಾಯುಕ್ತ ವಿರೂಪಾಕ್ಷ ಮೂರ್ತಿ ತಿಳಿಸಿದ್ದಾರೆ...


ಬೀದಿನಾಯಿ ಹಾವಳಿಯಿಂದ ಕಂಗಾಲಾಗಿದ್ದ ಗಂಗಾವತಿ ನಗರದ ಜನರು ಸದ್ಯ ನಗರಸಭೆಯ ಈ ಕೆಲಸದಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದಷ್ಟು ಬೇಗ ಈ ಬೀದಿ ನಾಯಿಗಳ ಕಾಟ ತಪ್ಪಿದ್ರೆ ಸಾಕಪ್ಪ ಎನ್ನುತ್ತಿದ್ದಾರೆ...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.