ಬೆಂಗಳೂರು: ಈ ಜೆಡಿಎಸ್ ಈ ಬಾರಿಯ ರಾಜ್ಯ ವಿಧಾನಸಭೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಕತ್ತಿ ಮಸಿಯಲು ಸಜ್ಜಾದಂತಿದೆ.ಅದೇ ಕಾರಣಕ್ಕೆ ಈ ಎರಡು ಪಕ್ಷಗಳಿಗೂ ಮುಂಚಿತವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದೆ.


COMMERCIAL BREAK
SCROLL TO CONTINUE READING

ಅದಕ್ಕೆ ಪೂರಕವಾಗಿ ಅತ್ತ ತನ್ನ ರಾಜಕೀಯ ತಳಹದಿಯನ್ನು ಒಕ್ಕಲಿಗ ಸಮುದಾಯದ ಹೊರತಾಗಿ ದಲಿತ ಮತ್ತು ಇತ ಮತಗಳ ಮೇಲು ಕಣ್ಣಿಟ್ಟಿರುವ ಜೆಡಿಎಸ್, ಈ ಹಿಂದಿಗಿಂತ ಈ ಭಾರಿ ಭಿನ್ನವಾದ ಚುನಾವಣಾ ಸೂತ್ರವೊಂದನ್ನು ಸಿದ್ದಪಡಿಸುತ್ತಿದೆ. ಅದಕ್ಕೆ ಪೂರಕವಾಗಿ ಕುಮಾರಸ್ವಾಮಿ ಉತ್ತರ ಕರ್ನಾಟಕದ ಹುಬ್ಬಳಿಯಲ್ಲಿ ಸ್ವಂತ ಮನೆಯನ್ನು ಕಟ್ಟಿ ಪಕ್ಷವನ್ನು ವಿಸ್ತರಣೆ ಮಾಡಲು ತಂತ್ರ ರೂಪಿಸಿದ್ದು ಮತ್ತು ಬಿಎಸ್ಪಿ ಮತ್ತು ಎನ್ಸಿಪಿಯಂತಹ ಪಕ್ಷಗಳ ಮೂಲಕ ಮತ ಕ್ರೂಡಿಕರಣಕ್ಕೆ ಮುಂದಾಗಿರುವುದು ಈ ಸೂತ್ರದ ಪ್ರಮುಖ ಅಂಶಗಳಾಗಿವೆ.


ಇತ್ತೀಚಿಗೆ ಬಿಎಸ್ಪಿಯೊಂದಿಗಿನ ಜೆಡಿಎಸ್ ಪಕ್ಷದ ಮೈತ್ರಿಯು, ಚುನಾವಣಾ ರಾಜಕಾರಣದಲ್ಲಿ  ಅದು ದಾಪುಗಾಲು ಇಡುತ್ತಿರುವ ಭಿನ್ನ ನಡೆಗೆ ಪ್ರಮುಖ ಉದಾಹರಣೆ. ಕಾರಣವಿಷ್ಟೇ ಬಿಎಸ್ಪಿಯ ಮಾಯವತಿಯು 1996 ನಂತರ ಮೊದಲ ಭಾರಿಗೆ ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗುತ್ತಿದ್ದಾರೆ. ಕಳೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ ಮೊದಲ ಬಾರಿಗೆ ಅನ್ಯ ಪಕ್ಷದ ಚುನಾವಣಾ ರ್ಯಾಲಿಯಲ್ಲಿ  ಭಾಗವಹಿಸುತ್ತಿದ್ದಾರೆ. ಇತ್ತ ಕಡೆ ಜೆಡಿಎಸ್ ಗೂ ಕೂಡಾ ಅಧಿಕಾರ ಹಿಡಿಯಬೇಕಾದ ಅನಿವಾರ್ಯತೆ ಎದುರಾಗಿದೆ.ಆ ನಿಟ್ಟಿನಲ್ಲಿ ಈ ರಾಜಕೀಯ ಅಸ್ತಿತ್ವದ ಹುಡುಕಾಟವನ್ನು ಭಿನ್ನ ರೀತಿಯ ರಾಜಕೀಯ ಸೂತ್ರದ ಮೂಲಕ ನಡೆಸುತ್ತಿದೆ. ಅದರ ಭಾಗವಾಗಿ ರಾಜ್ಯದಲ್ಲಿ ಎನ್ಸಿಪಿ,ಬಿಎಸ್ಪಿ,ಮತ್ತು ಎಡಪಕ್ಷಗಳು, ಸಾಧ್ಯವಾದರೆ ಇತರ ರೈತ ಸಂಘಟನೆಗಳ ನೆರವಿನೊಂದಿಗೆ ಮಹಾಮೈತ್ರಿಯನ್ನು ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆಗೆ ರಚಿಸುತ್ತಿದೆ. ಆ ನಿಟ್ಟಿನಲ್ಲಿ  ಇಂದು ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರುವ ಜೆಡಿಎಸ್ ನ ವಿಕಾಸ್ ಪರ್ವ ಇದಕ್ಕೆ ಚಾಲನೆ ನೀಡಲಿದೆ ಎಂದು ಹೇಳಬಹುದು.