ಮೇಕೆದಾಟು ಪಾದಯಾತ್ರೆಯಿಂದ ಉಂಟಾದ ಟ್ರಾಫಿಕ್ ಸಮಸ್ಯೆಗೆ ಕ್ಷಮೆ ಕೋರಿದ ಕಾಂಗ್ರೆಸ್
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಎರಡನೇ ಹಂತ ಇಂದು ಮುಗಿದಿದ್ದು, ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ಕೇಂದ್ರ-ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುವ ಮೂಲಕ ಪಾದಯಾತ್ರೆ ಮುಕ್ತಾಯಗೊಂಡಿತು.
ಬೆಂಗಳೂರು: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಎರಡನೇ ಹಂತ ಇಂದು ಮುಗಿದಿದ್ದು, ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ಕೇಂದ್ರ-ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುವ ಮೂಲಕ ಪಾದಯಾತ್ರೆ ಮುಕ್ತಾಯಗೊಂಡಿತು.
ಇದೇ ವೇಳೆ ಪಾದಯಾತ್ರೆ ವೇಳೆ ಉಂಟಾಗಿರುವ ಟ್ರಾಫಿಕ್ ಸಮಸ್ಯೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವು ಜನರ ಕ್ಷಮೆಯನ್ನು ಕೇಳಿದೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಒಂಟಿಯಾದ ವಿಪಕ್ಷ ನಾಯಕ ಸಿದ್ದರಾಮಯ್ಯ
ಕೋವಿಡ್ ಮೂರನೇ ಅಲೆ ಹಿನ್ನಲೆಯಿಂದಾಗಿ ಹಾಗೂ ಕೋರ್ಟ್ ಅದೇಶದ ಮೆರೆ ಕಾಂಗ್ರೆಸ್ ಕೈಗೊಂಡಿದ್ದ ಮೇಕೆದಾಟು ಪಾದಯಾತ್ರೆ ಜನವರಿ 9 ರಿಂದ 14ರ ವರೆಗೆ ಕನಕಪುರ ತಾಲ್ಲೂಕಿನ ಸಂಗಮದಿಂದ ಪ್ರಾರಂಭವಾಗಿ ರಾಮನಗರದಲ್ಲಿ ಸ್ಥಗಿತಗೊಂಡಿತ್ತು. ಮತ್ತೆ ಫೆ 27 ರಿಂದ ರಾಮನಗರದಿಂದ ಮಾರ್ಚ್ 4ಕ್ಕೆ ನ್ಯಾಷನಲ್ ಕಾಲೇಜ್ ಮೈದಾನವರೆಗೆ ಸಾಗಲಿದೆ.
ಮೊದಲಿಗೆ ಭಾಷಣ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡುತ್ತಾ, ರಾಮನಗರದಲ್ಲಿ ಮೇಕೆದಾಟು 1.0 ಸಂದರ್ಭದಲ್ಲಿ ಹತ್ತು ಎಫ್ ಐ ಆರ್ ಹಾಕಿ, ನಮ್ಮನ್ನು ಜೈಲಿಗೆ ಕಳಿಸಲು ಕುತಂತ್ರ ನಡೆಸಿದ್ದರು.ಈಗ ಪಾದಯಾತ್ರೆ (Mekedatu Padayatre) ಯಶಸ್ಸು ನನ್ನ ಯಶಸ್ಸಲ್ಲ ಇದು ಪಕ್ಷ ಭೇದ ಮರೆತು ರಾಜ್ಯ ಜನ ಬೆಂಬಲ ನೀಡಿದರು.ರಾಜ್ಯದ ಹಿತಕ್ಕೆ ಜೈಲಿಗೂ ಹೋಗಲು ಎಲ್ಲಾ ನಾಯಕರು ಸಿದ್ದ ಎಂದು ಹೇಳಿದರು.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ: ಕಾಂಗ್ರೆಸ್
ಅನೇಕ ಬಿಜೆಪಿ,ಜೆಡಿಎಸ್ ಪಕ್ಷದ ಪ್ರಮುಖರು, ಪಾದಯಾತ್ರೆಯಲ್ಲಿ ಭಾಗವಹಿಸಿದರು.ನಾವು ಜೈಲಿಗೆ ಹೋಗಲು ಸಿದ್ದ ಎಂದು ವೇದಿಕೆಯಲ್ಲಿರುವ ನಾಯಕರು ಸಂಕಲ್ಪ ಮಾಡಿದ್ದೇವೆ.20 ಟಿಎಂಸಿ ನೀರಿನಿಂದ 30 ವರ್ಷಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗಾಗಿ ಹೋರಾಟ ನಡೆಸಿದ್ದೇವೆ.ಆದ್ದರಿಂದ ಬೆಂಗಳೂರಿನ ಜನರು ದಯಮಾಡಿ ಕ್ಷಮಿಸಬೇಕು' ಅವರು ಎಂದು ಮನವಿ ಮಾಡಿದರು.
ಇದೇ ವೇಳೆ ಪಟ್ಟನಾಯಕಹಳ್ಳಿ ನಂಜಾವಧೂತ ಶ್ರೀಗಳು ಮಾತನಾಡಿ" ಮೋದಿ ಅವರನ್ನು ನಂಬಿ ಜನರು 26 ಸಂಸದರನ್ನು ಆರಿಸಿ ಕಳುಹಿದ್ದಾರೆ.ಕೇಂದ್ರದವರು ತಮ್ಮ ಜವಾಬ್ದಾರಿಯನ್ನು ಅರಿತು ರಾಜ್ಯದ ಯೋಜನೆಗೆ ಇರುವ ಅಡೆತಡೆಯನ್ನು ಬಗೆಹರಿಸಬೇಕು ಎಂದು ಅವರು ಮನವಿ ಮಾಡಿದರು.ಬಸವರಾಜ್ ಬೊಮ್ಮಾಯಿ ಅವರು ದೇವೇಗೌಡರು, ಸಿದ್ದರಾಮಯ್ಯ ,ಎಚ್.ಡಿ.ಕುಮಾರಸ್ವಾಮಿ ಅವರ ಒಟ್ಟಾಗಿ ಹೋರಾಟ ಮಾಡಿ ಮೇಕೆದಾಟು ಯೋಜನೆಯನ್ನು ಜಾರಿಗೆ ತನ್ನಿ ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: Hero Honda CD 100! ಹೊಸ ಅವತಾರದಲ್ಲಿ ಮತ್ತೆ ರಸ್ತೆಗಿಳಿದ ಹಿರೋ ಹೋಂಡಾ ಸಿಡಿ 100!
ನಂತರ ಮಾತನಾಡಿದ ಎಐಐಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ,ಬಿಜೆಪಿ ಪಕ್ಷವನ್ನ ಅಧಿಕಾರದಿಂದ ಕಿತ್ತೆಸೆಯುವ ದಿನಗಳು ದೂರವಿಲ್ಲ.ಈ ಯೋಜನೆ ಬೇರೆ ರಾಜ್ಯಕ್ಕೆ ತೊಂದರೆ ಇಲ್ಲ, ಈಗ ಮಾಡಿದರೆ ಬಿಜೆಪಿ ಸರ್ಕಾರ ಮಾಡಲಿ, ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ರಾಜ್ಯ-ಕೇಂದ್ರದಲ್ಲಿ ಕಾಂಗ್ರೆಸ್ ದ್ವಜ ಹಾರಿಸುತ್ತೇವೆ ಹಾಗೂ ಮೊದಲಿಗೆ ಮೇಕೆದಾಟು ಯೋಜನೆ ಜಾರಿಮಾಡಲಿದ್ದೇವೆ ಎಂದು ಭವಿಷ್ಯ ನುಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.