ನಾನು ಮತ್ತು ಮೆಲ್ಲಹಳ್ಳಿಯ ಜನರು ಒಂದೇ ಕುಟುಂಬದ ಸದಸ್ಯರಿದ್ದಂತೆ- ಸಿದ್ದರಾಮಯ್ಯ
ನನಗೆ 70 ವರ್ಷ. ಹೀಗಾಗಿ ಇದೇ ನನಗೆ ಕೊನೆಯ ಚುನಾವಣೆ. ಮೊದಲ ಚುನಾವಣೆಯನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಎದುರಿಸಿದ್ದೆ. ಕೊನೆಯ ಚುನಾವಣೆಯನ್ನೂ ಅಲ್ಲಿಂದಲೇ ಎದುರಿಸುತ್ತೇನೆ- ಸಿದ್ದರಾಮಯ್ಯ
ಮೈಸೂರು: ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಇಂದು ವರುಣಾ ವಿಧಾನಸಭೆ ಕ್ಷೇತ್ರದ ಮೆಲ್ಲಹಳ್ಳಿಯಿಂದ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಮತ್ತು ಈ ಗ್ರಾಮದ(ಮೆಲ್ಲಹಳ್ಳಿ) ಜನರು ಒಂದೇ ಕುಟುಂಬದ ಸದಸ್ಯರಂತೆ ಎಂದು ಭಾವನಾತ್ಮಕವಾಗಿ ನುಡಿದರು.
ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತಮ್ಮ ಪುತ್ರ ಡಾ. ಯತೀಂದ್ರ ಅವರ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಡ್ ಶೋ ನಡೆಸಿದರು. ಆ ಸಮಯದಲ್ಲಿ ಮಾತನಾಡಿದ ಅವರು ನನಗೆ 40 ವರ್ಷಗಳ ಸಂಬಂಧ ಇರುವ ಊರು ಇದು. ತಾಲೂಕು ಬೋರ್ಡ್ ಸದಸ್ಯ ಆಗಿದ್ದಾಗಿನಿಂದ ಈ ಗ್ರಾಮದ ಸಂಪರ್ಕ ಇದೆ. ನಾನು ಮತ್ತು ಈ ಗ್ರಾಮದ ಜನರು ಒಂದೇ ಕುಟುಂಬದ ಸದಸ್ಯರಿದ್ದಂತೆ ಎಂದು ತಿಳಿಸಿದರು.
ನನಗೆ 70 ವರ್ಷ. ಹೀಗಾಗಿ ಇದೇ ನನಗೆ ಕೊನೆಯ ಚುನಾವಣೆ. ಮೊದಲ ಚುನಾವಣೆಯನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಎದುರಿಸಿದ್ದೆ. ಕೊನೆಯ ಚುನಾವಣೆಯನ್ನೂ ಅಲ್ಲಿಂದಲೇ ಎದುರಿಸುತ್ತೇನೆ. ನಾನು ಮುಖ್ಯಮಂತ್ರಿ ಆಗಲು ಈ ಗ್ರಾಮಸ್ಥರ ಕೊಡುಗೆ ಇದೆ. ಯತೀಂದ್ರ ಅವರಿಗೂ ನೀವು ಆಶೀರ್ವಾದ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಸಿಎಂ ಗ್ರಾಮಸ್ಥರನ್ನು ಮನವಿ ಮಾಡಿದರು.