ಬೆಂಗಳೂರು: ದಿನ‌ ಬಳಕೆ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಬೆಸ್ಕಾಂನಿಂದ ಜನಸಾಮಾನ್ಯರಿಗೆ ಡೆಪಾಸಿಟ್ ಶಾಕ್ ನೀಡಿದೆ.ನೀವೇನಾದ್ರೂ ಈ ಡೆಪಾಸಿಟ್ ಹಣವನ್ನು ಪಾವತಿ ಮಾಡದೆ ಇದ್ರೆ ನಿಮ್ಮ ಮನೆಯ ಪವರ್ ಕಟ್ ಆಗೋದು ಗ್ಯಾರಂಟಿ.


COMMERCIAL BREAK
SCROLL TO CONTINUE READING

ಹೌದು, ಕಳೆದ ತಿಂಗಳಷ್ಟೇ ಕೆಪಿಟಿಸಿಎಲ್‌ಗೆ ಬೆಸ್ಕಾಂನಿಂದ ಬಿಲ್ ದರ ಹೆಚ್ಚಳ ಕುರಿತು ಪ್ರಸ್ತಾವನೆ ಸಲ್ಲಿಸಿತ್ತು. ಇದ್ರಿಂದ ವಿದ್ಯುತ್ ದರವನ್ನು ಕೂಡ ಏರಿಕೆ ಮಾಡಲಾಗಿತ್ತು.ಆದ್ರೆ ಇದೀಗ ಮತ್ತೆ ಬೆಸ್ಕಾಂ ನ ಡಿಪಾಸಿಟ್ ದರವನ್ನು ಕೂಡಾ ಏರಿಕೆ ಮಾಡೋದಕ್ಕೆ ಮುಂದಾಗಿದೆ.


ಇದನ್ನೂ ಓದಿ: ರಾಜ್ ಠಾಕ್ರೆಗೆ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ಹೆದರಿದೆ'- ಸಂಜಯ್ ನಿರುಪಮ್


ಪ್ರತಿ ವರ್ಷದಂತೆ ಈ ವರ್ಷವೂ ಭದ್ರತಾ ಠೇವಣಿ ಹೆಚ್ಚಿಸಿದೆ ಬೆಸ್ಕಾಂ, KERC ಆದೇಶದಂತೆ ಡೆಪಾಸಿಟ್ ಶುಲ್ಕ ಹೆಚ್ಚಿಸಿ ಹಣ ಪಾವತಿಸುವಂತೆ ಸೂಚನೆ ನೀಡಿದೆ. 2021ರ 12 ತಿಂಗಳ ಒಟ್ಟು ವಿದ್ಯುತ್ ಶುಲ್ಕದ ಮಾಸಿಕ ಸರಾಸರಿ ಶುಲ್ಕವನ್ನ ಪಡೆಯಲಾಗುತ್ತದೆ. ಜೊತೆಗೆ 2 ತಿಂಗಳ ಸರಾಸರಿ ಶುಲ್ಕವನ್ನ ಭದ್ರತಾ ಠೇವಣಿ ರೀತಿ ಸಂಗ್ರಹಿಸಲಾಗುತ್ತೆ.ಅವಧಿ ಮುಗಿಯೋ ಒಳಗೆ ಹೆಚ್ಚುವರಿ ಭದ್ರತಾ ಠೇವಣಿ ಪಾವಸದಿದ್ದರೆ ನಿಮ್ಮ ಮನೆಯ ಪವರ್ ಕಟ್ ಮಾಡೋದಾಗಿ ಬೆಸ್ಕಾಂ ಸೂಚನೆ ನೀಡಿದೆ. ವಿದ್ಯುತ್ ಮೀಟರ್ ಇರುವ ಪ್ರತಿಯೊಂದು ಮನೆಗೂ 30 ದಿನಗಳ ಡೆಡ್ ಲೈನ್ ನೀಡಿದ್ದು, 30 ದಿನ ಅವಧಿಯಲ್ಲಿ ಬಿಲ್ ಪಾವತಿಸದೆ ಹೋದ್ರೆ ಮನೆ ಪವರ್ ಕಟ್ ಆಗಲಿದೆ.


Zomato: ನೆಲಕಚ್ಚಿದ ಜೊಮ್ಯಾಟೊ ಷೇರು, ಆರೇ ತಿಂಗಳಲ್ಲಿ ಹೂಡಿಕೆದಾರರಿಗೆ 88,000 ಕೋಟಿ ರೂ. ನಷ್ಟ!


ಉದಾಹರಣೆಗೆ ಒಂದು ಮನೆಯ ವಿದ್ಯುತ್ ಬಿಲ್ ಒಂದು 500 ರೂ.ಬಂದ್ರೆ ಅವರು 1000 ಸಾವಿರ ರೂಪಾಯಿ ಠೇವಣಿ ಹಣ ಪಾವತಿಸಬೇಕು.ಇಲ್ಲವಾದ್ರೆ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಡುವಾಗಲಿದೆ. 


ಜನ ಸಾಮಾನ್ಯರಿಂದ ತೀವ್ರ ವಿರೋಧ


ಇನ್ನು ಭದ್ರತಾ ಠೇವಣಿ ಹೆಚ್ಚಳ ಮಾಡೋದಾಗಿ ಸೂಚನೆ ನೀಡಿರುವ ಬೆನ್ನಲ್ಲೆ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಈಗಾಗಲೇ ಅನೇಕ ವಸ್ತುಗಳ ಬೆಲೆ ಏರಿಕೆ ಆಗಿದೆ.ಇದ್ರ ಮಧ್ಯೆ ಈ ಠೇವಣಿ ಬೆಲೆ ಏರಿಕೆ ಮಾಡುವ ಅವಶ್ಯಕತೆ ಇರಲಿಲ್ಲ‌ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಒಟ್ಟಾರೆ...ಬೆಸ್ಕಾಂನಿಂದ ಠೇವಣಿ ಮೊತ್ತ ಹೆಚ್ಚಳ ಮಾಡಿದ್ದು, ಒಂದು ತಿಂಗಳ ಗಡುವು ನೀಡಿದೆ.ಆದ್ರೆ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ದರ ಕಡಿಮೆ ಮಾಡಿ ಅಂತಿದ್ದಾರೆ.ಇಷ್ಟೆಲ್ಲದರ ನಡುವೆ ಬೆಸ್ಕಾಂ ನ ಪ್ರತ್ಯುತ್ತರ ಏನು ಬರಲಿದೆ ಮುಂದಿನ ಪ್ರಶ್ನೆಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.