MANMUL: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿ ನಡೆಯುತ್ತಿದೆ. ಈ ಮೂಲಕ ಮಂಡ್ಯ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಲಾಗುತ್ತಿದ್ದು, ಮಂಡ್ಯದ ಹಾಲು ಒಕ್ಕೂಟ ಮನ್ಮುಲ್ ಮತ್ತೊಂದು ಹೆಮ್ಮೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ. 


COMMERCIAL BREAK
SCROLL TO CONTINUE READING

ಹೌದು! ಮಂಡ್ಯ ಜಿಲ್ಲೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ (Milk Production) ಮಾಡಲಾಗುತ್ತಿದೆ. ಮಂಡ್ಯದ  ಮನ್ಮುಲ್  ಅತಿ ಹೆಚ್ಚು ಹಾಲು ಉತ್ಪಾದಿಸಿ ಸಂಗ್ರಹಣೆ ಮಾಡುವ ಹಾಲು ಒಕ್ಕೂಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ಹೆಮ್ಮೆಯ ಮನ್ಮುಲ್ (MANMUL) ಮತ್ತಷ್ಟು ಗುಣಮಟ್ಟ ಮತ್ತು ಪಾರದರ್ಶಕತೆ ಕಾಯ್ದು ಕೊಳ್ಳಲು ಏಕರೂಪದ ಸಾಫ್ಟ್ವೇರ್ ಅಳವಡಿಸಿ ಹಾಲು ಖರೀದಿ ಹಾಗೂ ಲೆಕ್ಕಪತ್ರ ನಿರ್ವಹಣೆಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು ಮುಂದಾಗಿದೆ. 


ಹೊಸ ಸಾಫ್ಟ್ವೇರ್ ಹಾಲಿನ ಪರಿಮಾಣ ಮತ್ತು ಹಾಲಿನ ಗುಣಮಟ್ಟವನ್ನು ಪಾರದರ್ಶಕವಾಗಿ ನಮೂದಿಸಿ ಸಂಘ ಹಾಗೂ ಉತ್ಪಾದಕರ ನಡುವಿನ ವ್ಯವಹಾರವನ್ನು ಖಾತರಿಗೊಳಿಸುವ ಜೊತೆಗೆ ನಂಬುಗೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ನೂತನವಾಗಿ ಜಾರಿಗೆ ತಂದಿರುವ ಸಾಫ್ಟ್ವೇರ್‌ನಲ್ಲಿ ಹಾಲಿನ ಗುಣಮಟ್ಟಕ್ಕೆ ಪೂರಕವಾದ ಎಸ್‌.ಎನ್‌‌.ಎಫ್ ಹಾಗೂ ಜಿಡ್ಡಿನ ಅಂಶವನ್ನು ತಂತ್ರಜ್ಞಾನ ಆಧಾರಿತವಾಗಿ ದಾಖಲು ಮಾಡುವುದರಿಂದ ಉತ್ಪಾದಕರಿಗೆ ನೈಜ ಹಾಗೂ ನಿಖರ ಮಾಹಿತಿ ಲಭ್ಯವಾಗಲಿದೆ. 


ಇದನ್ನೂ ಓದಿ- ಮಂಡ್ಯದ ಮನ್ಮುಲ್ನಲ್ಲಿ ತಯಾರಾಗ್ತಿರೋ ಬೆಲ್ಲದ ಬರ್ಫಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್​


ಇನ್ನು ಈ ಮೊದಲು ಬೇರೆ ಬೇರೆ ಹೆಸರಿನ ಖಾಸಗಿ ಸಾಫ್ಟ್ವೇರ್‌ಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳು ಅಳವಡಿಕೆ ಮಾಡಕೊಂಡಿದ್ದವು.ಈ ಸಾಫ್ಟ್ವೇರ್‌ನಲ್ಲಿ ಸಮಗ್ರವಾದ ಅವಕಾಶ ಮತ್ತು ಪೂರಕ ನಿರ್ವಹಣಾ ವ್ಯವಸ್ಥೆ ಕೊರತೆಗಳು ಇದ್ದವು. ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೂ ಪೂರೈಕೆ ಮಾಡಿದ ಮರುಕ್ಷಣವೇ ಉತ್ಪಾದಕರ ದೂರವಾಣಿಗೆ ಎಸ್‌ಎಂಎಸ್ ಸಂದೇಶ ಕಳುಹಿಸುವ ವ್ಯ ವಸ್ಥೆಯು ಅಳವಡಿಕೆಯಾಗಿದೆ. ಈ ಮೊದಲಿನ ಸಾಫ್ಟ್ವೇರ್ ಬಳಕೆ ವೇಳೆ ಹಾಲಿನ ಪ್ರೋತ್ಸಾಹ ಧನದ ಲೆಕ್ಕ ಹಾಗೂ ಹಾಲಿನ ಹಣದ ಲೆಕ್ಕವನ್ನು ಕಾರ್ಯದರ್ಶಿಯವರು ಕಂಪ್ಯೂಟರ್‌ನಲ್ಲಿ ಸಿದ್ದಪಡಿಸಿಕೊಡಬೇಕಾಗಿತ್ತು. ಆದರೆ ನೂತನ ಕಾಮನ್ ಸಾಫ್ಟ್ವೇರ್ ತಾನೇ ಈ ಲೆಕ್ಕವನ್ನು ಸಿದ್ದಪಡಿಸಿಕೊಡಲಿದೆ. ಇದರಿಂದ ಸಮಯ ಶ್ರಮ ಹಣ ಉಳಿತಾಯವಾಗಲಿದೆ. ಹಾಲು ಉತ್ಪಾದಕ ರೈತರಿಗೂ ಸಹಕಾರಿ ಆಗಲಿದೆ.


ಇನ್ನೂ ಈ ಸಾಫ್ಟ್ವೇರ್‌ನಲ್ಲಿ ಹಾಲಿನ ಪ್ರಮಾಣ ಎಸ್‌.ಎನ್‌.ಎಫ್ ಜಿಡ್ಡಿನಾಂಶ ಮತ್ತಿತರ ದಾಖಲೆಗಳು ಇದ್ದಾಗ ಬದಲಿಸಲು ಆಯ್ಕೆ ಇದ್ದು, ಇಂತಹ ತಿದ್ದುಪಡಿಯ ವಿವರವು ಹಾಲು ಉತ್ಪಾದಕರ ಮೊಬೈಲ್‌ನಲ್ಲಿ ಕೆಂಪು ಬಣ್ಣದ ಮೂಲಕ ನಮೂದಾಗಲಿದ್ದು ಹಾಲು ಉತ್ಪಾದಕರ ಸಹಕಾರ ಸಂಘದ  ವ್ಯವಹಾರ ಸಂಪೂರ್ಣ ಪಾರದರ್ಶಕವಾಗಲಿದೆ. ಪಾರದರ್ಶಕ ವ್ಯವಹಾರಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ತಂತ್ರಾಂಶ ಅಳವಡಿಕೆ ಹಾಗೂ ಆನ್‌ಲೈನ್ ವ್ಯವಸ್ಥೆಯಡಿ ಹಾಲು ಖರೀದಿ ಮತ್ತು ಹಾಲು ಉತ್ಪಾದಕ ರಿಗೆ ಸಾಕಷ್ಟು ಅನುಕೂಲವಾಗಿದೆ.


ಇದನ್ನೂ ಓದಿ- ಸಕ್ಕರೆ ನಾಡಿನಲ್ಲಿ ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ ನೂತನ ಎಸ್‌ಪಿ


ಒಟ್ಟಾರೆ ಜಿಲ್ಲೆಯ ಹಲವು ಕಡೆಗಳಲ್ಲಿ ಈಗಾಗಲೇ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಈ ಹೊಸ ಸಾಫ್ಟ್ವೇರ್ ಬಳಕೆಯಲ್ಲಿದೆ. ಈ ಹೊಸ ತಂತ್ರಜ್ಞಾನದಿಂದ ಹಾಲು ಉತ್ಪಾದಕರು ಹಾಗೂ ಉತ್ಪಾದಕ ಸಂಘಗಳು ಸೇರಿ ಮನ್ಮುಲ್ ಕೂಡ ಈ ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಲು ಸಹಕಾರಿಯಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.