ಹೊಸಪೇಟೆ: ನನಗೆ ಮಂತ್ರಿಯಾಗೋ ಆಸೆ ಇರಲಿಲ್ಲ. ಸಮ್ಮಿಶ್ರ ಸರ್ಕಾ​ರದಲ್ಲಿ ಮಂತ್ರಿ ನೀಡುತ್ತೇವೆ ಎಂದ್ರು. ನಾನು ಜಿಲ್ಲೆ ಬೇಕು ಎಂದು ಪಟ್ಟು ಹಿಡಿದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಈಗಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ಸಾರ್ವಜನಿಕ ಬದುಕಿನಲ್ಲಿ ಇರುವೆ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್ ಸಚಿವ ಆನಂದ್‌ ಸಿಂಗ್‌ ಸ್ಪಷ್ಟ​ಪ​ಡಿ​ಸಿ​ದ್ದಾರೆ.


COMMERCIAL BREAK
SCROLL TO CONTINUE READING

ನಗರದ ಪಟೇಲ್‌ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ ರಾಜಕಾರಣದಿಂದ ನಿವೃತ್ತಿ ಹೊಂದುವೆ ಎಂದು ಹೇಳಿದ್ದೆ. ಆದರೆ, ವಿಜಯನಗರ ಜಿಲ್ಲೆ(Vijayanagar District)ಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ಸಲುವಾಗಿ ಈಗಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ನುಡಿದಂತೆ ನಡೆದು ವಿರೂಪಾಕ್ಷೇಶ್ವರನ ಆಶೀರ್ವಾದದಿಂದ ವಿಜಯನಗರ ಜಿಲ್ಲೆ ರಚನೆ ಮಾಡಿಸಿರುವೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಭಾವಚಿತ್ರವನ್ನು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಹಾಕಬೇಕು. ಅಂಥ ಉತ್ತಮ ಕಾರ್ಯವನ್ನು ಅವರು ನಮಗೆ ಮಾಡಿದ್ದಾರೆ ಎಂದರು.


KSRTC: ಪ್ರಯಾಣಿಕರೆ ಗಮನಿಸಿ: ಸದ್ಯದಲ್ಲೇ ಬಸ್‌ ಪ್ರಯಾಣ ದರ ಏರಿಕೆ..!


ವಿಜಯನಗರ ಜಿಲ್ಲೆ ರಚನೆ ಮಾಡುವೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅಂದರೆ ನಮ್ಮ ಗುರುಗಳ ಸ್ಟೈಲ್‌ನಲ್ಲಿ ಚಪ್ಪಾಳೆ ತಟ್ಟಿ ತಾಲೂಕು ಕ್ರೀಡಾಂಗಣದಲ್ಲಿ ಹೇಳಿದ್ದೆ. ಈಗ ಜಿಲ್ಲೆ ತಂದಿದ್ದು, ಅದೇ ಸ್ಟೈಲ್‌ನಲ್ಲಿ ಚಪ್ಪಾಳೆ ತಟ್ಟಿ ಹೇಳುವೆ ಎಂದು ಸಚಿವ ಸಿಂಗ್‌ ಹೇಳಿದರು.


'ಒಂಟಿ ಸಲಗ ನಾನು ಯಾರಿಗೂ ಹೆದರುವುದಿಲ್ಲ'– ಯತ್ನಾಳ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.