B.C.Patil: ರೈತರಲ್ಲಿ ಮನವಿ ಮಾಡಿಕೊಂಡ ಸಚಿವ ಬಿ.ಸಿ.ಪಾಟೀಲ್!
ದೇಶಕ್ಕೆ ಅನ್ನ ನೀಡುವವನು ರೈತ. ರೈತನೇ ಆತ್ಮಹತ್ಯೆ ಮಾಡಿಕೊಂಡರೆ ಅನ್ನ ನೀಡುವವರು ಯಾರು ಎಂದು ಪ್ರಶ್ನಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್
ಕೋಲಾರ: ದೇಶಕ್ಕೆ ಅನ್ನ ನೀಡುವವನು ರೈತ. ರೈತನೇ ಆತ್ಮಹತ್ಯೆ ಮಾಡಿಕೊಂಡರೆ ಅನ್ನ ನೀಡುವವರು ಯಾರು ಎಂದು ಪ್ರಶ್ನಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ನಾವು ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎನ್ನುವ ಪ್ರತಿಜ್ಞೆಯನ್ನು ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್.ವಡ್ಡಹಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ರೈತ(Farmers)ರೊಂದಿಗೆ ಒಂದು ದಿನ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರ ಆತ್ಮಹತ್ಯೆಗೆ ನೀರಿನ ಕೊರತೆ ಕಾರಣವಲ್ಲ ಎನ್ನುವುದನ್ನು ಕೋಲಾರ ರೈತರು ತೋರಿಸಿಕೊಟ್ಟಿದ್ದೀರಿ. ಮಂಡ್ಯದಲ್ಲಿ ಯಥೇಚ್ಛವಾಗಿ ನೀರಿದ್ದರೂ ಅಲ್ಲಿ ಕಬ್ಬು, ಭತ್ತ ಬೆಳೆಗಳನ್ನು ಮಾತ್ರವೇ ಬೆಳೆಯಲಾಗುತ್ತಿದೆ. ಭತ್ತ ಬೆಳೆಯುವವರು ಯಾರೂ ಶ್ರೀಮಂತರಾಗಿಲ್ಲ. ಕಬ್ಬು ವರ್ಷದ ಬೆಳೆಯಾಗಿದ್ದು, ಬೆಳೆ, ಆದಾಯ ಕಾಣಲು 16 ತಿಂಗಳು ಕಾಯಬೇಕು. ಅಂತಹ ಪರಿಸ್ಥಿತಿ ಅಲ್ಲಿದ್ದರೂ ಒಬ್ಬ ಮಹಿಳೆ ಸಾವಯವ ಕೃಷಿಯ ಮೂಲಕ ಸಾಧನೆ ಮಾಡಿ ತೋರಿಸಿದ್ದಾರೆ.
JDS Party: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಬಿಗ್ ಶಾಕ್: ಜೆಡಿಎಸ್ ತೆಕ್ಕೆಗೆ ಕೈ ಶಾಸಕ..!
ಭೂಮಿ ತಾಯಿಯನ್ನು ನಂಬಿದವರಿಗೆ ಎಂದಿಗೂ ಮೋಸ ಆಗುವುದಿಲ್ಲ. ಸಮಗ್ರ ಗೃಷಿ ಅಳವಡಿಸಿಕೊಂಡಿದ್ದೇ ಆದಲ್ಲಿಎಲ್ಲ ಸಾಧನೆ ಮಾಡಲೂ ಸಾಧ್ಯವಾಗುತ್ತದೆ ಎಂದು ಬಿ. ಸಿ. ಪಾಟೀಲ್ ಹೇಳಿದರು. ರೈತರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದೇನೆ. ಕೊಡಗಿನಲ್ಲಿ ನಾನು ಹೇಳಿದ್ದೇ ಬೇರೆ, ಆದರೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದೇ ಬೇರೆ. ರೈತರನ್ನು ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಹೇಳುವುದಕ್ಕೆ ನಾನು ಸಚಿವನಾಗಿಲ್ಲ. ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಬಂದಿರುವುದಾಗಿ ಹೇಳಿದರು.
Bird Flu : ಹಕ್ಕಿ ಜ್ವರ ತಡೆಯಲು ರಾಜ್ಯದಲ್ಲಿ ರೆಡಿಯಾಗಿದೆ ‘ಏಳು ಸುತ್ತಿನ ಕೋಟೆ’..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.