ಬೆಂಗಳೂರು: ಬೆಂಗಳೂರಿನಲ್ಲಿ ಕಾಲೇಜು ಆರಂಭವಾದ ನಂತರ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. 5 ದಿನದಲ್ಲಿ 117 ವಿದ್ಯಾರ್ಥಿಗಳು ಮತ್ತು 51 ಶಿಕ್ಷಕರಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಅಗತ್ಯ ಬಿದ್ರೆ ಆರಂಭವಾದ ಕಾಲೇಜುಗಳನ್ನ ಮತ್ತೆ ಮುಚ್ಚಬೇಕಾಗುತ್ತದೆ ಎಂದು ಅರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಡಾ.ಕೆ.ಸುಧಾಕರ್(Dr. K. Sudhakar), ವಿದ್ಯಾರ್ಥಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಶಾಲೆಗಳನ್ನ ಇನ್ನೂವರೆಗೂ ತೆರೆದಿಲ್ಲ. ಹಾಗಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸೋಂಕು ತಗುಲಿರುವುದರಿಂದ ಈ ಕ್ರಮಕ್ಕೆ ಮುಂದಾಗುವ ಪರಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.


ಗ್ರಾಮ ಪಂಚಾಯತಿ ಚುನಾವಣೆ: ಹಳ್ಳಿ ಜನರ ಮನ ಗೆಲ್ಲಲು 'ಬಿಜೆಪಿ ಮಾಸ್ಟರ್ ಪ್ಲಾನ್'


ನವೆಂಬರ್ 17 ರಿಂದ 21 ರವರೆಗೆ ಕಾಲೇಜ್ ಗಳಲ್ಲಿ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. 26,205 ವಿದ್ಯಾರ್ಥಿಗಳು, 5,378 ಉಪನ್ಯಾಸಕರು, 2680 ಸಿಬ್ಬಂದಿ ಸೇರಿ 38,653 ಜನರಿ ಕೋವಿಡ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ 168 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಹೇಳಲಾಗಿದೆ.


JOB: ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ