ನಟ ದರ್ಶನ, ಜಗ್ಗೇಶ್ ಸೇರಿದಂತೆ ಯಾರೇ ಹುಲಿ ಉಗುರು ಧರಿಸಿದ್ದರೂ ಕ್ರಮ ಖಂಡಿತ : ಸಚಿವ ಖಂಡ್ರೆ
Darshan tiger claw pendant : ವನ್ಯ ಜೀವಿ ಕಾಯ್ದೆ 72 ಪ್ರಕಾರ ಯಾವುದೇ ಜೀವಿಯ ಉಗುರು, ಚರ್ಮ, ದಂತ ಬಳಸುವಂತಿಲ್ಲ. ದರ್ಶನ, ಜಗ್ಗೇಶ್ ಅಂತ ನಾನು ವೈಯಕ್ತಿಕವಾಗಿ ಯಾರ ಹೆಸರು ತೆಗೆದುಕೊಳ್ಳಲ್ಲ, ಈ ನೆಲದ ಕಾನೂನು ಎಲ್ಲರಿಗೂ ಸರಿ ಸಮಾನ.
Tiger Claw pendent : ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್‌ನಿಂದ ಪ್ರಾರಂಭವಾದ ಹುಲಿ ಉಗುರಿನ ಪ್ರಕರಣ ಸ್ಯಾಂಡಲ್‌ವುಡ್ ಮತ್ತು ರಾಜಕೀಯ ಅಂಗಳಕ್ಕೆ ಬಂದು ನಿಂತಿದೆ. ಸಧ್ಯ ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪ್ರತಿಕ್ರಿಯೆ ನೀಡಿದ್ದು, ಹುಲಿ ಉಗುರು ಯಾರೇ ಧರಿಸಿದ್ದರೂ ಸಹ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಮಾತನಾಡಿದ ಸಚಿವರು, ವನ್ಯ ಜೀವಿ ಕಾಯ್ದೆ 72 ಪ್ರಕಾರ ಯಾವುದೇ ಜೀವಿಯ ಉಗುರು, ಚರ್ಮ, ದಂತ ಬಳಸುವಂತಿಲ್ಲ. ಅಲ್ಲದೆ, ಸಾಗಾಟ, ಮಾರಾಟ, ಸಂಗ್ರಹ ಮಾಡುವಂತದ್ದು ಸಹ ಅಪರಾಧ. ಇದರಲ್ಲಿ ಯಾರೆ ಭಾಗಿ ಆದ್ರು ಸರ್ಕಾರ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸುತ್ತದೆ ಎಂದರು.
ಇದನ್ನೂ ಓದಿ: "ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ ಡಿ.ಕೆ.ಶಿವಕುಮಾರ್ ನಡೆಸಿದ್ದಾರೆ "-ಎಚ್.ಡಿ.ಕುಮಾರಸ್ವಾಮಿ
ಅಲ್ಲದೆ, ದರ್ಶನ, ಜಗ್ಗೇಶ್ ಮತ್ತಿತರರು ಹುಲಿ ಉಗುರು ಪೆಂಡೆಂಟ್ ಧರಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾನು ವೈಯಕ್ತಿಕವಾಗಿ ಯಾರ ಹೆಸರು ತೆಗೆದುಕೊಳ್ಳಲ್ಲ, ಈ ನೆಲದ ಕಾನೂನು ಎಲ್ಲರಿಗೂ ಸರಿ ಸಮಾನ, ಯಾರು ಕಾನೂನಿಗೆ ಮೀರಿದವರು ಇಲ್ಲ. ಇಂತಹ ಪ್ರಕರಣ ಬೆಳಕಿಗೆ ಬಂದ್ರೆ ಅದರ ಬಗ್ಗೆ ವಿಚಾರಣೆ ಆಗುತ್ತದೆ, ನ್ಯಾಯ ಸಮ್ಮತ ಕ್ರಮ ಆಗುತ್ತದೆ. ಯಾರೇ ಇರಲಿ ಒಬ್ಬರಿಗೆ ಒಂದು ಒಬ್ಬರಿಗೆ ಒಂದು ಮಾಡೋ ಪ್ರಶ್ನೆ ಬರೋಲ್ಲ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಸಮಿತಿ ರಚನೆ : ಇನ್ನು ಅಪರಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಹುಲಿ ಉಗುರಿಗೆ ಸಂಭಂದಿಸಿದಂತೆ ಹಲವು ದೂರು ಬಂದಿವೆ, ತನಿಖೆಗೆ ಸಂಭಂದಿಸಿದಂತೆ ಉನ್ನತ ಮಟ್ಟದ ಸಮೀತಿ ರಚನೆ ಮಾಡುತ್ತೇವೆ. ಚಿಕ್ಕಮಗಳೂರು, ತುಮಕೂರು ಸೇರಿ ಹಲವು ಕಡೆ ಹೆಚ್ಚಿನ ದೂರು ಬಂದಿದೆ, ಜಗ್ಗೇಶ್ ಮೇಲೆ ದೂರು ಕೊಟ್ಟಿರೋ ಮಾಹಿತಿ ಇದೆ, ನನ್ನ ನೇತೃತ್ವದಲ್ಲಿ ಸಮೀತಿ ರಚನೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ನಾನು ಧರಿಸಿದ್ದ ಹುಲಿ ಉಗುರು ನಕಲಿ, ನೈಜವಾದುದ್ದಲ್ಲ : ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
ಅಲ್ಲದೆ, ಸಮೀತಿಯಲ್ಲಿ ಉನ್ನತ ಅಧಿಕಾರಿಗಳು ಇರ್ತಾರೆ. ಕೂಲಂಕಷವಾಗಿ ತನಿಖೆಮಾಡಿ ಅಪಾರಾಧ ಪತ್ತೆ ಹಚ್ತೇವೆ, ನಿಖಿಲ್ ಕುಮಾರಸ್ವಾಮಿ ಧರಿಸಿದ್ದ ಹುಲಿ ಉಗುರನ್ನೂ ಸಹ ನಾವು ಪರೀಶಿಲನೆ ಮಾಡ್ತೇವೆ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ತಿಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.