ಬೆಂಗಳೂರು: ಕೊನೆಗೂ ರಾಜ್ಯ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಇದೇ ಜ.13ರಂದು ಏಳ ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಈಗಾಗಲೇ ಸಿಎಂ ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಆದ್ರೆ, ಆ ಏಳು ಜನರು ಯಾರು ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ. ಕಾಂಗ್ರೆಸ್(Congress) ಬಿಟ್ಟು ವಲಸೆ ಬಂದ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಮುನಿರತ್ನ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗಿದೆ. ಇನ್ನುಳಿದ ನಾಲ್ವರು ಯಾರು ಎನ್ನುವುದು ಗೊತ್ತಿಲ್ಲ.


Basavaraj Bommai: 'ಸಿದ್ದರಾಮಯ್ಯ ಡ್ರೈವರ್‌, ಡಿ.ಕೆ. ಶಿವಕುಮಾರ್ ಕಂಡಕ್ಟರ್'


ಅಲ್ಲದೇ ಕಾರ್ಯವೈಖರಿ ಆಧಾರದ ಮೇಲೆ ಕೆಲವರನ್ನ ಸಚಿವ ಸ್ಥಾನದಿಂದ ಕೈಬಿಡಬೇಕೆಂಬ ಚರ್ಚೆಗಳು ಸಹ ನಡೆದಿವೆ. ಅದರಲ್ಲೂ ಅಬಕಾರಿ ಸಚಿವ ಎಚ್.ನಾಗೇಶ್ ಅವರ ಹೆಸರು ಸಹ ಕೇಳಿಬಂದಿದೆ.


H.D.Revanna: 'ರೇವಣ್ಣಗೆ ಲೆಕ್ಕವೇ ಬರುವುದಿಲ್ಲ, ಅದಕ್ಕೆ ಅವರನ್ನು ನಾನು ಲೆಕ್ಕಕ್ಕೆ ಇಟ್ಟಿಲ್ಲ'


ಇನ್ನು ಈ ಬಗ್ಗೆ ಸಚಿವ ನಾಗೇಶ್ ಪ್ರತಿಕ್ರಿಯಿಸಿದ್ದು, ಈ ಸರ್ಕಾರ ರಚನೆಗೆ ನಾನೇ ಪ್ರಮುಖ ಕಾರಣ. ಸರ್ಕಾರ ಬರುವುದಕ್ಕೂ ನಾನೇ ಟರ್ನಿಂಗ್ ಪಾಯಿಂಟ್. ಹೀಗಾಗಿ ನನ್ನನ್ನು ಯಾವುದೇ ಕಾರಣಕ್ಕೂ ಕೈ ಬಿಡಲ್ಲ. ನನ್ನನ್ನು ಸರ್ಕಾರದಿಂದ ಕೈಬಿಡುವಷ್ಟು ಧೈರ್ಯ ಯಾರಿಗಿದೆ ಸ್ವಾಮಿ ಎಂದು ಖಡಕ್ ಆಗಿ ಹೇಳಿದರು.


Anand Singh: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ, ನನ್ನ ಮಾತಿಗೆ ಬದ್ಧ


ವಿಕಾಸಸೌಧದಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಮಾಡಿರುವ ತೀರ್ಮಾನದ ಬಗ್ಗೆ ಮಾಹಿತಿ ಇಲ್ಲ. ಆದರೆ ಸಿಎಂ ಯಡಿಯೂರಪ್ಪ ಮಾತ್ರ ನನ್ನನ್ನು ಸಂಪುಟದಿಂದ ಕೈ ಬಿಡುವುದಿಲ್ಲ ಎಂದು ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Good News: Lithium ಗಾಗಿ ಇನ್ಮುಂದೆ ಭಾರತ ಚೀನಾ ಮೇಲೆ ಅವಲಂಭಿಸಬೇಕಾಗಿಲ್ಲ... ಕಾರಣ ಇಲ್ಲಿದೆ


ನಾನು ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವನು. ಆಮೇಲೆ ಅಲ್ಲಿ ರಾಜೀನಾಮೆ ನೀಡಿ ಬಂದಿದ್ದವನು. ಆಗ ನನ್ನನ್ನು ಎಷ್ಟೋ ಜನರು ಏನೇನೋ ಟೀಕೆ ಮಾಡಿದ್ದರು. ಹೀಗಿದ್ದರೂ ನಾನು ಅಲ್ಲಿ ರಾಜೀನಾಮೆ ಕೊಟ್ಡು ಬಂದಿದ್ದೇನೆ. ನನ್ನ ತರ ಯಾರು ಮಾಡುತ್ತಾರೆ ಹೇಳಿ ಎಂದರು.


B.Sriramulu: ಸಿದ್ದುಗೆ 'ಭರ್ಜರಿ ಟಾಂಗ್' ನೀಡಿದ ಸಚಿವ ಶ್ರೀರಾಮುಲು..!


ಸಿಎಂ ಯಡಿಯೂರಪ್ಪ ಈ ಹಿಂದೆ ನನಗೆ ಮಾತು ಕೊಟ್ಟಿದ್ದಾರೆ. ಅವರು ಕೊಟ್ಟ ಮಾತಿನಂತೆ ಉಳಿಸುಕೊಳ್ಳುವ ನಂಬಿಕೆಯಿದೆ. ಈ ಬಗ್ಗೆ ಸಿಎಂ ಭೇಟಿ ಮಾಡಿ‌ ಚರ್ಚೆ ಮಾಡುತ್ತೇನೆ. ಹೈಕಮಾಂಡ್ ಏನು ಹೇಳಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.


School Students: 'ವಿದ್ಯಾರ್ಥಿ'ಗಳಿಗೆ ಗುಡ್ ನ್ಯೂಸ್: 'ಅಟೆಂಡೆನ್ಸ್ ಇಲ್ಲ'ದಿದ್ದರೂ ವಾರ್ಷಿಕ ಪರೀಕ್ಷೆ'ಗೆ ಚಾನ್ಸ್..!?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ