ಸಿದ್ದರಾಮಯ್ಯ ನಮ್ಮ ಆಸ್ತಿ, ಅವರು ಚೆನ್ನಾಗಿರಲಿ ಎಂದು ಪಾದಯಾತ್ರೆ ಮಾಡಬೇಡಿ ಎಂದಿದ್ದು: ಸಚಿವ ಈಶ್ವರಪ್ಪ
ಬೆಂಗಳೂರಿನಲ್ಲಿ ಬಿಗಿ ಮಾಡೋದು ಮಾಡಿ. ಬೇರೆ ಜಿಲ್ಲೆಗಳಲ್ಲಿ ಮಾಡುವುದು ಬೇಡ. ಇದನ್ನೇ ಸಿಎಂ ಜೊತೆ ಸಚಿವ ಸಂಪುಟ ಸಭೆಯಲ್ಲಿ ನಾನು ಮಾತನಾಡ್ತೇನೆ ಎಂದು ಸಚಿವ ಈಶ್ವರಪ್ಪ ಹೇಳಿದರು.
ಬೆಂಗಳೂರು: ಬೆಂಗಳೂರಿನಲ್ಲಿ ಬಿಗಿ ಮಾಡೋದು ಮಾಡಿ. ಬೇರೆ ಜಿಲ್ಲೆಗಳಲ್ಲಿ ಮಾಡುವುದು ಬೇಡ. ಇದನ್ನೇ ಸಿಎಂ ಜೊತೆ ಸಚಿವ ಸಂಪುಟ ಸಭೆಯಲ್ಲಿ ನಾನು ಮಾತನಾಡ್ತೇನೆ ಎಂದು ಸಚಿವ ಈಶ್ವರಪ್ಪ ಹೇಳಿದರು.
ಇ- ಬೆಳಕು ತಂತ್ರಾಂಶ ಲೋಕಾರ್ಪಣೆ :
ಇ- ಬೆಳಕು ತಂತ್ರಾಂಶ ಲೋಕಾರ್ಪಣೆ ಮಾಡಿ ನಂತರ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು, ರಾಜ್ಯದಲ್ಲಿ ಒಂದೇ ನಿಯಮವಿದೆ ಎಂದು ಯಾರು ಹೇಳಿದ್ದು. ಜಿಲ್ಲೆಗಳಿಗೆ ಇನ್ನೂ ಆದೇಶ ಬಂದಿಲ್ಲ. ನಾನು ಬೇಜಾರು ಮಾಡಿಕೊಂಡಿಲ್ಲ. ಜನರ ಭಾವನೆಗಳನ್ನ ನಿನ್ನೆ ವ್ಯಕ್ತಪಡಿಸಿದ್ದೇನಷ್ಟೇ ಎಂದರು.
ವಿದ್ಯುತ್ ಶುಲ್ಕದ ಬಿಲ್ ಗಳ ವಿವರ ನೀಡುವ ತಂತ್ರಾಶ ಕಾರ್ಯಕ್ರಮಕ್ಕೆ ಸಚಿವ ಈಶ್ವರಪ್ಪ ಚಾಲನೆ ನೀಡಿದರು. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನುಷ್ಠಾನ ಆಗಲಿದೆ. ಬೀದಿ ದೀಪ, ಕುಡಿಯುವ ನೀರಿನ ಬಿಲ್, ವಿದ್ಯುತ್ ಬಿಲ್, ಬಾಕಿ ಪರಿಶೀಲನೆ, ಪಾವತಿ ಕುರಿತಂತೆ ಎಲ್ಲವೂ ಇ-ಬೆಳಕು ತಂತ್ರಾಶದಲ್ಲಿ ಲಭ್ಯವಾಗಲಿದೆ. ರಾಜ್ಯದಲ್ಲೇ ಇದು ವಿನೂತನ ಪ್ರಯೋಗ ಎಂದು ಗ್ರಾಮೀಣಾಭಿವೃದ್ಧಿಸಚಿವ ಈಶ್ವರಪ್ಪ ಸಮಾರಂಭದಲ್ಲಿ ಹೇಳಿದರು.
ಸಿದ್ದರಾಮಯ್ಯ, ದೇವೇಗೌಡರು ನಮ್ಮ ಆಸ್ತಿ:
ಪಾದಯಾತ್ರೆ ಮಾಡಿಯೇ ಸಿದ್ಧ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ಧರಾಮಯ್ಯ, ದೇವೇಗೌಡರು ನಮ್ಮ ಆಸ್ತಿ. ಅವರು ಚೆನ್ನಾಗಿರಲಿ ಎಂದು ನಮ್ಮಭಾವನೆ. ಅದಕ್ಕೆ ಈಗ ಪಾದಯಾತ್ರೆ ಮಾಡಬೇಡಿ ಎಂದಿದ್ದೇವೆ. ಮಾಡೇ ಮಾಡ್ತೇವೆ ಅಂದ್ರೆ ಅವರಿಗೆ ಸೇರಿದ್ದು. ಮುಂದೆ ಅದರ ಬಗ್ಗೆ ನೋಡೋಣ ಎಂದು ಹೇಳಿದರು.
ನಿರಾಣಿ-ಈಶ್ವರಪ್ಪ ಭೇಟಿ ವಿಚಾರ:
ನಾವು ಶಿವಮೊಗ್ಗದ ವಿದ್ಯುತ್ ವಿಚಾರದ ಚರ್ಚೆ ಮಾಡಿದ್ದೇವೆ. ಇದರಲ್ಲಿ ಬೇರೆ ಏನೂ ಇಲ್ಲ. ಈಗ ಸುನೀಲ್ ಕುಮಾರ್ ಬಂದಿದ್ದಾರೆ. ಅವರ ಜೊತೆಯೂ ಮಾತನಾಡ್ತೇನೆ ಎಂದರು.
ಗುಜರಾತ್ ಮಾದರಿ ಸಂಪುಟ ರಚನೆ ವಿಚಾರ:
ಗುಜರಾತ್ ಮಾದರಿ ಸಂಪುಟ ರಚನೆ ವಿಚಾರವಾಗಿ ಮಾತನಾಡಿದ ಅವರು, ಗುಜರಾತ್ ಮಾದರಿ ಆಗಬೇಕೋ, ಬೇರೆ ಯಾರು ಆಗಬೇಕು ಹೇಳ್ತಾರೆ ಎಂದು ಉತ್ತರಿಸಿದರು.
ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.