ಬೆಂಗಳೂರು : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದ ವತಿಯಿಂದ ನೀಡಿರುವ ಸಾಲ ವಸೂಲಾತಿ ಪ್ರಸಕ್ತ ವರ್ಷ ಶೇ. 50 ರಷ್ಟು ಪ್ರಗತಿ ಸಾಧಿಸಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಟಾರ್ಗೆಟ್ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಗುರುವಾರ ಕೆಎಂಡಿಸಿ ಭವನದಲ್ಲಿ ನಿರ್ದೇಶಕ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಸಾಲ ವಸೂಲಾತಿಯಲ್ಲಿ ಕಳಪೆ ಪ್ರದರ್ಶನ  ಜಿಲ್ಲೆಗಳ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿ ಈ ವರ್ಷ ಶೇ. 50 ರಷ್ಟು ವಸೂಲಾತಿ ಆಗಲೇಬೇಕು ಎಂದು ನಿರ್ದೇಶನ ನೀಡಿದರು.ಶೈಕ್ಷಣಿಕ, ಉದ್ದಿಮೆ, ಸ್ವಾವಲಂಭಿ ಯೋಜನೆ ಸೇರಿ ನಿಗಮ ನೀಡಿರುವ ಸಾಲದ ಪೈಕಿ 582 ಕೋಟಿ ರೂ. ವಸೂಲಾತಿ ಆಗಬೇಕಿದೆ. ವಸೂಲಾತಿ ಪ್ರಮಾಣ 2021 ರಲ್ಲಿ  ಶೇ. 15, 2022 ರಲ್ಲಿ ಶೇ.25 ರಷ್ಟು ಇದೆ. 2023-24 ರಲ್ಲಿ ಶೇ.50 ರಷ್ಟು ಗುರಿ ಸಾಧಿಸಬೇಕು ಎಂದು ಸೂಚನೆ ನೀಡಿದರು.


ಕಲಬುರಗಿ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ಬೆಂಗಳೂರು ಕೇಂದ್ರ ಜಿಲ್ಲೆಗಳಲ್ಲಿ ಸಾಲ ವಸೂಲಾತಿ ಪ್ರಮಾಣ ಕೇವಲ ಶೇ.1.36 ರಿಂದ 2.64 ಇರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಸಚಿವರು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ, ಇದಕ್ಕಾಗಿ ವೇತನ, ಸೌಲಭ್ಯ ನೀಡಬೇಕೆ ಎಂದು ಪ್ರೆಶ್ನೆ ಮಾಡಿದರು. ಜಿಲ್ಲಾ ವ್ಯವಸ್ಥಾಪಕರು ಹಾಗೂ ವಸೂಲಾತಿ ಅಧಿಕಾರಿಗಳ ಸಭೆ ಇದೇ ತಿಂಗಳು 25 ರಂದು ಕರೆಯುವಂತೆ ಸೂಚಿಸಿದರು. ಇನ್ಮುಂದೆ ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ ಎಂದು ಹೇಳಿದರು.


ಇದನ್ನೂ ಓದಿ- Cafe Coffee Day Story: ಪತಿ ಆತ್ಮಹತ್ಯೆ, ಕಂಪನಿಗೆ 7000 ಕೋಟಿ ಸಾಲ ಇತ್ತು, ಸಿಸಿಡಿಯ 'ರಕ್ಷಕ' ಮಾಳವಿಕಾ


ಸಾಲ ಮರು ಪಾವತಿ ವಿಚಾರದಲ್ಲಿ ಒನ್ ಟೈಮ್ ಸೆಟ್ಲ್ ಮೆಂಟ್ ಯೋಜನೆ ಬಗ್ಗೆ ಪ್ರಸ್ತಾವನೆ ಸಿದ್ದಪಡಿಸಿ, ಸಾಲ ಮರುಪಾವತಿ ಸರಿಯಾಗಿ ಮಾಡುವವರಿಗೆ ಪ್ರಸಂಶನಾ ಪ್ರಮಾಣ ಪತ್ರ ನೀಡಿ ಮತ್ತೆ ಹೊಸದಾಗಿ ಸಾಲ ನೀಡುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಸಾಲ ವಸೂಲಾತಿಗಾಗಿ ಅಭಿಯಾನ ಆರಂಭಿಸಿ ಅದಕ್ಕಾಗಿ ವಾಹನ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ನೀಡಿದರು.ಇದೇ ಸಂದರ್ಭದಲ್ಲಿ ಆನ್ ಲೈನ್ ಮೂಲಕ ಸಾಲ  ಹಾಗೂ ಕಂತು ಮರು ಪಾವತಿ ವ್ಯವಸ್ಥೆ ಗೆ ಸಚಿವರು ಚಾಲನೆ ನೀಡಿದರು. ನಿಗಮದ ಯೋಜನೆಗಳ ಬಗ್ಗೆ ಒನ್ ಟೈಮ್ ಸೆಟ್ಲ್ ಮೆಂಟ್, ಸಾಲ ವಸೂಲಾತಿಅಭಿಯಾನ ಬಗ್ಗೆ ವ್ಯಾಪಕ ಪ್ರಚಾರ ನೀಡಲು ನಿರ್ದೇಶನ ನೀಡಿದರು.


ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೊಹಮದ್ ನಜೀರ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. 


ಕೇಂದ್ರದ ಯೋಜನೆ ಅನುಕೂಲ ಪಡೆಯದ ಬಗ್ಗೆ ಅಧಿಕಾರಿಗಳ ತರಾಟೆ


2016-17 ನೇ ಸಾಲಿನಿಂದ ಕೇಂದ್ರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆಗಳನ್ನು ರಾಜ್ಯದಲ್ಲಿ ಪಡೆಯದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ತಕ್ಷಣ ದಿಂದ ಪ್ರಾರಂಭ ಮಾಡಲು ಸೂಚಿಸಿದರು. ಶಿಕ್ಷಣ ಹಾಗೂ ಉದ್ದಿಮೆ ಗೆ ಎನ್ ಎಂ ಡಿಸಿ ಯಿಂದ ವರ್ಷಕ್ಕೆ 10 ಕೋಟಿ ರೂ. ವರೆಗೆ ಸಾಲ ದೊರೆಯಲಿದ್ದು ರಾಜ್ಯದ ವಿದ್ಯಾರ್ಥಿ, ಯುವ ಉದ್ಯಮಿಗಳಿಗೆ ನೆರ ವಾಗಲಿದೆ. ಇಷ್ಟು ವರ್ಷ ಕೇಂದ್ರದ ಯೋಜನೆ ಯಾಕೆ ಪಡೆಯಲಿಲ್ಲ ಎಂದು ಪ್ರೆಶ್ನೆ ಮಾಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.