ಸದಾಶಿವನಗರ : ಕಾಂಗ್ರೆಸ್ ನವರು ಮಾಡ್ತಿರೋದು ಬೀದಿ ನಾಟಕ, ಇದನ್ನು ನಾನು ಖಂಡಿಸ್ತಿವಿ. ರಾಜ್ಯದಲ್ಲಿ ಕೊರೋನಾ ತುರ್ತು ಪರಿಸ್ಥಿತಿ ಇದೆ. ಈಗ ಪಾದಯಾತ್ರೆ ಮಾಡಿದ್ರೆ ಕೊರೊನಾ ಜಾಸ್ತಿ ಆಗುತ್ತೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಕಾಂಗ್ರೆಸ್ ಪಾದಯಾತ್ರೆಯನ್ನ ಬೀದಿ ನಾಟಕ ಎಂದು ವ್ಯಂಗ್ಯವಾಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಸಚಿವ ಕೆ. ಸುಧಾಕರ್(K Sudhakar), ಚುನಾವಣೆಗೋಸ್ಕರ ಕಾಂಗ್ರೆಸ್ ಬೀದಿ ನಾಟಕ ಮಾಡ್ತಿದ್ದಾರೆ. ಇದು ಕಾಂಗ್ರೆಸ್ ನವರು ಕಾವೇರಿಗೆ ಮಾಡುತ್ತಿರುವ ಅಪಮಾನ. ಬಿಬಿಎಂಪಿ ಚುನಾವಣೆ ಗುರಿಯಾಗಿಟ್ಟುಕೊಂಡು, ಬೀದಿ ನಾಟಕ ಶುರುಮಾಡಿದ್ದಾರೆ. ಇದು ನನಗೆ ಖೇಧ ಉಂಟುಮಾಡಿದೆ. ಇದಕ್ಕೆ ನನ್ನ ದಿಕ್ಕಾರವಿದೆ ಎಂದರು.


ಇದನ್ನೂ ಓದಿ : Basavaraj Bommai : 'ಜನರ ಮರಳು ಮಾಡಲು ಪಾದಯಾತ್ರೆ ಮಾಡ್ತಿದ್ದಾರೆ, ಜನರು ಮರಳಾಗಲ್ಲ'


ಐದು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರು? ಮೇಕೆದಾಟು(Mekedatu)ಗೆ ಏನೆ ಒಳ್ಳೆ ಕೆಲಸ ಆಗಬೇಕು ಅಂದ್ರೆ ಬಿಜೆಪಿಯಿಂದ ಅದರಲ್ಲೂ ಬೊಮ್ಮಾಯಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.


ರಾಜ್ಯದಲ್ಲಿ ಬರುವ ಕೋವಿಡ್ ಕೇಸ್(Covid-19 Cases) ಸುಳ್ಳು ಹೇಳ್ತಿರಾ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಸಚಿವ ಡಾ. ಕೆ. ಸುಧಾಕರ್, ಮಹಾರಾಷ್ಟ್ರದಲ್ಲಿ ಅಷ್ಟೊಂದು ಕೇಸ್ ಗಳು ಬರುತ್ತಿದ್ಯಾಲ್ಲಾ ಹಾಗಾದರೆ ಅದು ಸುಳ್ಳಾ? ನಾವೇನಾದರೂ ಕೇಸ್ ಜಾಸ್ತಿ ಮಾಡಿ ಅಂದ್ವಾ? ಅಲ್ಲಿರೋದು ನಿಮ್ಮದೇ ಸರ್ಕಾರ ಎಂದು ಡಿಕೆಶಿಗೆ ಸಚಿವ ಸುಧಾಕರ್ ಟಾಂಗ್ ನೀಡಿದರು. ಬೀದಿ ನಾಟಕವನ್ನು ಜನರು ನೋಡ್ತಿದ್ದಾರೆ. ಯುವಕರಿದ್ದಾರೆ ನೋಡ್ಕೊಳ್ತಾರೆ ಎಂದು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.