ಚಿಕ್ಕಬಳ್ಳಾಪುರ: ದಲಿತರು, ಹಿಂದುಳಿದ ವರ್ಗದವರು ಯಾರು ಕೂಡ ಗೋಮಾಂಸ ತಿನ್ನುವುದಿಲ್ಲ. ಸುಖಾಸಮ್ಮನೆ ದಲಿತರನ್ನು ಹಾಗೂ ಹಿಂದುಳಿದ ವರ್ಗದವನ್ನು ಅಪಹಾಸ್ಯ ಮಾಡಿ ಅವರಿಗೆ ಗೋಮಾಂಸ ತಿನ್ನುತ್ತಾರೆಂಬ ಹಣೆಪಟ್ಟಿಕಟ್ಟಲಾಗುತ್ತಿದೆ ಎಂದು ಆರೋಪಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಡಾ.ಕೆ.ಸುಧಾಕರ್‌ ತಿರುಗೇಟು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಇಂದು ನಡೆದ ಪಿಕಾರ್ಡ್‌ ಬ್ಯಾಂಕ್‌ ವಾರ್ಷಿಕ ಸರ್ವ ಸದಸ್ಯರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್(Dr K.Sudhakar), ದಲಿತರು, ಹಿಂದುಳಿದ ವರ್ಗದವರು ಗೋಮಾಂಸ ತಿನ್ನುತ್ತಾರೆ. ಅದಕ್ಕೆ ಬಿಜೆಪಿಯವರು ನಿಷೇಧ ಹೇರಿದ್ದಾರೆಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯೆ ನೀಡಿದ ಸುಧಾಕರ್‌, ದಲಿತರನ್ನು ಹಾಗೂ ಹಿಂದುಳಿದ ವರ್ಗಗಳನ್ನು ಈ ರೀತಿ ಅಪಮಾನ ಮಾಡುವುದು ವಿಪಕ್ಷ ನಾಯಕರಿಗೆ ಶೋಭೆಯಲ್ಲ ಎಂದರು.


ಪಡಿತರ ಚೀಟಿದಾರರಿಗೊಂದು 'ಎಚ್ಚರಿಕೆ ಸಂದೇಶ' ನೀಡಿದ ರಾಜ್ಯ ಸರ್ಕಾರ!


ನಾನು ಕೂಡ ಹಲವು ವರ್ಷಗಳಿಂದ ನೋಡುತ್ತಿದ್ದೇನೆ. ಅವರು ಏನು ಹೇಳುತ್ತಾರೆ. ಅದಕ್ಕೆ ವಿರುದ್ದವಾಗಿಯೆ ಫಲಿತಾಂಶ ಬರುತ್ತದೆ. ಕುಮಾರಸ್ವಾಮಿ ಅವರ ಅಪ್ಪನಾಣೆ ಸಿಎಂ ಆಗಲ್ಲ ಎನ್ನುತ್ತಿದ್ದರು. ಕುಮಾರಸ್ವಾಮಿಯೆ ಸಿಎಂ ಆಗಿ ಬಿಟ್ಟರು. ಈ ರೀತಿ ಎರಡು ಮೂರು ವಿಚಾರಗಳಲ್ಲಿ ಸಿದ್ದರಾಮ್ರಣ್ಣ ಏನೇ ಹೇಳಿದರೂ ಅದಕ್ಕೆ ವಿರುದ್ಧವಾಗಿ ಫಲಿತಾಂಶ ಬರುತ್ತದೆ ಎಂದು ಗ್ರಾಮ ಪಂಚಾಯತಿಗಳಲ್ಲಿ ಎಷ್ಟೇ ತಿಪ್ಪರಲಾಗ ಹಾಕಿದರೂ ಬಿಜೆಪಿ ಗೆಲ್ಲುವುದಿಲ್ಲ. ಕಾಂಗ್ರೆಸ್‌ ಪಕ್ಷವೇ ಗೆಲ್ಲುವುದೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸುಧಾಕರ್‌ ಪ್ರತಿಕ್ರಿಯೆ ನೀಡಿದ್ದಾರೆ.


'ನೌಕರರ ಸಮಸ್ಯೆ ಬಗೆಹರಿಸುವದೆಂದ್ರೆ ಸದನದಲ್ಲಿ ಕೂತು 'ರೋಮಾಂಚನಕಾರಿ' ವಿಡಿಯೋ ನೋಡಿದಂತಲ್ಲ'