ತುಮಕೂರು: 'ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತೀಯಾ ಗೊತ್ತಾ? ಕತ್ತೆ ಕಾಯೋಕ್ ಬಂದಿದ್ದೀಯಾ ಇಲ್ಲಿಗೆ… ಸರ್ಕಾರದ ಕೆಲಸ ಮಾಡೋದು ಬಿಟ್ಟು ನಿನ್ನ ಹೆಂಡತಿಗೆ ಸೀರೆ ತರಲು ಹೋಗಿದ್ದಾ? ರಾಸ್ಕಲ್…'


COMMERCIAL BREAK
SCROLL TO CONTINUE READING

ಇದು ಅನುದಾನ ಖರ್ಚು ಮಾಡಲು ಉದಾಸೀನತೆ ಮಾಡಿರುವ ಜಿಲ್ಲಾ ಪಂಚಾಯತ್ ಇಂಜಿನಿಯರ್​ಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ(J.C.Madhuswamy) ಹರಿಹಾಯ್ದ ಪರಿ. ನಾಲಗೆ ಹರಿಬಿಡುವ ಮೂಲಕ ಸಚಿವರು ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.


Govind Karjol: 'ಸಿಎಂ ಹುದ್ದೆ ಖಾಲಿ ಇಲ್ಲ, ಮುಂದಿನ ಎರಡುವರೆ ವರ್ಷ ಬಿಎಸ್ ವೈನವ್ರೇ ಮುಖ್ಯಮಂತ್ರಿ'


ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ತ್ರೈಮಾಸಿಕ‌ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಸಿಟ್ಟಾದ ಸಚಿವರು, ತಾಳ್ಮೆ ಕಳೆದುಕೊಂಡು 'ಜಾಡಿಸಿ ಒದ್ದರೆ ಎಲ್ಲಿಗೋಗಿ ಬೀಳ್ತಿಯಾ ಗೊತ್ತಾ? ಈ ಜಿಲ್ಲೆ ಬಿಟ್ಟು ತೊಲಗಿ' ಎಂದರು.


B.C.Patil: ರೈತರಲ್ಲಿ ಮನವಿ ಮಾಡಿಕೊಂಡ ಸಚಿವ ಬಿ.ಸಿ.ಪಾಟೀಲ್!


'ಜಿಪಂ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ನಡೆದೇ ಇಲ್ಲ. ಕಳೆದ 4ರಂದು ನಾನೇ ಸೂಚನೆ ನೀಡಿದ್ದೆ. ಆದ್ರೂ ಯಾಕೆ ನೀವು ಕಂಟ್ರ್ಯಾಕ್ಟರ್​ನನ್ನು ಕರೆಸಿ ಕೆಲಸ ಒಪ್ಪಿಸಲಿಲ್ಲ. ಜಾಡ್ಸಿ ಒದ್ದರೆ ಎಲ್ಲಿಗೋಗ್ತೀಯಾ ಗೊತ್ತಾ? ನೀನು… ರಾಸ್ಕಲ್​… ಕತ್ತೆ ಕಾಯೋಕ್ ಬಂದಿದ್ದೀಯಾ ಇಲ್ಲಿಗೆ, ಸರ್ಕಾರದ ಕೆಲಸ ಮಾಡೋದು ಬಿಟ್ಟು ನಿನ್ನ ಹೆಂಡತಿಗೆ ಸೀರೆ ತರಲು ಹೋಗಿದ್ದಾ? ರಾಸ್ಕಲ್…' ಎನ್ನುತ್ತಾ ನಾಲಿಗೆ ಹರಿಯಬಿಟ್ಟರು.


JDS Party: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಬಿಗ್ ಶಾಕ್: ಜೆಡಿಎಸ್ ತೆಕ್ಕೆಗೆ ಕೈ ಶಾಸಕ..!


ಒಂದು ಹಂತದಲ್ಲಿ ಅಧಿಕಾರಿಗಳ ಉತ್ತರಕ್ಕೆ ಆಕ್ರೋಶಗೊಂಡು ತಾಳ್ಮೆ ಕಳೆದುಕೊಂಡ ಸಚಿವರು, 'ಈ ನನ್ಮಕ್ಕಳು ಎಲ್ಲರನ್ನೂ ಸಸ್ಪೆಂಡ್ ಮಾಡ್ರೀ…' ಎನ್ನುತ್ತ ಸಭೆಯಲ್ಲೇ ಜಿಪಂ ಸಿಇಒಗೆ ಸಚಿವ ಮಾಧುಸ್ವಾಮಿ ಸೂಚನೆ ನೀಡಿದರು. ಎಲ್ಲರೂ ಮೂಕಪ್ರೇಕ್ಷಕರಂತೆ ನೋಡುತ್ತ ಕುಳಿತಿದ್ದರು.


Bird Flu : ಹಕ್ಕಿ ಜ್ವರ ತಡೆಯಲು ರಾಜ್ಯದಲ್ಲಿ ರೆಡಿಯಾಗಿದೆ ‘ಏಳು ಸುತ್ತಿನ ಕೋಟೆ’..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.