ಇತ್ತೀಚಿಗೆ ಅಕ್ರಮ ಮರುಳು ಸಾಗಾಣಿಕೆ ಮಾಡುತ್ತಿದ್ದ ಟ್ರಾಕ್ಟರ್’ಗೆ ಸಿಲುಕಿ ಸಾವನ್ನಪ್ಪಿರುವ ನೆಲೋಗಿ ಪೊಲೀಸ್ ಠಾಣೆ ಮುಖ್ಯ ಪೇದೆ ಮಯೂರ ಅವರ ಕುಟುಂಬ ವರ್ಗದವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪೇದೆಯ ಚವಡಾಪುರ ತಾಂಡಾದ ಅವರ ನಿವಾಸದಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Vijay To Quit Acting: ಆಕ್ಟಿಂಗ್‌ಗೆ ದಳಪತಿ ವಿಜಯ್‌ ಗುಡ್‌ ಬೈ!? ಇದು ಅವರ ಕೊನೆಯ ಚಿತ್ರವೇ?


ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರೂ 1 ಲಕ್ಷ ಪರಿಹಾರದ ಚೆಕ್ ವಿತರಿಸಿದರು. ಸರ್ಕಾರದ ವತಿಯಿಂದ ರೂ 30 ಲಕ್ಷ ಪರಿಹಾರ ಹಾಗೂ ಮೃತ ಮಯೂರ ಅವರ ಸಂಬಳ ಹಾಗೂ ಇತರೆ ಸೌಲಭ್ಯ ಸೇರಿದಂತೆ ರೂ 40 ಲಕ್ಷ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಪೇದೆಯ ಕುಟುಂಬ ವರ್ಗದವರಿಗೆ ಸರಕಾರಿ ನೌಕರಿ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಮೃತ ಪೇದೆಯ ಕುಟುಂಬ ವರ್ಗದವರಿಗೆ ಭರವಸೆ ನೀಡಿದರು.


ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಈ ಹಿಂದಿನ ಸರಕಾರದದಲ್ಲಿ ನೇಮಕವಾದ ಅಧಿಕಾರಿಗಳು ಅಕ್ರಮ ಮರುಳು ಸಾಗಾಣಿಕೆ, ಜೂಜು ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ತನಿಖೆ ನಡೆಸಿ ಅಂತವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.


ಅಕ್ರಮ ಮರುಳು ಸಾಗಾಣಿಕೆ ಮಾಡುವವರು ರಾಜಕೀಯ ಪಕ್ಷಗಳ ಜೊತೆ ನಂಟು ಹೊಂದಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಪ್ರಕರಣದಲ್ಲಿ ಬಂಧಿಸಲಾದ ಆರೋಪಿ ಯಾವ ಪಕ್ಷದ ನಾಯಕರೊಂದಿಗೆ ಇದ್ದಾನೆ ಅವರೇ ಈಗ ಉತ್ತರಿಸಲಿ ಎಂದು ಸಚಿವರು ಹೇಳಿದರು.


ಇದನ್ನೂ ಓದಿ: Adipurush Controversy: 'ಕೇವಲ ಸಂಭಾಷಣೆ ಬದಲಾಯಿಸುವುದು ಸಾಕಾಗುವುದಿಲ್ಲ, ಕ್ಷಮೆ ಕೋರಿ'


ಈ ಸಂದರ್ಭದಲ್ಲಿ ಶಾಸಕರಾದ ಎಂ ವೈ ಪಾಟೀಲ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ