ಬೆಂಗಳೂರು : ಮಾಜಿ ಸಿಎಂ‌ ಹೆಚ್.ಡಿ ಹುಚ್ಚುಚ್ಚು ಹೇಳಿಕೆ ಕೊಡುವುದು ಸರಿಯಲ್ಲ, ಸಿಎಂ ಯಾರೆಂಬುದು ಹೈ ಕಮಾಂಡ್ ನಿರ್ಧಾರ ಮಾಡಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.


COMMERCIAL BREAK
SCROLL TO CONTINUE READING

ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಸಚಿವ ಆರ್ ಅಶೋಕ್, ನಮ್ಮ ಪಕ್ಷ ಯಾವುದೋ ಕುಟುಂಬದ ಪಕ್ಷ ಅಲ್ಲ. ಆದರೆ ಎಚ್ ಡಿ  ಕುಮಾರಸ್ವಾಮಿ ಅವರದ್ದು ಕುಟುಂಬದ ಪಕ್ಷ.‌ ನಮ್ಮದು ರಾಷ್ಟ್ರೀಯ ಪಕ್ಷ.ದೇಶದಲ್ಲಿ‌ ಇರುವ 130 ಕೋಟಿ ಜನರ ಪೈಕಿ ಯಾರು ಬೇಕಾದರೂ ಸಿಎಂ ಆಗಬಹುದು‌ ಯಾರು ಬೇಕಾದರೂ ಪ್ರಧಾನಿ ಆಗಬಹುದು. ಆದರೆ ಜೆಡಿಎಸ್ ದು ಏನು ತೀರ್ಮಾನ ಆಗಬೇಕಾದರೂ‌ ಅವರ ಮನೆಯಲ್ಲೇ ಆಗಬೇಕು ಎಂದು ತಿರುಗೇಟು ನೀಡಿದರು.


ಇದನ್ನೂ ಓದಿ : ಚುನಾವಣೆ ಪ್ರಚಾರ : ಬಿವೈ ವಿಜಯೇಂದ್ರಗೆ ಜವಾಬ್ದಾರಿ ನೀಡಿದ ಬಿಜೆಪಿ


ಸಿಎಂ ಆಗಬೇಕಾದರೂ ಉಪ ಸಿಎಂ ಆಗಬೇಕಾದರೂ ಮನೆಯವರೇ.ಅವರದ್ದು ಈ ಪರಂಪರೆ. ಡಿಎಂಕೆ ಹಾಗೂ ಲಾಲು ಪ್ರಸಾದ್ ಯಾದವ್ ಅವರದ್ದೂ ಕೂಡಾ ಇದೇ ರೀತಿಯಾದ ಕುಟುಂಬ ಪಕ್ಷ ಎಂದರು.


ಬ್ರಿಟಿಷರದ್ದು ಒಡೆದು ಆಳುವ ನೀತಿ.ಅದೇ ರೀತಿಯಲ್ಲಿ ಕುಮಾರಸ್ವಾಮಿ ವರ್ತಿಸುತ್ತಿದ್ದಾರೆ. ಬ್ರಿಟಿಷರು ಹಿಂದೂ ಮುಸ್ಲಿಂ ಎಂದು ಒಡೆದು ಆಡಳಿತ ನಡಿಸಿದರು. ಅದೇ ಹಾದಿಯಲ್ಲಿ ಕುಮಾರಸ್ವಾಮಿ ಸಾಗುತ್ತಿದ್ದಾರೆ ಎಂದು ಆರೋಪಿಸಿದರು.


ಬ್ರಾಹ್ಮಣರ ಮೇಲೆ ಬೇರೆ ಜಾತಿ ಎತ್ತಿಕಟ್ಟಿ ಒಡಕು ಮೂಡಿಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಮಾಧ್ಯಮ ಸಮೀಕ್ಷೆಗಳು ಜೆಡಿಎಸ್ 20 ಸ್ಥಾನಕ್ಕೆ ಸೀಮಿತ ಎನ್ನುತ್ತಿವೆ.ಆದರೆ ಅವರು ಮಾತ್ರ 130 ಎನ್ನುತ್ತಾರೆ.ಅದು ಯಾವ ಪರಮಾತ್ಮನ ಸಮೀಕ್ಷೆ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಬಂದರೆ ಅಧಿಕಾರ ಹಿಡಿಯಬಹುದು ಎಂಬ ಭ್ರಮೆಯಲ್ಲಿದ್ದರು. ಆದರೆ ಸಮೀಕ್ಷೆಯಿಂದ ಆ ಭ್ರಮೆ ಹೋಗಿದೆ. ಅದಕ್ಕೆ ಈಗ ಮಾತು ಹಿಡಿತ ತಪ್ಪುತ್ತಿದೆ ಎಂದರು.


ಇದುವರೆಗೆ ಯಾವ ಸಿಎಂ‌ ಕೂಡಾ  ಜಾತಿ ಬಗ್ಗೆ ಮಾತಾಡಿರಲಿಲ್ಲ. ಕರ್ನಾಟಕ ಬ್ರಾಹ್ಮಣರು ಒಳ್ಳೆಯವರು, ಮಹಾರಾಷ್ಟ್ರದವರು ಕೆಟ್ಟವರು ಎಂದಿದ್ದಾರೆ. ಚುನಾವಣಾ ಓಟ್ ದೃಷ್ಟಿಯಿಂದ ಈ ಮಾತನ್ನು ಆಡಿದ್ದಾರೆ.ಬಿಜೆಪಿಯಲ್ಲಿ ಸಿಎಂ, ಪಿಎಂ ಆಗಬೇಕಂದ್ರೆ ಟ್ಯಾಲೆಂಟ್ ಇರಬೇಕು. ಆದ್ರೆ ಜೆಡಿಎಸ್ ನಲ್ಲಿ ಟ್ಯಾಲೆಂಟ್ ಬೇಡ, ಕುಟುಂಬ ರಾಜಕಾರಣ ಸಾಕು ಎಂದು ಅಶೋಕ್ ತಿರುಗೇಟು ನೀಡಿದರು.


ಆ ಟ್ಯಾಲೆಂಟ್‌ ಪ್ರಹ್ಲಾದ್ ಜೋಶಿಯವರಿಗೆ ಇದ್ಯಾ ಎಂಬ ಪ್ರಶ್ನೆಗೆ ಹೌದು, ಇದೆ. ಆದರೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. ಪ್ರಹ್ಲಾದ್ ಜೋಶಿ ಸಿಎಂ ಆಗಲು ನಿಮ್ಮ ಒಪ್ಪಿಗೆ ಇದ್ಯಾ ಎಂದಿದ್ದಕ್ಕೆ, ಸಿಎಂ ಆಯ್ಕೆ ಮಾಡುವುದು ಶಾಸಕರು. ವರಿಷ್ಠರು ನಂತರ ನಿರ್ಧಾರ ಮಾಡುತ್ತಾರೆ. ಈಗಲೂ ಬೊಮ್ಮಾಯಿ ಅವರೇ ಸಿಎಂ ಮುಂದೆಯೂ ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು.


ಸಿಎಂ ಯಾರು ಆಗುತ್ತಾರೆ ಎಂದು ಕೇಂದ್ರದ ನಾಯಕತ್ವ,ಕೋರ್ ಕಮಿಟಿ ತೀರ್ಮಾನ ಮಾಡುತ್ತದೆ. ಬದಲಾಗಿ ಕುಟುಂಬದಲ್ಲಿ ಅಲ್ಲ.ಕುಮಾರಸ್ವಾಮಿಯವ್ರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ತಳ,ಬುಡ ಏನೂ ಇಲ್ಲ,ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. 


ಹೆಚ್.ಡಿಕೆ ಹೇಳಿಕೆಯಿಂದ ಬಿಜೆಪಿಯಲ್ಲಿ ತಲ್ಲಣ ಉಂಟಾಗಿದ್ಯಾ ಎಂಬ ಪ್ರಶ್ನೆಗೆ, ತಲ್ಲಣ ಉಂಟಾಗಿರೋದು ಜೆಡಿಎಸ್ ನಲ್ಲಿ. ನಾನು ಬ್ರಾಹ್ಮಣ ವಿರೋಧಿ ಅಲ್ಲ ಎಂದು ಪದೇ ಪದೇ ಪ್ರಸ್ ಮೀಟ್ ಮಾಡುತ್ತಿದ್ದಾರೆ‌ ಎಂದರು.


ಇದನ್ನೂ ಓದಿ : ಪ್ರಜಾಧ್ವನಿ ಹೆಸರಿನ ಪ್ರಜಾದ್ರೋಹ ಯಾತ್ರೆಯಲ್ಲೂ ಕಾಂಗ್ರೆಸ್‍ನಿಂದ ದಲಿತರಿಗೆ ದ್ರೋಹ: ಬಿಜೆಪಿ


ಎಂಟು ಜನ ಡಿಸಿಎಂ ಯಾರು ಅಂತಾ ಗೊತ್ತಿದ್ರೆ ಅದನ್ನು ಹೇಳಲಿ. ಸುಮ್ಮನೆ ಹೇಳಿಕೆ ಕೊಡುತ್ತಾರೆ ಎಂದರು‌.ಈ ರೀತಿಯಲ್ಲಿ  ಹುಚ್ಚುಚ್ಚು ಸ್ಟೇಟ್ ಮೆಂಟ್ ಕೊಡುವುದು ಸರಿಯಲ್ಲ ಎಂದರು.


ರಾಜ್ಯಕ್ಕೆ ಆಗಮಿಸಿದ್ದ  ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ, ಬೊಮ್ಮಾಯಿ ನಾಯಕತ್ವದ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಜೆಡಿಎಸ್ ಹಿಂದೆ ಯಾರೂ ಹೋಗಲ್ಲ.  
ಎಚ್ ಡಿಕೆ  ಸಿಎಂ ವರ್ಚಸ್ಸಿನಿಂದ ಕೆಳಮಟ್ಟಕ್ಕೆ  ಬರ್ತಿದ್ದಾರೆ. ಎಸ್ ಎಂ ಕೃಷ್ಣಾ ನಡವಳಿಕೆ ಹೇಗಿದೆ ಎಂದು ನೋಡಿದ್ದೀರಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.