ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೊದಲು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಒತ್ತಾಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಆರ್ ಅಶೋಕ್, ರಾಷ್ಟ್ರದ ಭದ್ರತೆ ಪ್ರಶ್ನೆ ಬಂದಾಗ ಏಕತೆಯ ಪ್ರದರ್ಶನ ಮಾಡಬೇಕು. ದೇಶದ ಗಡಿಯಲ್ಲಿ ಯೋಧರು ಪ್ರಾಣದ ಹಂಗು ತೊರೆದು ರಕ್ಷಣೆ ಮಾಡುತ್ತಿದ್ದಾರೆ. ಟೆರರಿಸ್ಟ್ ಆದಾಗ ಬಹಳ ಅನುಕಂಪದಿಂದ ಮಾತಾಡಬಾರದು. ಬಾಂಬ್ ಬ್ಲಾಸ್ಟ್ ಆದಾಗ ಪಕ್ಷತೀತವಾಗಿ ಒಟ್ಟಾಗಿ ನಿಲ್ಲಬೇಕು. ಅವನ್ಯಾವನೋ ಟೆರರಿಸ್ಟ್ ಮೇಲೆ ಯಾಕೆ ಇಷ್ಟೊಂದು ಪ್ರೀತಿ? ಎಂದು ಪ್ರಶ್ನಿಸಿದರು.


ಇದನ್ನೂ ಓದಿ : DK Shivakumar : ಮಂಗಳೂರು ಕುಕ್ಕರ್ ಬ್ಲಾಸ್ಟ್ : 'ಸರ್ಕಾರ ಮತದಾರರ ಮಾಹಿತಿ ಕಳ್ಳತನ ವಿಚಾರ ಡೈವರ್ಟ್ ಮಾಡುವುದು'


ಇನ್ನೂ ಮುಂದುವರೆದು ಮಾತನಾಡಿದ ಅವರು, ವೋಟಾರ್ ಐಡಿ ಬಗ್ಗೆ ಏನಾದರೂ ದಾಖಲೆ ಇದ್ರೆ, ಸದನದಲ್ಲಿ ಮಂಡಿಸಿ ಹೋರಾಟ ಮಾಡಿ. ನಿಮಗೆ ಹೋರಾಟ ಮಾಡಲು ತಾಕತ್ ಇಲ್ವಾ..? ನಿಜವಾಗಿಯೂ ಈ ರೀತಿಯ ಹೇಳಿಕೆ ಹೇಡಿತನದ್ದು. ಭಯೋತ್ಪಾದನೆ ಚಟುವಟಿಕೆಗೆ ಕುಮ್ಮಕ್ಕು ಕೊಡೋದು ಅಕ್ಷಮ್ಯ ಅಪರಾಧ. ಕಾಂಗ್ರೆಸ್ ನವರಿಗೆ ಮುಸ್ಲಿಂ ಭಯೋತ್ಪಾದಕರೆಲ್ಲರು ದೇವಲೋಕದಿಂದ ಬಂದ ದೇವತೆಗಳು ಕಾಣ್ತಾರೆ. ಮುಸ್ಲಿಮರು ಅಂದರೆ ಇವರಿಗೆ ಬಹಳ ಪ್ರೀತಿ. ಇವರ ಅತಿಯಾದ ಪ್ರೀತಿಯೇ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮಾರಕ ಆಗುತ್ತದೆ. ಒಬ್ಬ ಟೆರರಿಸ್ಟ್ ಗೆ ಈ ರೀತಿಯ ಪ್ರೀತಿ ತೋರಿಸೋದು ಕಾಂಗ್ರೆಸ್ ಗೆ ಶೋಭೆ ತರುವಂತದ್ದಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ : Araga Jnanendra : ಕುಕ್ಕರ್ ಬಾಂಬ್ ಸ್ಫೋಟದ ಅನುಮಾನ,‌ ಅಲ್ಪಸಂಖ್ಯಾತರ ಓಟಿಗಾಗಿ ಡಿಕೆಶಿಯಿಂದ ಓಲೈಕೆ ರಾಜಕಾರಣ'


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.