R Ashok: ನೂತನ ಸಭಾಪತಿ ಬಳಿ ಕೇವಲ ಎರಡು ಆಯ್ಕೆಗಳಿವೆ: ಸಚಿವ ಅಶೋಕ್ ಹೇಳಿದ್ದೇನು?
ಅವರಾಗಿಯೇ ರಾಜೀನಾಮೆ ಕೊಡಬೇಕು.ಇಲ್ಲವೇ ಸದನದಲ್ಲಿ ಅವಿಶ್ವಾಸ ಮಂಡನೆ ಎದುರಿಸಬೇಕು- ಕಂದಾಯ ಸಚಿವ ಆರ್.ಅಶೋಕ್
ಬೆಂಗಳೂರು: ಪ್ರಸ್ತುತ ಮಾನ್ಯ ಸಭಾಪತಿಗಳ ಮುಂದೆ ಎರಡು ಆಯ್ಕೆಗಳಿವೆ. ಅವರಾಗಿಯೇ ರಾಜೀನಾಮೆ ಕೊಡಬೇಕು.ಇಲ್ಲವೇ ಸದನದಲ್ಲಿ ಅವಿಶ್ವಾಸ ಮಂಡನೆ ಎದುರಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ(K Prathap Chandra Shetty) ವಿರುದ್ಧ ಅವಿಶ್ವಾಸ ನಿರ್ಣಯ ವಿಚಾರವಾಗಿ ವಿಧಾನಸೌಧದಲ್ಲಿ ಹೇಳಿಕೆ ನೀಡಿರುವ ಇವರು ಈಗ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ, ನಿರ್ಣಯ ಅಂಗೀಕಾರವಾಗಿದೆ ಇನ್ನೆರಡು ದಿನದಲ್ಲಿ ಇದರ ಕುರಿತಾದ ಪ್ರಕ್ರಿಯೆ ಮುಗಿಯಲಿದೆ ಎಂದು ಹೇಳಿದರು.
BIG NEWS: ಮತ್ತೊಂದು ಮಹತ್ವದ ನಿರ್ಧಾರಕ್ಕೆ ಮುಂದಾದ ಕಾಂಗ್ರೆಸ್..!
ಮುಂದಿನ ಸಭಾಪತಿ ಯಾರು ಅನ್ನುವುದು ಚರ್ಚೆಯಾಗಬೇಕಿದೆ. ಮುಖ್ಯಮಂತ್ರಿಗಳು ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನುಡಿದರು.
Congress: 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಸ್ತಿತ್ವಕ್ಕೆ'
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸಭಾಪತಿ ರಾಜೀನಾಮೆ ವಿಚಾರದಲ್ಲಿ ಅಡೆತಡೆ ಮಾಡಿಲ್ಲ, ಸಭಾಪತಿ ರಾಜೀನಾಮೆ ನೀಡಬೇಡಿ ಎಂದು ಹೇಳಿಲ್ಲ ಎಂದರು.
Laxman Savadi: ಸಾರಿಗೆ ನೌಕರರಿಗೆ 'ಸಿಹಿ ಸುದ್ದಿ' ನೀಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.