ಒಕ್ಕಲಿಗ ಸಮುದಾಯದಿಂದ 10% ಮೀಸಲಾತಿ ಹೆಚ್ಚಳಕ್ಕೆ ಮನವಿ: ಸಚಿವ ಆರ್. ಅಶೋಕ್ ಹೇಳಿದ್ದೇನು?
ಲಿಂಗಾಯತರು, ಒಕ್ಕಲಿಗರು, ಈಡಿಗರು ಎಲ್ಲರೂ ಮೀಸಲಾತಿ ಹೆಚ್ಚಳಕ್ಕೆ ಮನವಿ ಕೊಟ್ಟಿದ್ದಾರೆ. ಖಂಡಿತ ಕಾನೂನು ಪ್ರಕಾರ ಪರಿಶೀಲನೆ ಮಾಡಿ ಮುಂದಡಿ ಇಡುತ್ತೇವೆ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವ ಸರ್ಕಾರ, ಬಿಜೆಪಿ ಸರ್ಕಾರ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಬೆಂಗಳೂರು: ಒಕ್ಕಲಿಗ ಸಮುದಾಯದಿಂದ 10% ಮೀಸಲಾತಿ ಹೆಚ್ಚಳಕ್ಕೆ ಮನವಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್, "ಎಲ್ಲಾ ಜಾತಿಯವರು ಕೂಡ ಮೀಸಲಾತಿಗಾಗಿ ಬೇಡಿಕೆ ಕೊಟ್ಟಿದ್ದಾರೆ. ಎಲ್ಲರ ಮನವಿಯನ್ನೂ ಗೌರವಯುತವಾಗಿ ತೆಗೆದುಕೊಂಡಿದ್ದೇವೆ. ಎಲ್ಲರ ಮನವಿಯನ್ನು ಪರಿಶೀಲನೆ ಮಾಡಿ, ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ" ಎಂದರು.
ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಬಹಳ ವರ್ಷಗಳಿಂದ ಮೀಸಲಾತಿ ಹೆಚ್ಚಿಸುವ ಬಗ್ಗೆ ಬೇಡಿಕೆ ಇತ್ತು. ಅದರ ಪರಿಶೀಲನೆ ನಡೆಸಲು ಕಮಿಟಿ ಮಾಡಿದ್ದೆವು. ಅವರು ನೀಡಿದ ವರದಿ ಪ್ರಕಾರ ಕ್ರಮ ಕೈಗೊಂಡಿದ್ದೇವೆ. ನಾನೀಗ ಒಂದು ಜಾತಿ, ಸಮುದಾಯದ ನಾಯಕ ಅಲ್ಲ.ರಾಜ್ಯದ ಕಂದಾಯ ಸಚಿವ, ಎಲ್ಲಾ ಸಮುದಾಯವನ್ನ ಒಂದೇ ರೀತಿ ನೋಡಬೇಕು. ಹಾಗೆ ನೋಡಿದರೆ.ಸಿಎಂ ಲಿಂಗಾಯತ ಸಮುದಾಯದವರು. SC, ST ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ್ದಾರೆ. ಯಾರು ದಮನಿತರಿದ್ದಾರೆ ಅವರ ಪರ ಇರುವ ಸರ್ಕಾರ ನಮ್ಮದು ಎಂದು ಹೇಳಿದರು.
ಇದನ್ನೂ ಓದಿ- ಪೊಲೀಸರ ಲಾಠಿ ಕಿತ್ತು ಬಿಸಾಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಲಲಿತಾ ಟಾಗೆಟ್ ಇನ್ನಿಲ್ಲ
ಲಿಂಗಾಯತರು, ಒಕ್ಕಲಿಗರು, ಈಡಿಗರು ಎಲ್ಲರೂ ಮೀಸಲಾತಿ ಹೆಚ್ಚಳಕ್ಕೆ ಮನವಿ ಕೊಟ್ಟಿದ್ದಾರೆ. ಖಂಡಿತ ಕಾನೂನು ಪ್ರಕಾರ ಪರಿಶೀಲನೆ ಮಾಡಿ ಮುಂದಡಿ ಇಡುತ್ತೇವೆ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವ ಸರ್ಕಾರ, ಬಿಜೆಪಿ ಸರ್ಕಾರ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಇದನ್ನೂ ಓದಿ- ಚುನಾವಣೆ ಮೂಡ್ಗೆ ಜಾರಿದ ರಾಜಕೀಯ ಪಕ್ಷಗಳು ; 3 ಪಾರ್ಟಿಯಿಂದ ಯಾತ್ರೆ ಪಟ್ಟಿ ಸಿದ್ದ
ಬಿಜೆಪಿ ರಾಜ್ಯ ಪ್ರವಾಸ ವಿಚಾರ:
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರವಾಸ ಕುರಿತಂತೆ ಪ್ರತಿಕ್ರಿಯಿಸಿದ ಕಂದಾಯ ಸಚಿವರು,
ಈಗಾಗಲೇ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಜೊತೆ ಮಾತನಾಡಿದ್ದೇನೆ. ಎಲ್ಲೆಲ್ಲಿ ಹೋಗಬೇಕು ಅಂತ ಲೀಸ್ಟ್ ಮಾಡಿದ್ದೇವೆ. ನಾನೂ ಕೂಡ ಕೆಲವು ಕಡೆ ಪ್ರವಾಸ ಮಾಡಲಿದ್ದೇನೆ. ಎಲ್ಲ ನಾಯಕರು ಸೇರಿ ಪ್ರವಾಸ ಮಾಡುತ್ತೇವೆ ಎಂದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.