ಚಿಕ್ಕಮಗಳೂರು: ಚಿಕ್ಕಮಗಳೂರು ಹೊರವಲಯದ ಸರಾಯ್ ರೆಸಾರ್ಟ್ ನಲ್ಲಿ ಅತೃಪ್ತ ಸಚಿವರು ಹಾಗೂ ಶಾಸಕರ ಗೌಪ್ಯ ಸಭೆಯೊಂದು ನಡೆದಿದ್ದು, ಇದರಿಂದ ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಆರಂಭವಾಗುತ್ತಾ ಎಂಬಂತಾಗಿದೆ.


COMMERCIAL BREAK
SCROLL TO CONTINUE READING

ಶುಕ್ರವಾರ ರಾತ್ರಿ ಚಿಕ್ಕಮಗಳೂರಿನ ಹೊರವಲಯದಲ್ಲಿರುವ ಸರಾಯ್ ರೆಸಾರ್ಟ್ ನಲ್ಲಿ ರಮೇಶ್ ಜಾರಕಿಹೊಳಿ(Ramesh Rarkiholi), ಸಿ.ಪಿ ಯೋಗೇಶ್ವರ್, ಗೋಪಾಲಯ್ಯ, ಶಾಸಕರಾದ ಎಂಪಿ ಕುಮಾರಸ್ವಾಮಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದು.


BJP: 'ನಮ್ಮದು ಬಾಂಬೆ ಟೀಮ್‌ ಅಲ್ಲ, ನಾವೀಗ ಬಿಎಸ್ ವೈ, ಬಿಜೆಪಿ ಟೀಮ್'


ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ ಸಚಿವ ರಮೇಶ್ ಜಾರಕಿಹೊಳಿಯಿಂದಲೇ ನಡೆದಿದೆಯಾ ಸರ್ಕಾರ ಕೆಡವಲು ಪ್ರಯತ್ನ.? ಎಂಬ ಅನುಮಾನವೂ ಹುಟ್ಟಿಕೊಂಡಿದೆ.


ಅಕ್ರಮ ಗಣಿಗಾರಿಕೆಗೆ ಸಿಎಂ ಯಡಿಯೂರಪ್ಪ ಕುಮ್ಮಕ್ಕು: Siddaramaiah


ಈ ಕುರಿತು ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಯಾವುದೇ ರಾಜಕೀಯ ಸಭೆಯಲ್ಲ, ಈ ಹಿಂದೆ ಎತ್ತಿನಹೊಳೆ ಯೋಜನೆ ಕುರಿತು ನಡೆಸಲಾದ ಸಭೆ ಅದರ ಮುಂದುವರಿದ ಭಾಗವಾಗಿ ಖಾಸಗಿ ರೆಸಾರ್ಟ್ ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಯಿತು ಎಂದ ಅವರು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ಕೊಟ್ಟಿಲ್ಲ ನನ್ನ ಇಲಾಖೆಯ ಅಧಿಕಾರಿಗಳೋಂದಿಗೆ ಸಭೆ ನಡೆಸಲಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.


JDS: ಕುಮಾರಸ್ವಾಮಿ ಬೇಡಿಕೆ ಈಡೇರಿಸಲು ಮುಂದಾದ ಸಿಎಂ ಯಡಿಯೂರಪ್ಪ..!


ಮಾಜಿ ಮುಖ್ಯಮಂತ್ರಿ ಎಸ್.ಎಮ್‌ ಕೃಷ್ಣ ಅವರ ರಾಜಕೀಯ ಗುರುಗಳ ಮಾಲೀಕತ್ವದಲ್ಲಿ ಇರುವ ರೆಸಾರ್ಟ್ ನಲ್ಲಿ ಸಭೆ ನಡೆಸಲಾಯಿತು ಈ ಕುರಿತು ಮಾಧ್ಯಮದವರು ಗೊಂದಲ ಸೃಷ್ಟಿಸಬೇಡಿ ಎಂದು ಹೇಳಿದರು.


Karnataka State Police Recruitment 2021: 545 PSI ಹುದ್ದೆಗಳಿಗೆ ಅರ್ಜಿ ಆಹ್ವಾನ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.