ಕೊಪ್ಪಳ‌: ಬಿಜೆಪಿ‌ ಟಿಕೆಟ್‌‌‌ ಕೊಡಿಸಲು ಹಲವರಿಂದ ಹಣ ಪಡೆದು ವಂಚಿಸಿರುವ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ ಅವರದ್ದೇ ಪಕ್ಷದ ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಹುದ್ದೆಗೆ ಎರಡೂವರೆ ಸಾವಿರ ಕೋಟಿ ಹಾಗೂ ಮಂತ್ರಿ ಹುದ್ದೆ ಪಡೆಯಲು 80 ಕೋಟಿ ನಿಗದಿಯಾಗಿತ್ತು ಎಂದು ಹೇಳಿಕೆ ನೀಡಿದ್ದರು. ಇದೀಗ ಚೈತ್ರಾ ಬಂಧನದ ಬಳಿಕ ಅದು ದೃಢಪಟ್ಟಿದೆ. ಶಾಸಕ ಸ್ಥಾನಕ್ಕೆ ಏಳೇಂಟು ಕೋಟಿ ಹಣ ನಿಗದಿಯಾಗಿರುವುದು ಇದೀಗ ಹೊರ ಬಿದ್ದಿದೆ. ಆ ಪಕ್ಷದ ಲೋಕಸಭಾ ಸದಸ್ಯರ ಟಿಕೆಟ್ ಕೂಡ ಮಾರಾಟಕ್ಕಿದೆ ಎಂದು ಛೇಡಿಸಿದರು. 


COMMERCIAL BREAK
SCROLL TO CONTINUE READING

ಟೆಂಡರ್ ಕರೆಯದ ಕಾರಣ ಇನ್ನು ಕೂಡ ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ. ಟೆಂಡರ್ ನಲ್ಲಿ ಹೆಚ್ಚು ಯಾರು ಬಿಡ್ ಮಾಡಲಿದ್ದಾರೆಯೋ ಅವರಿಗೆ ವಿಪಕ್ಷ ನಾಯಕನ ಹುದ್ದೆ ಲಭಿಸಬಹುದು ಎಂದು ವ್ಯಂಗ್ಯವಾಡಿದರು. 


ಇದನ್ನೂ ಓದಿ: ಕಾವೇರಿ ನೀರು:ಯಡಿಯೂರಪ್ಪನವರದ್ದು ರಾಜಕೀಯ ಹೇಳಿಕೆ-ಸಿಎಂ ಸಿದ್ದರಾಮಯ್ಯ 


ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಗೆ ಯಾವುದೇ ನಷ್ಟ ಇಲ್ಲ. ಬದಲಿಗೆ ಆ ಪಕ್ಷಗಳ ಮೈತ್ರಿಯಿಂದ ಕಾಂಗ್ರೆಸ್ ಗೆ ಅನುಕೂಲವಾಗಲಿದೆ. ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುವ‌ ಜೆಡಿಎಸ್ ನಾಯಕರು ಕೋಮುವಾದಿ ಪಕ್ಷದ ಜತೆ ಕೈಜೋಡಿಸಲು ಮು‌ಂದಾಗಿದ್ದಾರೆ. ಮುಂದೆ ಜನತೆ ಈ ಎರಡು ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. 


ಬರಗಾಲದ ಘೋಷಣೆ ಮತ್ತು ಪರಿಹಾರಕ್ಕೆ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020ರ ಮಾನದಂಡಗಳಲ್ಲಿನ‌ ಸಮಸ್ಯೆಗಳ ಕಾರಣದಿಂದಾಗಿ ವಿಳಂಬವಾಗಿದೆ.  ಮಾನದಂಡಗಳನ್ನು ಸಡಿಲಿಕೆ ಮಾಡುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಮಾನದಂಡಗಳನ್ನು ಬದಲಾವಣೆ ಮಾಡದಿದ್ದರೆ ಬರಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯ ನಡೆಸಿ ನೊಂದ ಜನರಿಗೆ ನೆರವಾಗಲು ಸಾಧ್ಯವಾಗುವುದಿಲ್ಲ ಎಂದರು.


ಹೀಗಾಗಿ ಪರಿಹಾರ ವಿತರಣೆ ಸಂಬಂಧ ವಿಧಿಸಲಾಗಿರುವ ಮಾನದಂಡವನ್ನು ಸಡಿಲಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರೈತರ ವಿಚಾರದಲ್ಲಿ ಯಾರು ಕೂಡ ರಾಜಕಾರಣ ಮಾಡಬಾರದು. ಪರಿಹಾರ ವಿತರಣೆ ವಿಚಾರದಲ್ಲಿ ಮಾನದಂಡಗಳನ್ನು ಸಡಿಲಗೊಳಿಸುವ ಸಂಬಂಧ ಬಿಜೆಪಿಯ 25 ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಲಿ ಎಂದು ಸಚಿವ ಶಿವರಾಜ್ ತಂಗಡಗಿ ಆಗ್ರಹಿಸಿದರು.‌


ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಉತ್ಸವ 2023: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ..! 


ಕೊಪ್ಪಳ ಜಿಲ್ಲೆಯ ಏಳು ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದ್ದು, ಪರಿಹಾರ ವಿತರಣೆ ಮಾಡುವ ಬಗ್ಗೆ ಜಿಲ್ಲೆಯ ಜಿಲ್ಲಾಧಿಕಾರಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಅವರೊಂದಿಗೆ  ಚರ್ಚೆ ನಡೆಸಲಾಗಿದೆ. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸಮೀಕ್ಷೆ ನಡೆಸಿ ಹೀಗಾಲೇ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.