ಬೆಂಗಳೂರು: ಅನೇಕ ದಿನಗಳಿಂದ ರಾಜ್ಯದ ರೈತರು ಇಟ್ಟಿದ್ದ ಬೇಡಿಕೆ ಇದೀಗ ಈಡೇರುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಹೌದು ರಾಜ್ಯದ ಸುಮಾರು 33 ಲಕ್ಷ ರೈತರಿಗೆ ಬರೋಬ್ಬರಿ 24 ಸಾವಿರ ಕೋಟಿ ರೂ. ಸಾಲವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಹಕಾರ ಸಚಿವ ಎಸ್​ಟಿ ಸೋಮಶೇಖರ್ ಘೋಷಣೆ ಮಾಡಿದ್ದಾರೆ. ಮುಖ್ಯವಾಗಿ ಇದರಲ್ಲಿ 3 ಲಕ್ಷ ಹೊಸ ರೈತರು ಸೇರ್ಪಡೆಗೊಳ್ಳಲಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆ್ಯಂಕರ್​ ಅನುಶ್ರೀಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ನಟ ಶಿವರಾಜ್‌ ಕುಮಾರ್‌!


ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು "ಅಕ್ಟೋಬರ್ 2ರಿಂದ ಯಶಸ್ವಿನಿ ಯೋಜನೆ ಜಾರಿಯಾಗುವ ಎಲ್ಲಾ ಸಾಧ್ಯತೆಯಿದೆ. ಈ ಮೂಲಕ ಮತ್ತೆ ಯೋಜನೆ ಪ್ರಾರಂಭವಾಗಲಿದ್ದು, ಎಲ್ಲಾ ತಯಾರಿಯನ್ನು ಮಾಡಲಾಗಿದೆ" ಎಂದರು. 


ರೈತರಿಗೆ ಮಾತ್ರವಲ್ಲ ಹಾಲು ಮಾರಾಟಗಾರರು, ಮಹಿಳೆಯರು ಸೇರಿದಂತೆ ಅನೇಕರಿಗೆ ಪ್ರಯೋಜನವಾಗುವಂತಹ ಯೋಜನೆಗಳನ್ನು ಆರಂಭಿಸುವ ಯೋಜನೆ ಇದೆ ಎಂದರು. ಹಾಲು ಉತ್ಪಾಕರಿಗಾಗಿ ಕ್ಷೀರ ಸಹಕಾರ ಬ್ಯಾಂಕ್ ಪ್ರಾರಂಭಿಸುವ ಪ್ಲ್ಯಾನ್‌ ಇದೆ. ಜೊತೆಗೆ 9 ಲಕ್ಷ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವ ಉದ್ದೇಶವೂ ಇದೆ ಎಂದು ಹೇಳಿದರು.


ಇನ್ನುಇದೇ ವೇಳೆ ಜೆಡಿಎಸ್‌ ನಾಯಕ ಹೆಚ್​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಮಾತನಾಡುವಾಗ ಸ್ವಲ್ಪ ಘನತೆಯಿಂದ ಮಾತಾಡಲಿ. ಆರ್​ಎಸ್​ಎಸ್​ನವರಿಗೆ ಶೇ.40 ಕಮಿಷನ್ ಕೊಡುತ್ತಾರೆ ಅಂದರೆ ಏನು ಅರ್ಥ?. ದೇಶಭಕ್ತ ಸಂಘಟನೆ ಆರ್​ಎಸ್​ಎಸ್​ ಬಗ್ಗೆ ಮಾತನಾಡುವುದು ಸರಿಯಲ್ಲ" ಎಂದು ಗುಡುಗಿದರು. 


​ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಪಾಸಾಗಿದಕ್ಕೆ ತನ್ನನ್ನು ತಾನು ಅಭಿನಂದಿಸಿ ಪೋಸ್ಟರ್‌ ಹಾಕಿದ ಬಾಲಕ!


"ಕುಮಾರಸ್ವಾಮಿ ಸಂಪೂರ್ಣ ಹತಾಶರಾಗಿದ್ದಾರೆ. ಇದೇ ಕಾರಣಕ್ಕೆ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವಾಗ ಸ್ವಲ್ಪ ವಿಚಾರಿಸಿಕೊಳ್ಳಬೇಕು" ಎಂದರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.