ಬೆಂಗಳೂರು: ಕೊರೋನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದ ಹಾಲಿ ಪರಿಸ್ಥಿತಿ ನಿರ್ವಹಣೆಗೋಸ್ಕರ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಿಗೆ ಸಹಕಾರ ಇಲಾಖೆ ವತಿಯಿಂದ ಸಚಿವ  ಎಸ್.ಟಿ. ಸೋಮಶೇಖರ್ (ST Somashekhar) 85 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರಿಸಿದರು.


ನಾನು ರಾಜಕಾರಣ ಮಾಡಲು ಬಂದಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವೆ: ಎಸ್.ಟಿ. ಸೋಮಶೇಖರ್


COMMERCIAL BREAK
SCROLL TO CONTINUE READING

ಈ ಮೂಲಕ ಸಹಕಾರ ಇಲಾಖೆ ವತಿಯಿಂದ ಒಟ್ಟಾರೆ 50.50 ಕೋಟಿ ರೂಪಾಯಿಯನ್ನು ನೀಡಿದಂತಾಗಿದೆ. ರಾಜ್ಯದ ಎಲ್ಲಾ ಸಹಕಾರ ಇಲಾಖೆಗಳಿಂದ ದೇಣಿಗೆಯನ್ನು ಸ್ವೀಕರಿಸಿ ಬರೋಬ್ಬರಿ 50.50 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಸಂಗ್ರಹಿಸಿ ಕೊಡಲಾಗಿದೆ. ಈ ನಿಟ್ಟಿನಲ್ಲಿ ಕೊರೋನಾ ಮುಕ್ತ ರಾಜ್ಯಕ್ಕೆ ಕೊಡುಗೆ ನೀಡಿದ್ದೇವೆ ಎಂದು ಸಚಿವರಾದ ಎಸ್.ಟಿ. ಸೋಮಶೇಖರ್ ಹೇಳಿದರು.


ಮೈಸೂರು ZOOಗೆ 73.16 ಲಕ್ಷ ರೂ.ಗಳ ಚೆಕ್ ನೀಡಿದ ಸಚಿವ ಎಸ್.ಟಿ. ಸೋಮಶೇಖರ್


ಮುಖ್ಯಮಂತ್ರಿಗಳ ಪ್ರಶಂಸೆ
ಸಹಕಾರ ಇಲಾಖೆಯೊಂದರಿಂದಲೇ ದಾಖಲೆ ಪ್ರಮಾಣದ (50.50 ಕೋಟಿ ರೂಪಾಯಿ) ಹಣವನ್ನು ಸಂಗ್ರಹಿಸಿ ಕೊಟ್ಟಿರುವುದು ಸಂತಸದ ವಿಚಾರ. ಇದರಿಂದ ರಾಜ್ಯದ ಜನತೆಯ ಸೇವೆಗೆ ಅನುಕೂಲವಾದಂತಾಗಿದೆ ಎಂದು ಸಚಿವರ ಕಾರ್ಯವೈಖರಿ ಹಾಗೂ ಬದ್ಧತೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಹಕಾರ ಸಚಿವ ಎಸ್.ಟಿ.‌ ಸೋಮಶೇಖರ್ ಅವರನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಸಹಕಾರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕಾ ದೇವಿ ಮತ್ತಿತರರು ಉಪಸ್ಥಿತರಿದ್ದರು.