ಬೆಂಗಳೂರು : ಪಡಿತರ ಚೀಟಿ ಅಕ್ಕಿ ಕೇಳಿದ ರೈತನಿಗೆ 'ಸತ್ತು ಹೋಗು' ಎಂದು ಹೇಳುವ ಮೂಲಕ ಆಹಾರ ಸಚಿವ ಉಮೇಶ ಕತ್ತಿ ದುರಹಂಕಾರ ಮೆರೆದಿದ್ದಾರೆ.


COMMERCIAL BREAK
SCROLL TO CONTINUE READING

ಲಾಕ್ ಡೌನ್ ಕಾರಣ ಹೇಳಿ ಪಡಿತರ ಅಂಗಡಿಗಳಲ್ಲಿ ಕಡಿಮೆ ಅಕ್ಕಿ ನೀಡುತ್ತಿದ್ದಾರೆ. ಹೀಗಾದರೆ ಹೇಗೆ? ಎಂದು ಈಶ್ವರ ಎನ್ನುವ ರೈತ ಸಚಿವ ಉಮೇಶ ಕತ್ತಿ(Umesh Katti)ಯವರಿಗೆ ಕರೆ ಮಾಡಿ ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಸಚಿವರು 'ಸತ್ತು ಹೋಗು ನನಗೆ ಕರೆ ಮಾಡಬೇಡ ಎಂದು  ದೌಲತ್ತು ಪ್ರದರ್ಶಿಸಿದ್ದಾರೆ.


ಇದನ್ನೂ ಓದಿ : Online Classes : ಕಾಲೇಜು ವಿದ್ಯಾರ್ಥಿಗಳಿಗೆ ಮೇ 12 ರವರೆಗೆ ಆನ್‌ಲೈನ್ ಕ್ಲಾಸ್..!


ಸಚಿವ ಉಮೇಶ ಕತ್ತಿಯವರ ಈ ದರ್ಪಕ್ಕೆ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಸದ್ಯ 14 ದಿನಗಳ ಕಠಿಣ ಲಾಕ್ ಡೌನ್(Lockdown) ಜಾರಿಯಾಗಿದೆ. ಇದರಿಂದ ಜನರಿಗೆ ಕೆಲಸವಿಲ್ಲ ಅಂತದರಲ್ಲಿ ಪಡಿತರ ಅಂಗಡಿಗಳಲ್ಲಿ ಕಡಿಮೆ ರೇಷನ್ ನೀಡಿದರೆ  ಜನರ ಗತಿ ಏನಾಗಬೇಡ? ಈ ರೀತಿ ನಡೆದು ಕೊಳ್ಳುವುದು ಎಷ್ಟು ಸರಿ. 


ಇದನ್ನೂ ಓದಿ : R Ashok : 'ಮೇ 12 ರ ಬಳಿಕೆ ಅಗತ್ಯಬಿದ್ದರೆ ರಾಜ್ಯದಲ್ಲಿ ಕರ್ಪ್ಯೂ ವಿಸ್ತರಿಸಲಾಗುವುದು'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.